Ad Widget .

ಸೌಜನ್ಯ ಪ್ರಕರಣದ ತನಿಖಾಧಿಕಾರಿಯನ್ನು ಒಂದು ದಿನ ನಮಗೆ ಕೊಡಿ; ಸತ್ಯವನ್ನು ನಾವು ಕಕ್ಕಿಸುತ್ತೇವೆ| ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕಿಡಿ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ವ್ಯಕ್ತಿಗಳನ್ನು ಒಂದು ದಿನ ನಮಗೆ ಕೊಡಿ, ಅವರ ಕುಂಡಿಗೆ ಬಡಿಗೆ ಹಾಕಿ ಸತ್ಯವನ್ನು ಕಕ್ಕಿಸುತ್ತೇವೆ ಎಂದು ಶ್ರೀರಾಮ ಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

Ad Widget . Ad Widget .

ಬೆಳ್ತಂಗಡಿಯಲ್ಲಿ ಪ್ರಜಾಪ್ರಭುಥವ ವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಿದ್ದ ಸೌಜನ್ಯಳ ನ್ಯಾಯಕ್ಕಾಗಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತಿನ ಪ್ರಹಾರ ಹರಿಸಿದರು.

Ad Widget . Ad Widget .

‘ಸೌಜನ್ಯ ಕೇವಲ ಹೆಣ್ಣಲ್ಲ. ಆಕೆ ಒಂದು ಶಕ್ತಿಯಾಗಿದ್ದಾಳೆ. ಯಾರೋ ಮಾಡಿದ ಖಚಡಾ ಕೆಲಸಕ್ಕೆ ನಾವೆಲ್ಲ ಇಂದು ಬೀದಿಗೆ ಬಂದು ಆಕ್ರೋಶ ವ್ಯಕ್ತಪಡಿಸಬೇಕಾಗಿದೆ. ಈ ಹೋರಾಟ ರಾಜ್ಯ, ರಾಷ್ಟ್ರ ವ್ಯಾಪ್ತಿಯಲ್ಲಿ ನಡೆಯಲಿದ್ದು, ಮುಂದೊಮ್ಮೆ ರಾಜ್ಯದಲ್ಲಿ ಸೌಜನ್ಯಳ ಕಿಚ್ಚು ಹೊತ್ತಿ ಉರಿಯುವುದು ನಿಶ್ಚಿತ. ಇದಕ್ಕಾಗಿ ನಾವೆಲ್ಲರೂ ಒಂದಾಗಬೇಕಿದೆ, ಎಂದವರು ಕರೆನೀಡಿದರು.

‘ರಾಜ್ಯ ಸರ್ಕಾರ ಆದಷ್ಟು ಬೇಗ ಮಧ್ಯಸ್ಥಿಕೆ ವಹಿಸಿ‌ ಪ್ರಕರಣವನ್ನು ಮರುತನಿಖೆ ನಡೆಸಬೇಕಿದೆ. ಇದು ಜನತೆಯ ಆಗ್ರಹ’ ಎಂದು ಅವರು ಹೇಳಿದರು.

Leave a Comment

Your email address will not be published. Required fields are marked *