“ಹಸು, ಕರು ಎರಡೂ ಉಳಿಯಲಿ; ಪಟ್ಟದ ವ್ಯಕ್ತಿಯಾದ ಹೆಗ್ಗಡೆಯವರೇ ಅಣ್ಣಪ್ಪನ ನಡೆಯಲ್ಲಿ ಪ್ರಮಾಣ ಮಾಡಿ” – ಬೆಳ್ತಂಗಡಿಯಲ್ಲಿ ತಮ್ಮಣ್ಣ ಶೆಟ್ಟಿ ಆಗ್ರಹ

ಸಮಗ್ರ ನ್ಯೂಸ್: ‘ ಸೌಜನ್ಯ ಪರ ದನಿ ನಭೋ ಮಂಡಲ ವ್ಯಾಪ್ತಿಯಲ್ಲಿ ವ್ಯಾಪಿಸಿದೆ. ಕಾಲ ಮಿಂಚಿಹೋಗಿದೆ. ನೀವೇ ಮಡಿಬಟ್ಟೆಯಲ್ಲಿ ನಿಂತು ಅಣ್ಣಪ್ಪನ ಸನ್ನಿಧಿಯಲ್ಲಿ ನಮ್ಮ ತಪ್ಪಿಲ್ಲ ಎಂದು ಪ್ರಮಾಣ ಮಾಡಿ’ ಎಂದು ಜಾನಪದ ವಿದ್ವಾಂಸ ತಮ್ಮಣ್ಣ ಶೆಟ್ಟಿ ಆಗ್ರಹಿಸಿದ್ದಾರೆ.

Ad Widget ... ..

ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆ ಹಾಗೂ ರಾಷ್ಟ್ರೀಯ ಹಿಂ.ಜಾ ವೇದಿಕೆಯ ವತಿಯಿಂದ ನಡೆದ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಕಾರ್ಯಕ್ರಮದಲ್ಲಿ ಮಾತನಾಡಿದರು.

Ad Widget

‘ಧರ್ಮನಡೆಯಲ್ಲಿ ಕಳಂಕವನ್ನು ಹೊತ್ತು ಇರುವುದು ತಪ್ಪು. ತುಳುನಾಡಿನಲ್ಲಿ ದೈವನಂಬಿಕೆಯಲ್ಲಿ ಯಾವುದೇ ಸಾಕ್ಷಿ ನಾಶವಾಗಿಲ್ಲ. ಸಾಕ್ಷ ನಾಶ ಮಾಡಿದವರು ಯಾವುದೇ ಕಾರಣಕ್ಕೂ ಉಳಿಯಲ್ಲ. ತಪ್ಪು ಮಾಡಿದವರು ಶಿಕ್ಷೆಗೆ ತಯಾರಾಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Leave a Comment

Your email address will not be published. Required fields are marked *