Ad Widget .

ಕೊಡಗು:ಅಕ್ರಮ ಮದ್ಯ ತಯಾರಿಕೆ ಪ್ರಕರಣ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ವಾಪ್ತಿಯ ಭಾಗಮಂಡಲ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಅಕ್ರಮವಾಗಿ ಮದ್ಯ ತಯಾರಿಕೆ ಮಾಡುತ್ತಿದ್ದ ಪ್ರಕರಣವನ್ನು ಆ. 31ರಂದು ಪತ್ತೆ ಮಾಡುವಲ್ಲಿ ಕೊಡಗು ಜಿಲ್ಲಾ ಪೊಲೀಸ್‌ ಯಶಸ್ವಿಯಾಗಿದೆ.

Ad Widget . Ad Widget .

ಭಾಗಮಂಡಲ ಠಾಣಾ ಸರಹದ್ದಿನ ತಾವೂರು ಗ್ರಾಮದ ತೋಟದ ಲೈನ್‌ ಮನೆಯೊಂದರಲ್ಲಿ ಅಕ್ರಮವಾಗಿ ಕೇರಳ ರಾಜ್ಯದಲ್ಲಿ ಮಾರಾಟ ಮಾಡಲು ಅಮಲೇರಿಸುವ ಪದಾರ್ಥ ಬಳಸಿ ಮದ್ಯ ತಯಾರಿಕೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇಲೆ DCRB ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ, ಭಾಗಮಂಡಲ ಠಾಣಾ ಪಿ.ಎಸ್‌.ಐ ಮತ್ತು ಸಿಬ್ಬಂದಿ ಗಳನ್ನೊಳಗೊಂಡ ತಂಡ ದಾಳಿ ನಡೆಸಿದ್ದಾರೆ.

Ad Widget . Ad Widget .

ಅರೋಪಿ ತಾವೂರು ಗ್ರಾಮದ ನಿವಾಸಿ ಹಾಸಿಂ ಎಂಬುವವರನ್ನು ದಸ್ತಗಿರಿ ಮಾಡಿ ಮದ್ಯ ತಯಾರಿಕೆಗೆ ಬಳಸುತ್ತಿದ್ದ 60 ಕೆ.ಜಿ 300 ಗ್ರಾಂ CAUSTIC CARAMEL, 2000 ಖಾಲಿ ಬಾಟಲ್‌, ಲೇಬಲ್‌, ಕ್ಯಾಪ್‌ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಮಡಿಕೇರಿ ಉಪವಿಭಾಗ ಡಿವೈ.ಎಸ್.ಪಿ ಜಗದೀಶ್‌ ಎಂ. ಇವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ಸಿ.ಪಿ.ಐ ಅನೂಪ್‌ ಮಾದಪ್ಪ, ಭಾಗಮಂಡಲ ಠಾಣೆ ಪಿ.ಎಸ್‌.ಐ ಶೋಭಾ ಲಮಾಣಿ ಮತ್ತು ಸಿಬ್ಬಂದಿ, ಡಿ.ಸಿ.ಆರ್‌.ಬಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡ ಪತ್ತೆ ಮಾಡಿದೆ.

Leave a Comment

Your email address will not be published. Required fields are marked *