Ad Widget .

ತನ್ನ ತಲೆಗೆ ಬಹುಮಾನ ಘೋಷಿಸಿದ ಸ್ವಾಮೀಜಿಗೆ ಉದಯನಿಧಿ ಕೊಟ್ಟ ಉತ್ತರ ಹೇಗಿತ್ತು ಗೊತ್ತೇ? ಈ ಸ್ಟೋರಿ ಓದಿ…

ಸಮಗ್ರ ನ್ಯೂಸ್: ತಮಿಳುನಾಡು ಸಚಿವ ಮತ್ತು ಚಲನಚಿತ್ರ ನಟ ಉದಯನಿಧಿ ಸ್ಟಾಲಿನ್ ಎರಡು ದಿನಗಳಿಂದ ಹಿಂದೆ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆಗಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಸಚಿವ ಉದಯನಿಧಿ ಸ್ಟಾಲಿನ್ ಕೋವಿಡ್, ಮಲೇರಿಯಾ ಹಾಗೂ ಡೆಂಘಿ ವೈರಸ್​ನಂತೆ ಸನಾತನ ಧರ್ಮ ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.

Ad Widget . Ad Widget .

ಇದಕ್ಕೆ ವ್ಯತಿರಿಕ್ತವಾಗಿ ಅಯೋಧ್ಯಾ ಸ್ವಾಮೀಜಿ ಪರಮಹಂಸ ಆಚಾರ್ಯ ಉದಯನಿಧಿ ಸ್ಟಾಲಿನ್ ಅವರ ತಲೆ ಕತ್ತರಿಸಿ ನನಗೆ ತಂದುಕೊಟ್ಟರೆ 10 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಈಗ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಸನಾತನ ಧರ್ಮದ ಬಗ್ಗೆ ಕೀಳಾಗಿ ಮಾತನಾಡಿದವರ ತಲೆ ಕಡಿಯಲು 10 ಕೋಟಿ ರೂಪಾಯಿ ಸಾಲದು ಎಂದಾದರೆ ಮತ್ತಷ್ಟು ಸೇರಿಸಿ ಕೊಡುವುದಾಗಿ ಆಫರ್​ ನೀಡಿದ್ದರು.

Ad Widget . Ad Widget .

ಇದಕ್ಕೆ ಉದಯನಿಧಿ ಸ್ಟಾಲಿನ್​ ಪ್ರತಿಕ್ರಿಯೆ ನೀಡಿದ್ದು, ಇಂತಹ ಹೇಳಿಕೆಗಳಿಗೆ ನಾನು ಹೆದರುವುದಿಲ್ಲ ಮತ್ತು ನನ್ನ ಅಜ್ಜ ಕರುಣಾನಿಧಿ ಅವರ ಹಾದಿಯಲ್ಲಿ ನಾನು ಸಾಗುತ್ತಿದ್ದೇನೆ, ಅವರಿಗೂ ಕೂಡ ಇಂತಹ ಅನೇಕ ಬೆದರಿಕೆಗಳು ಬಂದಿದ್ದವು ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ನಂತರ, ಇಂತಹ ಟೀಕೆಗಳು ಬರುತ್ತವೇ ಎಂಬುದು ನನಗೆ ತಿಳಿದಿತ್ತು, ಅಂದು ಕೊಂಡಂತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇಂದು ಒಬ್ಬ ಸಂತ ನನ್ನ ತಲೆಗೆ ಬಹುಮಾನವನ್ನು ಘೋಷಿಸಿದ್ದಾರೆ. ಉದಯನಿಧಿ ಅವರ ತಲೆಯನ್ನು ಕತ್ತರಿಸುವವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಹೇಳಿದ್ದಾರೆ. ಇವನನ್ನು ಸಾಧು ಎಂದು ಯಾರು ಹೇಳಿದರೂ ಅಂತಾ ನಾನು ಕೇಳುತ್ತೇನೆ, ನನ್ನ ತಲೆಯಲ್ಲಿ ಆತನಿಗೇನು ಪ್ರೀತಿ? ನೀವೊಬ್ಬ ಸಂತ, ಆದರೆ ನಿಮ್ಮ ಬಳಿ 10 ಕೋಟಿ ರೂಪಾಯಿ ಹೇಗೆ ಸಾಧ್ಯ? ನೀವು ನಿಜವಾದ ಸಂತರೇ ಅಥವಾ ನಕಲಿ ಸಂತರೇ? ನನಗೆ ನಿಮ್ಮ ಮೇಲೆ ಅನುಮಾನವಿದೆ. ನನ್ನ ತಲೆ ಕಡಿಯಲು 10 ಕೋಟಿ ಏಕೆ? ಒಂದು ಬಾಚಣಿಗೆಗೆ 10 ರೂಪಾಯಿ ಕೊಟ್ಟರೆ ನಾನೇ ನನ್ನ ಕೂದಲನ್ನು ಬಾಚಿಕೊಳ್ಳಬಲ್ಲೆ ” ಎಂದರು.

Leave a Comment

Your email address will not be published. Required fields are marked *