Ad Widget .

ಸುಳ್ಯ: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಆರಂಬೂರು ಘಟಕ ಸಮಿತಿ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ

ಸಮಗ್ರ ನ್ಯೂಸ್: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಸುಳ್ಯ ಸಂಪಾಜೆ ವಲಯ ಆರಂಬೂರು ಘಟಕ ಸಮಿತಿ ವತಿಯಿಂದ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಸೆ.6 ಬುಧವಾರದಂದು ಶ್ರೀ ಮೂಕಾಂಬಿಕಾ ಸಭಾ ಭವನದಲ್ಲಿ ನಡೆಯಿತು.

Ad Widget . Ad Widget .

ರತ್ನಕರ ರೈ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಪಿ.ಆರ್.ಒ.ಸಯ್ಯದ್, ಚಂದ್ರಶೇಖರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಆರಂಬೂರ್ ಒಕ್ಕೂಟ, ಘಟಕ ಸಮಿತಿ ಅಧ್ಯಕ್ಷರು ಗೋಪಾಲ ಕೃಷ್ಣ, ಎಸ್.ಡಿ.ಎಮ್.ಸಿ ಅಧ್ಯಕ್ಷರು ರಮೇಶ್ ಅರಂಬೂರು, ಅಂಬಿಕಾ ಮಹಿಳಾ ಮಂಡಲ ಅಧ್ಯಕ್ಷೆ ಅಮಿತಾ ರೈ, ಸುಳ್ಯ ತಾಲೂಕು ಮೇಲ್ವಿಚಾರಕಿ ಗೀತಾ ನೆಟ್ಟಾರು, ಯೋಜನಾ ಸಿಬ್ಬಂದಿಗಳು, ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪರಮೇಶ್ವರ್ ಕುಲಾಲ್ ಸ್ವಾಗತಿಸಿ, ಸುರೇಶ್ ನಿರೂಪಿಸಿ, ಪುಷ್ಪಾರಾಜ್ ವಂದಿಸಿದರು.

Ad Widget . Ad Widget .

Leave a Comment

Your email address will not be published. Required fields are marked *