ರಾಜ್ಯಸಭಾ ಸದಸ್ಯರೇ, ಪ್ರಕರಣ ನಿಮ್ಮ ಬಳಿಯೇ ಸುತ್ತುಹಾಕುತ್ತಿರುವಾಗ ಯಾಕೆ ನಿಮ್ಮ ಬಗ್ಗೆ ಮಾತನಾಡಬಾರದು – ಪ್ರಸನ್ನ ರವಿ ಪ್ರಶ್ನೆ

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣದಲ್ಲಿ ಎಲ್ಲಾ ಅನುಮಾನಗಳೂ ನಿಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿರುವಾಗ ನಿಮ್ಮ ಬಗ್ಗೆ ಯಾಕೆ ಪ್ರಶ್ನೆ ಮಾಡಬಾರದು? ಎಂದು ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಪ್ರಶ್ನಿಸಿದ್ದಾರೆ.

Ad Widget ... ..

ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

Ad Widget

ನಕಲಿ ಪತ್ರಕರ್ತರು ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಜೊತೆಗೆ ಸಮಾಜ ಘಾತುಕ ಶಕ್ತಿಗಳೂ ಕೂಡಾ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹೋರಾಟಗಾರ ಹೋರಾಟವನ್ನು ನಿಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ಈ ದೇಶದ ಘೋರ ದುರಂತ.

ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಕೃತ್ಯಗಳು ನಿಜಕ್ಕೂ ಆತಂಕಕಾರಿ. ಯಾರೂ ಯಾರ ಹೆಸರಿಗೂ ಕಳಂಕ ತರುವುದಿಲ್ಲ. ನ್ಯಾಯಕ್ಕಾಗಿ ಹೋರಾಟದಲ್ಲಿ ತಾಕತ್ತಿದ್ದರೆ ನಮ್ಮೊಂದಿಗೆ ಸೇರಿಕೊಳ್ಳಿ ಎಂದು ಪ್ರಸನ್ನ ರವಿ ಆಗ್ರಹಿಸಿದರು.

Leave a Comment

Your email address will not be published. Required fields are marked *