Ad Widget .

ಗೋಧಿ ನುಚ್ಚು ಪಾಯಸ ಮನೆಯಲ್ಲೇ ಸಿಂಪಲ್ ಆಗಿ ಮಾಡೋದ್ ಹೇಗೆ..?|ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಮನೆಯಲ್ಲೇ ಸಿಂಪಲ್ ಆಗಿ ಗೋಧಿ ನುಚ್ಚು ಪಯಾಸ ಮಾಡಬಹುದು. ಸಣ್ಣ ಸಣ್ಣ ಕಾರ್ಯಕ್ರಮದ ಸಂದರ್ಭದಲ್ಲಿ ಅತೀ ಕಡಿಮೆ ಸಮಯದಲ್ಲಿ ಈ ಪಾಯಸವನ್ನು ಮಾಡಬಹುದು. ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.

Ad Widget . Ad Widget .

ಬೇಕಾಗುವ ಪದಾರ್ಥಗಳು:ಗೋಧಿ ನುಚ್ಚು-1 ಬಟ್ಟಲು, ಬೆಲ್ಲ ಅಥವಾ ಸಕ್ಕರೆ-1 ಬಟ್ಟಲು, ಹಾಲು-1 ಬಟ್ಟಲು, ಏಲಕ್ಕಿ ಪುಡಿ-ಅರ್ಧ ಚಮಚ, ದ್ರಾಕ್ಷಿ ಮತ್ತು ಗೋಡಂಬಿ-ಅರ್ಧ ಬಟ್ಟಲು,ತುಪ್ಪ-2 ಚಮಚ, ಕೇಸರಿ ದಳ-2.

Ad Widget . Ad Widget .

ಮಾಡುವ ವಿಧಾನ: ಗೋಧಿ ನುಚ್ಚನ್ನು ಬೆಚ್ಚಗೆ ಹುರಿದು ಕುಕ್ಕರ್‌ನಲ್ಲಿ ಸ್ವಲ್ಪ ಜಾಸ್ತಿ ನೀರು ಹಾಕಿ ಮೆತ್ತಗೆ ಬೇಯಿಸಿ. ನಂತರ ಬೆಲ್ಲವನ್ನು ನೀರು ಹಾಕಿ ಕರಗಿಸಿ ಸೋಸಿ. ಇದನ್ನು ಬೆಂದ ಗೋಧಿ ನುಚ್ಚಿಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ತದನಂತರ ಇದಕ್ಕೆ ಹಾಲು, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ದ್ರಾಕ್ಷಿ, ಹಾಗೂ ಕೇಸರಿ ದಳ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 5-10 ನಿಮಿಷ ಕುದಿಸಿದರೆ ರುಚಿಕರವಾದ ಗೋಧಿ ನುಚ್ಚಿನ ಪಾಯಸ ಸವಿಯಲು ಸಿದ್ಧ.

Leave a Comment

Your email address will not be published. Required fields are marked *