Ad Widget .

ಬೆಳ್ತಂಗಡಿ: ಲೋನ್ ಆ್ಯಪ್ ಕಿರುಕುಳಕ್ಕೆ ಬೇಸತ್ತು ಕಬಡ್ಡಿ ಆಟಗಾರ ಆತ್ಮಹತ್ಯೆ!?

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಪುದುವೆಟ್ಟು ನಿವಾಸಿ ಯುವ ಕಬಡ್ಡಿ ಆಟಗಾರ ಸ್ವರಾಜ್(24) ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಲೋನ್ ಆಯಪ್ ಕಿರುಕುಳಕ್ಕೆ ಬೇಸತ್ತು ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Ad Widget . Ad Widget .

ಏನಿದು ಘಟನೆ..?
ಸ್ವರಾಜ್ ತನ್ನ ವಾಟ್ಸಾಪ್ನಲ್ಲಿ ಅಕ್ಕನ ಮಗಳ ಫೋಟೋ ಹಾಕಿದ್ದನು. ಈ ಫೋಟೋವನ್ನು ಲೋನ್ ಆಯಪ್ನವರು ಎಡಿಟ್ ಮಾಡಿ ಮಾರಾಟಕ್ಕಿದೆ ಎಂದು ಸ್ವರಾಜ್ ಸ್ನೇಹಿತರು, ಹಾಗೂ ಆತನ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫಾರ್ವರ್ಡ್ ಮಾಡಲಾಗಿತ್ತು.

Ad Widget . Ad Widget .

ಈ ಟಾರ್ಚರ್ ತಾಳಲಾರದೇ ಆಗಸ್ಟ್ 30 ರಂದು 30 ಸಾವಿರ ರೂಪಾಯಿ ಕಟ್ಟಿದ್ದನು. ಆದರೂ ಇನ್ನಷ್ಟು ಹಣಕ್ಕೆ ಡಿಮ್ಯಾಂಡ್ ಮಾಡಲಾಗಿತ್ತು. ಅಲ್ಲದೇ ಆ.31 ರೊಳಗೆ ಹಣ ನೀಡುವಂತೆ ಡೆಡ್ ಲೈನ್ ನೀಡಲಾಗಿತ್ತು.ಈ ಟಾರ್ಚರ್ ತಾಳಲಾರದೇ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ಉಜಿರೆಯ ಸಾನಿಧ್ಯ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಸ್ವರಾಜ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಜನಪ್ರಿಯ ಆಟಗಾರನಾಗಿದ್ದನು. ಲೋನ್ ಕಿರುಕುಳಕ್ಕೆ ಮನನೊಂದು ಬಾತ್ ರೂಮ್ ನಲ್ಲಿಯೇ ಸ್ವರಾಜ್ ನೇಣಿಗೆ ಕೊರಳೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆನ್ ಲೈನ್ ಬಹಳ ಸುಲಭವಾಗಿ ಲೋನ್ ಸಿಗುತ್ತದೆ ಎಂದು ಸಾಲ ಪಡೆಯುವ ಮುನ್ನ ಪ್ರತಿಯೊಬ್ಬರೂ ಎಚ್ಚರ ವಹಿಸುವುದು ಉತ್ತಮ

Leave a Comment

Your email address will not be published. Required fields are marked *