Ad Widget .

ಉಡುಪಿ: ಸಮುದ್ರಕ್ಕೆ ಬಿದ್ದು ಜಾರ್ಕಂಡ್ ಮೂಲದ ಮೀನುಗಾರ ಸಾವು

ಸಮಗ್ರ ನ್ಯೂಸ್: ಮಲ್ಪೆ ಮೀನುಗಾರಿಕಾ ಬಂದರಿನಿಂದ ಎರಡು ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಜಾರಿ ಬಿದ್ದು ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ.

Ad Widget . Ad Widget .

ಜಾರ್ಕಂಡ್ ಮೂಲದ ಮನೋಜ್ ಸಾನ್ (32) ಮೀನು ಹಿಡಿಯುತ್ತಿದ್ದಾಗ ಸಮುದ್ರಕ್ಕೆ ಬಿದ್ದಿದ್ದಾರೆ. ಜೊತೆಗೆ ಬೋಟ್ ನಲ್ಲಿದ್ದ ಕೀರ್ತನ್ ತಕ್ಷಣ ಸಮುದ್ರಕ್ಕೆ ಧುಮುಕಿ ಆತನನ್ನು ಮೇಲಕ್ಕೆ ಕರೆತಂದರೂ ಬಿದ್ದ ರಭಸಕ್ಕೆ ಮನೋಜ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *