Ad Widget .

‘ರಿಪಬ್ಲಿಕ್’ ಮಡಿಲಿಗೆ ದಿಗ್ವಿಜಯ| ವಿಆರ್ ಎಲ್ ಸಮೂಹದಿಂದ ಖರೀದಿ ಮಾಡಿದ ಆರ್ನಬ್ ಗೋಸ್ವಾಮಿ

ಸಮಗ್ರ ನ್ಯೂಸ್:ವಿಆರ್‌ಎಲ್ ಸಮೂಹದ ‘ದಿಗ್ವಿಜಯ’ ಸುದ್ದಿವಾಹಿನಿ ಅಧಿಕೃತವಾಗಿ ರಿಪಬ್ಲಿಕ್ ತೆಕ್ಕೆಗೆ ಸೇರಿದೆ ಎಂದು ಮೂಲಗಳು ತಿಳಿಸಿವೆ.

Ad Widget . Ad Widget .

ವಿಜಯ್ ಸಂಕೇಶ್ವರ್ ಮಾಲೀಕತ್ವದ ವಿಆರ್‌ಎಲ್‌ ಸಂಸ್ಥೆ 2017ರಲ್ಲಿ ದಿಗ್ವಿಜಯ ಟಿವಿ ಚಾನೆಲ್ ಅನ್ನು ಆರಂಭಿಸಿತ್ತು. ಆದರೀಗ ಈ ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಸತತ ಐದು ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿರುವ ರಿಪಬ್ಲಿಕ್ ಚಾನಲ್‌ನೊಂದಿಗೆ ವಿಲೀನಗೊಳಿಸಲಾಗಿದೆ.

Ad Widget . Ad Widget .

ಮುಂದಿನ ಕೆಲ ತಿಂಗಳ ಕಾಲ ‘ದಿಗ್ವಿಜಯ’ ಎನ್ನುವ ಹೆಸರಿನಲ್ಲಿಯೇ ಸುದ್ದಿವಾಹಿನಿ ಮುಂದುವರಿಯಲಿದ್ದು,ಆದಾದ ಬಳಿಕ ‘ರಿಪಬ್ಲಿಕ್ ಕನ್ನಡ’ಎನ್ನುವ ಹೆಸರಿನಲ್ಲಿ ಕಾರ್ಯಚರಣೆ ನಡೆಸುವುದು ಎಂದು ತಿಳಿದು ಬಂದಿದೆ.

‘ಇಂಡಿಯಾ ವಾಂಟ್ಸ್ ಟು ನೋ’ ಎನ್ನುವ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಭಾರಿ ಜನಪ್ರಿಯತೆಗಳಿಸಿರುವ ಅರ್ನಬ್ ಗೋಸ್ವಾಮಿ, 2017ರಲ್ಲಿ ತಮ್ಮದೇ ರಿಪಬ್ಲಿಕ್ ಟಿವಿಯನ್ನು ಆರಂಭಿಸಿದ್ದಾರೆ. ಆರ೦ಭಗೊಂಡ ಮೊದಲ ವಾರದಿಂದಲೇ ಟಿಆರ್‌ಪಿಯಲ್ಲಿ ಮೊದಲ ಸ್ಥಾನವನ್ನು ರಿಪಬ್ಲಿಕ್ ಚಾನೆಲ್ ಕಾಯ್ದುಕೊಂಡಿದೆ. ಈಗಾಗಲೇ ರಿಪಬ್ಲಿಕ್ ಭಾರತ್, ರಿಪಬ್ಲಿಕ್ ವರ್ಲ್, ಚಾನೆಲ್ ಮೂಲಕ ಇಂಗ್ಲಿಷ್, ಹಿಂದಿ ಹಾಗೂ ಬಂಗಾಳಿ ಭಾಷೆಯಲ್ಲಿ ವಾಹಿನಿಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಕನ್ನಡದಲ್ಲಿಯೂ ಅರ್ನಬ್ ಗೋಸ್ವಾಮಿ ಸುದ್ದಿ ವಾಹಿನಿಯನ್ನ ಆರಂಭಿಸಲಿದ್ದಾರೆ.

Leave a Comment

Your email address will not be published. Required fields are marked *