ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಆದಾಯಗಳಲ್ಲಿ ಒಂದಾದ ಮದ್ಯ ಮಾರಾಟದಲ್ಲಿ ಭಾರಿ ಇಳಿಕೆಯಾಗಿದೆ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ಮದ್ಯದ ಮೇಲೆ ಶೇ. 20ರಷ್ಟು ತೆರಿಗೆ ಏರಿಕೆ ಮಾಡುತ್ತಿದ್ದಂತೆ ಮದ್ಯ ಮಾರಾಟದಲ್ಲಿ ಭಾರೀ ಕಡಿಮೆಯಾಗಿದೆ.
ಅಬಕಾರಿ ಸುಂಕ ಶೇಕಡ 20 ರಷ್ಟರವರೆಗೆ ಏರಿಕೆಯಾಗಿದ್ದು, ತೆರಿಗೆ ಏರಿಕೆ ನಂತರ ಮದ್ಯ ಮಾರಾಟದಲ್ಲಿ ಭಾರಿ ಕಡಿಮೆ ಆಗಿದೆ. ಮದ್ಯದ ದರ ಏರಿಕೆಯಾಗಿರುವುದರಿಂದ ಮದ್ಯ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಆಗಸ್ಟ್ ನಲ್ಲಿ ಶೇಕಡ 10 ರಿಂದ 15 ರಷ್ಟು ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ.
ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು, ಬಿಯರ್ ಗೆ ಶೇಕಡ 10 ರಷ್ಟು, ಉಳಿದ ಮದ್ಯಕ್ಕೆ ಶೇಕಡ 20 ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಮಾರಾಟದಲ್ಲಿ ಭಾರಿ ಕುಸಿತ ಆಗಿದೆ ಎಂದು ಹಲವು ವರದಿಗಳು ಪ್ರಕಟಿಸಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯ ಸರ್ಕಾರದ ಆದಾಯದಲ್ಲಿ ಶೇ.13.7ರಷ್ಟು ಹೆಚ್ಚಳವಾಗಿದೆ ಎಂದು ಹೇಳುತ್ತಿರುವ ಅಬಕಾರಿ ಇಲಾಖೆ ಮದ್ಯ ಮಾರಾಟ ಕುಸಿತದ ಕುರಿತು ಮಾಧ್ಯಮ ವರದಿಗಳನ್ನು ತಳ್ಳಿಹಾಕಿದೆ.