Ad Widget .

ಪೆರಾಜೆ: ಪತಿ ಮೃತಪಟ್ಟ 28 ದಿನದಲ್ಲಿ ಪತ್ನಿ ಆತ್ಮಹತ್ಯೆ

ಸಮಗ್ರ ನ್ಯೂಸ್:‌ ಪತಿ ಮೃತಪಟ್ಟ 28 ದಿನದಲ್ಲಿ ಪತ್ನಿ ಆತ್ಮಹತ್ಯೆ ಶರಣಾದ ಘಟನೆ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಹೊದ್ದೆಟ್ಟಿಯಲ್ಲಿ ಸೆ.4ರಂದು ನಡೆದಿದೆ.

Ad Widget . Ad Widget .

ಮೃತ ಮಹಿಳೆಯನ್ನು ರೂಪಾ(30) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯವರಾಗಿದ್ದು ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕ ದಿನೇಶ ಎಂಬರಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಪತಿ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಇದೀಗ ಈಕೆ ಗಂಡ ಮೃತಪಟ್ಟ ಕಾರಣ ಮನನೊಂದು ಸ್ನಾನದ ಕೊಠಡಿಯಲ್ಲಿ ಚೂಡಿದಾರ ಶಾಲು ಬಳಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ಅನುಮಾನ ಬಂದು ತಂದೆ ತಾಯಿ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಸೆ.5 ಮರಣೋತ್ತರ ಪರೀಕ್ಷೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *