August 2023

ಕಾಳುಮೆಣಸು ಧಾರಣೆ ಸತತ ಏರಿಕೆ| ಸ್ಥಿರತೆ ಕಾಯ್ದುಕೊಂಡ ಅಡಿಕೆ ದರ

ಸಮಗ್ರ ನ್ಯೂಸ್: ಕಪ್ಪು ಬಂಗಾರ’ ಎಂದೇ ಕರೆಯಲ್ಪಡುವ ಕಾಳು ಮೆಣಸು ಬೆಳಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 6 ವರ್ಷಗಳ ಬಳಿಕ ಮತ್ತೆ 60,000 ರೂಪಾಯಿ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಎಂಟು ದಿನಗಳ ಹಿಂದಿನವರೆಗೂ ಪ್ರತಿ ಕ್ವಿಂಟಾಲ್ ಗೆ 45,000 ರೂಪಾಯಿಗಳಿಂದ 49,000 ರೂಪಾಯಿ ಆಸುಪಾಸಿನಲ್ಲಿದ್ದ ಕಾಳು ಮೆಣಸಿನ ದರ ಸೋಮವಾರದಂದು ಶಿರಸಿ ಮಾರುಕಟ್ಟೆಯಲ್ಲಿ 61,599 ರೂಪಾಯಿಗೆ ಟೆಂಡರ್ ಆಗಿದೆ. ಆರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಕಾಳುಮೆಣಸಿಗೆ ಇದಕ್ಕಿಂತ […]

ಕಾಳುಮೆಣಸು ಧಾರಣೆ ಸತತ ಏರಿಕೆ| ಸ್ಥಿರತೆ ಕಾಯ್ದುಕೊಂಡ ಅಡಿಕೆ ದರ Read More »

ಭದ್ರಾವತಿ ಉಕ್ಕಿನ ಕಾರ್ಖಾನೆ ಪುನರಾರಂಭಕ್ಕೆ ಒಪ್ಪಿಗೆ| ನಿಟ್ಟುಸಿರು ಬಿಟ್ಟ ಕಾರ್ಮಿಕ ವರ್ಗ

ಸಮಗ್ರ ನ್ಯೂಸ್: ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ( ಏಐ ಎಸ್ ಎಲ್)ಯಲ್ಲಿ ಉತ್ಪಾದನೆಯನ್ನು ಪುನಾರಂಭಿಸಲು ಭಾರತೀಯ ಉಕ್ಕು ಪ್ರಾಧಿಕಾರ (ಎಸ್‌ಎಐಎಲ್)ವು ಒಪ್ಪಿಗೆ ಸೂಚಿಸಿದೆ. ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಭಾರತೀಯ ಉಕ್ಕು ಪ್ರಾಧಿಕಾರದ ಸಭೆಯಲ್ಲಿ ಎಐಎಸ್‌ಎಲ್‌ನಲ್ಲಿ ಉತ್ಪಾದನೆ ಪುನಾರಂಭಕ್ಕೆ ತಕ್ಷಣದಿಂದಲೇ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕಾರ್ಖಾನೆಯಲ್ಲಿ ಸದ್ಯದ ಮಟ್ಟಿಗೆ ಬಾರ್ ಮಿಲ್ ಮತ್ತು ಪೈಮರಿ ಮಿಲ್ ಘಟಕಗಳನ್ನು ಮಾತ್ರ ಆರಂಭಿಸಬಹುದಾಗಿದೆ. ಹೀಗಾಗಿ ಅವುಗಳನ್ನು ಮಾತ್ರ ಆರಂಭಿಸುವಂತೆ

ಭದ್ರಾವತಿ ಉಕ್ಕಿನ ಕಾರ್ಖಾನೆ ಪುನರಾರಂಭಕ್ಕೆ ಒಪ್ಪಿಗೆ| ನಿಟ್ಟುಸಿರು ಬಿಟ್ಟ ಕಾರ್ಮಿಕ ವರ್ಗ Read More »

