ಮೈಸೂರು:ಹುಲಿ ದಾಳಿಗೆ 9 ವರ್ಷದ ಬಾಲಕ ಬಲಿ

ಸಮಗ್ರ ನ್ಯೂಸ್: 9 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿರುವ ಘಟನೆ‌ ಸೆ. 4ರಂದು ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

Ad Widget ... ..

ಕೃಷ್ಣ ನಾಯಕ್ ಮತ್ತು ಮಹಾದೇವಿಬಾಯಿ ದಂಪತಿ ಪುತ್ರ ಚರಣ್‌ ನಾಯಕ್‌(9) ಸಿದ್ದಾಪುರ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದ ಬಾಲಕ ಹುಲಿಯ ಬಾಯಿಗೆ ಬಲಿಯಾಗಿದ್ದಾನೆ.

Ad Widget

ಮಧ್ಯಾಹ್ನದ ಬಳಿಕ ಶಾಲೆಗೆ ರಜೆ ಇದ್ದ ಕಾರಣ ಚರಣ್ ಜಮೀನಿನಲ್ಲಿದ್ದ ತಂದೆ-ತಾಯಿ ಬಳಿಗೆ ಹೋಗಿದ್ದನು. ಬಿರು ಬಿಸಿಲು ಇದ್ದ ಕಾರಣ ಮಗನನ್ನು ಮರದ ನೆರಳಲ್ಲಿ ಕೂರುವಂತೆ ಹೇಳಿ ಹೊಲದಲ್ಲಿ ಕೊಯ್ಲು ಮಾಡುತ್ತಿದ್ದರು. ಈ ವೇಳೆ ಹುಲಿ ಬಾಲಕ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಮಗ ಕಾಣದೆ ಇದ್ದುದನ್ನು ಗಮನಿಸಿದ ಪೋಷಕರು ಹುಡುಕಾಡಿದಾಗ ಬಾಲಕನ ದೇಹ ರಕ್ತದ ಮಡುವಿನಲ್ಲಿ ಇರುವುದು ಕಂಡುಬಂದಿದೆ.

Leave a Comment

Your email address will not be published. Required fields are marked *