ಕೊಟ್ಟಿಗೆಹಾರ: ಕುವೆಂಪು ಕಲಾಮಂದಿರದಲ್ಲಿ ತೇಜಸ್ವಿಯವರ ‘ಅಣ್ಣನ ನೆನಪು ನಾಟಕ’

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸೆಪ್ಟೆಂಬರ್ 9 ರಂದು ಸಂಜೆ 6 ಗಂಟೆಗೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಆಧಾರಿತ ಅಣ್ಣನ ನೆನಪು ನಾಟಕ ನಡೆಯಲಿದೆ.

Ad Widget ... ..

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಅಣ್ಣನ ನೆನಪು ನಾಟಕ ನಡೆಯಲಿದ್ದು, ಬೆಂಗಳೂರಿನ ಪ್ರವರ ಥಿಯೇಟರ್ ಪ್ರಸ್ತುತ ಪಡಿಸುತ್ತಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಹನು ರಾಮಸಂಜೀವ, ರಂಗರೂಪ ಕರಣಂ ಪವನ್ ಪ್ರಸಾದ್, ಸಂಗೀತ-ಅಕ್ಷಯ್ ಭೊಂಸ್ಲೆ ಅವರದಾಗಿದೆ.

Ad Widget

ನಾಟಕಕ್ಕೆ ಪ್ರವೇಶ ಉಚಿತವಿದ್ದು ನಾಟಕದ ಕುರಿತ ಹೆಚ್ಚಿನ ಮಾಹಿತಿಗೆ 0826320012 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *