Ad Widget .

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಅವಕಾಶ| ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಸಿಹಿಸುದ್ದಿ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇತ್ತೀಚೆಗೆ ಉದ್ಯೋಗ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಕಂಪ್ಯೂಟರ್‌ ಪ್ರೋಗ್ರಾಮರ್‌ ಮತ್ತು ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Ad Widget . Ad Widget .

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಒಟ್ಟು 125 ಹುದ್ದೆಗಳಿವೆ. ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Ad Widget . Ad Widget .

ಹುದ್ದೆಗಳ ವಿವರ

ಕಂಪ್ಯೂಟರ್ ಕ್ಷೇತ್ರ ಹಾಗೂ ದ್ವೀತಿಯ ದರ್ಜೆ ಗುಮಾಸ್ತ ವಿಭಾಗದಲ್ಲಿ ಉದ್ಯೋಗದ ಅವಕಾಶಗಳು ಇವೆ.

ಕಂಪ್ಯೂಟರ್ ಪ್ರೋಗ್ರಾಮರ್ -2 ಹುದ್ದೆ.
ದ್ವೀತಿಯ ದರ್ಜೆ ಗುಮಾಸ್ತ – 123 – ಹುದ್ದೆಗಳು.

ಹುದ್ದೆಗಳ ವರ್ಗಿಕರಣ:
ಎಸ್ ಸಿ – 18, ಹುದ್ದೆಗಳು,
ಪರಿಶಿಷ್ಟ ಪಂಗಡ – 04, ಹುದ್ದೆಗಳು,
ಪ್ರವರ್ಗ – 1,- 05, ಹುದ್ದೆಗಳು.
ಪ್ರವರ್ಗ – 2ಎ – 18, ಹುದ್ದೆಗಳು.
ಪ್ರವರ್ಗ – 2ಬಿ – 05, ಹುದ್ದೆಗಳು.
ಪ್ರವರ್ಗ – 3ಎ – 05, ಹುದ್ದೆಗಳು.
ಪ್ರವರ್ಗ – 3ಬಿ – 06, ಹುದ್ದೆಗಳು.
ಸಾಮಾನ್ಯ ವರ್ಗಕ್ಕೆ – 62 ಹುದ್ದೆಗಳು.

ವಿದ್ಯಾರ್ಹತೆ:
1) ಗುಮಾಸ್ತ ಹುದ್ದೆಗೆ ಅರ್ಹತೆ (ದ್ವಿತೀಯ ದರ್ಜೆ ) : ಬಿ,ಕಾಂ, ಬಿ.ಬಿ.ಎಂ, ಬಿ. ಸಿ. ಎ. ಪದವಿಯಾಗಿರಬೇಕು. ಆಂಗ್ಲ ಭಾಷೆ ನಿರರ್ಗಳವಾಗಿ ಓದಲು, ಮಾತನಾಡಲು ತಿಳಿದಿರಬೇಕು. ಕಂಪ್ಯೂಟರ್ ಬಳಕೆ ತಿಳಿದಿರಬೇಕು.

2) ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಎಂ ಸಿ ಎ ಅಥವಾ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ ಇ ಅಥವಾ ಎಂ.ಎಸ್ಸಿ ಪದವಿ ಪಡೆದಿರಬೇಕು.

ಪದವಿಯಲ್ಲಿ ಶೇ. 50 ಕ್ಕೂ ಹೆಚ್ಚು ಅಂಕ ಪಡೆದು ಪಾಸಾಗಿರಬೇಕು.

ವಯೋಮಿತಿ ಎಷ್ಟು?
ಸಾಮನ್ಯ ಅಭ್ಯರ್ಥಿಯು ಗರಿಷ್ಠ 35 ವರ್ಷ.
ಎಸ್ ಸಿ /ಎಸ್ಟಿ ಅಭ್ಯರ್ಥಿಗಳಿಗೆ 40 ವರ್ಷ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷದೊಳಗಿರಬೇಕು.

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಯು ಒಟ್ಟು 1,180 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪ. ಜಾತಿ. / ಪ ಪಂಗಡ – 500 ರೂ ಶುಲ್ಕ ಪಾವತಿಸಬೇಕು.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ

ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ ಲಿಖಿತ ಪರೀಕ್ಷೆ ಹಾಗೂ ಮೆರಿಟ್ ಲಿಸ್ಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ಗುಮಾಸ್ತ ಹುದ್ದೆಗೆ ಲಿಖಿತ ಪರೀಕ್ಷೆ ಜೊತೆಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ
Lಗುಮಾಸ್ತ ಹುದ್ದೆಗೆ 24,901 ರೂನಿಂದ 55,655 ರೂವರೆಗೆ ವೇತನ ಶ್ರೇಣಿ ಇರುತ್ತದೆ.
ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗೆ : 36,985 ರೂ – 89,600 ರೂ. ವರೆಗೆ ವೇತನ ನೀಡಲಾಗುತ್ತದೆ. ಇದರ ಜತೆ ಭತ್ಯೆಗಳು ಇರಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಯು ಬ್ಯಾಂಕ್ ಗೆ ಸಂಬಂಧಿಸಿದ ವೆಬ್ ಸೈಟ್ ಲಾಗಿನ್ ಮಾಡಬೇಕು,ಆನ್ಲೈನ್ ಮಾದರಿಯ ಅರ್ಜಿ ದೊರೆಯಲಿದ್ದು, ಸೂಕ್ತ ಮಾಹಿತಿಗಳಿಂದ ಭರ್ತಿ ಮಾಡಿ, ನಂತರ ಶುಲ್ಕ ಸಲ್ಲಿಸಿ, ದಾಖಲೆಗಳ ಲಗತ್ತಿಸಬೇಕು.

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸುವ ಕೊನೆ ದಿನ : 20.09.2023.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ವೆಬ್‌ ಲಿಂಕ್‌: https://scdccbank.com/branches.html

Leave a Comment

Your email address will not be published. Required fields are marked *