Ad Widget .

ಅಪಾಯದ ಅಂಚಿನಲ್ಲಿರುವ ಪಂಜಿಕಲ್ಲು-ಮೈತಡ್ಕ ತೂಗು ಸೇತುವೆ

ಸಮಗ್ರ ನ್ಯೂಸ್: ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು -ಮೈತಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಲಾದ ತೂಗು ಸೇತುವೆಯು ಇದೀಗ ಅಪಾಯದ ಅಂಚಿನಲ್ಲಿದೆ.

Ad Widget . Ad Widget .

ಸಾರ್ವಜನಿಕರು ಅನಾಹುತ ಸಂಭವಿಸುವ ಮೊದಲು ದುರಸ್ತಿ ಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಪಂಜಿಕಲ್ಲು – ಮೈತಡ್ಕ ಭಾಗದ ಸಂಪರ್ಕದ ರಸ್ತೆಯು ಇದಾಗಿದ್ದು, ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ತೂಗು ಸೇತುವೆಯಲ್ಲಿ ಸಂಚರಿಸುತ್ತಿರುತ್ತಾರೆ.

Ad Widget . Ad Widget .

ಇದೀಗ ಈ ಸೇತುವೆಯ ಮೇಲ್ಬಾಗಕ್ಕೆ ನಡೆದುಕೊಂಡು ಹೋಗಲು ಹಾಸಿರುವ ಸಿಮೆಂಟ್ ಸ್ಲ್ಯಾಬ್ ಒಡೆದು ಹೋಗಿ ತಿಂಗಳು ಎರಡು ಕಳೆದಿದೆ. ಈ ಸೇತುವೆಯನ್ನೇ ಅವಲಂಬಿತರಾಗಿರುವ ನಾಗರಿಕರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದರೂ ಕಬ್ಬಿಣದ ರಾಡಿನ ಮಧ್ಯೆ ಕಾಲು ಸಿಕ್ಕಿ ಹಾಕಿಕೊಂಡು ಅನಾಹುತ ಸಂಭವಿಸುತ್ತದೆ.

ಮಹಿಳೆಯರು, ಮಕ್ಕಳು ನಡೆದಾಡುವ ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಈ ಬಗ್ಗೆ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಶೀಘ್ರವಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಈ ಭಾಗದ ಸಾರ್ವಜನಿಕರು ಆಗ್ರಹಿಸಿರುತ್ತಾರೆ.

Leave a Comment

Your email address will not be published. Required fields are marked *