ಸಮಗ್ರ ನ್ಯೂಸ್: 2023-24 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಶನಿವಾರ ಪ್ರಕಟಗೊಂಡಿದೆ. ಈ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಮಹಾಂತಯ್ಯ ಎಸ್ ಹೊಸಮಠ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಓರ್ವ ವಿಶೇಷ ಶಿಕ್ಷಕರೂ ಒಳಗೊಂಡಂತೆ) 2023-24 ನೇ ಸಾಲಿಗೆ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು/ಸಹ ಶಿಕ್ಷಕರು/ವಿಶೇಷ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಇಪಿ 308 ಪಿಬಿಎಸ್ 2021, ದಿನಾಂಕ: 12.09.2022 ರ ಅನುಸಾರ ತಲಾ ರೂ. 25,000/- ರಂತೆ, ಒಟ್ಟು ರೂ. 7,75,000/- ಗಳ ನಗದು ಪುರಸ್ಕಾರ ನೀಡಲು ಹಾಗೂ ಸದರಿ ವೆಚ್ಚವನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಬೆಂಗಳೂರು ಇಲ್ಲಿಂದ ಭರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರು
ಶಿವಮೊಗ್ಗದ ಫೌಜಿಯ ಸರವತ್, ಚಿಕ್ಕಬಳ್ಳಾಪುರದ ಮಂಜುನಾಥ್, ದಾವಣಗೆರೆಯ ಬಿ.ಕೆ.ಸತೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಂ.ಜಿ.ಸುಜಾತ, ವಿಜಯಪುರದ ಮಹಮ್ಮದ ಹಾಶೀಮಸಾಬ ಹುಸೇನಸಾಬ ಲಷ್ಕರಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಾಪ ಶಂಕರ ಜೋಡಟ್ಟಿ, ಬಾಗಲಕೋಟೆಯ ಮೊಹಮದ್ ಹುಸೇನ ಅಬ್ದುಲ್ ಖಾದರ ಸೌದಾಗರ, ಬೀದರ್‌ನ ಮಾರ್ತಂಡಪ್ಪ ತೆಳಗೇರಿ, ಶಿರಸಿಯ ಅಕ್ಷತಾ ಅನಿಲ ಬಾಸಗೋಡ, ಧಾರವಾಡದ ಶೇಕಪ್ಪ ಭೀಮಪ್ಪ ಕೇಸರಿ, ಮೈಸೂರಿನ ಭಾಸ್ಕರ, ಹಾಸನದ ಎ.ಬಿ.ಮೂರ್ತಿ, ಬಳ್ಳಾರಿಯ ಎಂ.ಆರ್.ವನಜಾಕ್ಷಮ್ಮ, ರಾಯಚೂರಿನ ಸೈಯದಾ ಸಾಜೀದಾ ಫಾತೀಮಾ, ಮಂಡ್ಯದ ಜಿ.ಪ್ರಶಾಂತ, ಚಾಮರಾಜನಗರ ಜಿಲ್ಲೆಯ ವಿ.ವೀರಪ್ಪ, ತುಮಕೂರಿನ ಎಂ.ಜಿ.ಗಂಗಾಧರ, ಕೊಡಗಿನ ಬಿ.ಟಿ.ಪೂರ್ಣೇಶ್, ಉತ್ತರ ಕನ್ನಡದ ಮಂಜುನಾಥ ಹರಿಕಂತ್ರ, ಹಾವೇರಿಯ ಸೋಮಪ್ಪ ಫಕಿರಪ್ಪ ಕಠಾರಿ. ಉತ್ತರ ಕನ್ನಡದ ಪ್ರಕಾಶ ನಾಯ್ಕ, ಧಾರವಾಡದ ಸುರೇಶ್ ಬಿ.ಮುಗಳಿ, ಚಿತ್ರದುರ್ಗದ ಕೆ.ಟಿ.ನಾಗಭೂಷಣ್, ಮಧುಗಿರಿಯ ಜಿ.ಹೆಚ್.ರೇಣುಕರಾಜ್, ಮಂಡ್ಯದ ಜಿ.ಸಿ.ರಜನಿ, ಕೊಪ್ಪಳದ ಬಸಪ್ಪ ವಾಲಿಕರ, ಬೆಂಗಳೂರಿನ ಪಿ.ಜಿ.ಇಂದಿರಾ, ಶಿವಮೊಗ್ಗದ ವಿಜಯ ಆನಂದರಾವ್, ಮೈಸೂರಿನ ಎಸ್.ಹರ್ಷ, ಉಡುಪಿಯ ನರೇಂದ್ರ, ಚಿಕ್ಕೋಡಿಯ ಶ್ರೀಶೈಲ ಗಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.