ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಲು ಸಿಎಂ ಗೆ ಮನವಿ ಮಾಡಿದ ಕರಾವಳಿಯ ಬಿಜೆಪಿ ಶಾಸಕರು

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರದ ಮೂಲಕ ಕರಾವಳಿಯ ಬಿಜೆಪಿ ಶಾಸಕರು ಮನವಿ ಮಾಡಿದರು.

Ad Widget ... ..

ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಶಾಸಕರುಗಳು ಸೇರಿ ಸಿಎಂ ಅವರನ್ನು ಬೇಟಿ ಮಾಡಿದರು. ಬಳಿಕ ಮಾತನಾಡಿದ ಸಿಎಂ ಸಿದ್ಧರಾಮಯ್ಯರವರು ‘ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಲು ರಾಜ್ಯ ಸರಕಾರಕ್ಕೆ ಕಾನೂನಿನಲ್ಲಿ ಅವಕಾಶವಿರುವುದಿಲ್ಲ’ ಎಂದು ಸ್ಪಷ್ಟೀಕರಣ ಮಾಡಿದರು.

Ad Widget

ಈಗಾಗಲೇ ಈ ವಿಷಯದ ಕುರಿತು ಸೌಜನ್ಯ ಪೋಷಕರಲ್ಲಿ ಮಾತನಾಡಿದ್ದೇನೆ. ನಾನು ಕಾನೂನು ಸಲಹೆಯನ್ನು ಪಡೆದಿರುವುದರಿಂದ ಸೌಜನ್ಯಳ ಪೋಷಕರು ಮೇಲ್ಮನವಿ ಸಲ್ಲಿಸಬಹುದು ಅಥವಾ ಸಿಬಿಐ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಈಗ ನೀವುಗಳು ಬಂದಿರುವುದರಿಂದ ಮತ್ತೊಮ್ಮೆ ನಾನು ಕಾನೂನು ಸಲಹೆ ಪಡೆಯುವುದಾಗಿ ತಿಳಿಸಿದರು.

Leave a Comment

Your email address will not be published. Required fields are marked *