ಸೌಜನ್ಯ ಪರ ಹೋರಾಟಕ್ಕೆ ಆದಿಚುಂಚನಗಿರಿ ಮಠದ ಬೆಂಬಲ| ಬೆಳ್ತಂಗಡಿ ಸಭೆಗೆ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧಾರ

ಸಮಗ್ರ ನ್ಯೂಸ್: ಪ್ರಬಲ ಒಕ್ಕಲಿಗ ಮಠ ಆದಿಚುಂಚನಗಿರಿಯ ಬೆಂಬಲ ಸೌಜನ್ಯಳ ನ್ಯಾಯದ ಹೋರಾಟದಲ್ಲಿ ಬೆಂಬಲಕ್ಕೆ ನಿಂತಿದ್ದು, ಭಾನುವಾರ(ಸೆ.3) ಬೆಳ್ತಂಗಡಿಯಲ್ಲಿ ನಡೆಯುವ ಸಭೆಗೆ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧರಿಸಿದ್ದಾರೆ.

Ad Widget ... ..

ಸೌಜನ್ಯ ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದ್ದರೂ ಒಕ್ಕಲಿಗ ಮಠವು ಅಲಿಪ್ತ ನೀತಿ ವಹಿಸಿತ್ತು. ಇದರಿಂದ ಬೇಸತ್ತ ಹೋರಾಟಗಾರರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳನ್ನು ಭೇಟಿಯಾಗಿ ಬೆಂಬಲ ಸೂಚಿಸಲು ಮನವಿ ಮಾಡಿದ್ದರು.

Ad Widget

ಇದೀಗ ಬೆಳ್ತಂಗಡಿಯಲ್ಲಿ ಪ್ರಜಾವೇದಿಕೆ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ನಡೆಯುವ ಬೃಹತ್ ಹೋರಾಟ ಸಭೆಯಲ್ಲಿ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲು ನಿರ್ಧರಿಸಿದ್ದು, ಪ್ರತಿಭಟನೆ ಮತ್ತೊಂದು ತಿರುವನ್ನು ಪಡೆದುಕೊಂಡಿದೆ.

Leave a Comment

Your email address will not be published. Required fields are marked *