‘ಶಕ್ತಿ’ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಮೊದಲ ಕಂತು ಬಿಡುಗಡೆ

ಸಮಗ್ರ ನ್ಯೂಸ್: ಶಕ್ತಿ ಯೋಜನೆ ಅಡಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರಿ ಬಸ್​​ಗಳಲ್ಲಿ ವಿತರಿಸಲಾಗಿರುವ ಟಿಕೆಟ್​​ನ ಒಟ್ಟು ಮೊತ್ತದ ಮೊದಲ ಕಂತನ್ನು ಕರ್ನಾಟಕ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿದೆ. ನಾಲ್ಕೂ ನಿಗಮಗಳು ಒಟ್ಟಾಗಿ ವಿತರಿಸಿರುವ ಶೂನ್ಯ ಟಿಕೆಟ್‌ ದರ 6,87,49,57,753 ರೂ.ಆಗಿದ್ದು, ಈ ಮೊತ್ತದ ಒಂದು ಪಾಲನ್ನು ಅಥವಾ ಮೊದಲ ಕಂತನ್ನು ಸರ್ಕಾರ ಬಿಡುಗಡೆ ಮಾಡಿದೆ.ನಿಗಮಗಳಿಗೆ ಮೊದಲ ಕಂತಿನ ಹಣವಾಗಿ 125.48 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) 47.15

‘ಶಕ್ತಿ’ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಮೊದಲ ಕಂತು ಬಿಡುಗಡೆ Read More »

ಚುನಾವಣೆ ಗೆಲ್ಲಲು ಮೋದಿ ಹೀಗೂ ಮಾಡಿಸಬಹುದೇ? ಕಾಶ್ಮೀರದ ಮಾಜಿ ರಾಜ್ಯಪಾಲರಿಂದ ಸ್ಪೋಟಕ ಹೇಳಿಕೆ

ಸಮಗ್ರ ನ್ಯೂಸ್: ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಅಪಾಯಕಾರಿ ವ್ಯಕ್ತಿ. ಮುಂದಿನ ಲೋಕಸಭೆ ಚುನಾವಣೆ ಗೆಲುವಿಗೆ ರಾಮ ಮಂದಿರದ ಮೇಲೆ ದಾಳಿ ನಡೆಸಬಹುದು ಅಥವಾ ಯಾವುದೇ ಬಿಜೆಪಿ ನಾಯಕನ ಹತ್ಯೆ ಮಾಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಪುಲ್ವಾಮಾ ದಾಳಿಯನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಸತ್ಯಪಾಲ್ ಮಲಿಕ್ ಪ್ರಧಾನಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 2024ರ

ಚುನಾವಣೆ ಗೆಲ್ಲಲು ಮೋದಿ ಹೀಗೂ ಮಾಡಿಸಬಹುದೇ? ಕಾಶ್ಮೀರದ ಮಾಜಿ ರಾಜ್ಯಪಾಲರಿಂದ ಸ್ಪೋಟಕ ಹೇಳಿಕೆ Read More »

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಸೂಕ್ತ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ :ಡಾ.ವೀರೇಂದ್ರ ಹೆಗ್ಗಡೆ

ಸಮಗ್ರ ನ್ಯೂಸ್: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಹಾಗು ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಿ ಕೊಡಲು ಒತ್ತಾಯಿಸುತ್ತೇನೆ ಎಂದು ಡಾ. ವೀರೇಂದ್ರ ಹೆಗ್ಗಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೌಜನ್ಯ ಸಾವು ಪ್ರಕರಣ ಪ್ರಸ್ತುತ ನ್ಯಾಯಾಲಯ, ಸರ್ಕಾರ ಮತ್ತು ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿ ಇರುವುದರಿಂದ ಸೌಜನ್ಯಳ ಸಾವಿಗೆ ಸಂಬಂಧಿಸಿದಂತೆ ಸರ್ಕಾರ ಹಾಗು ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ ಹಾಗು ಈ ವಿಚಾರವಾಗಿ ಕ್ಷೇತ್ರದ ಬಗ್ಗೆ ಅವಹೇಳನಕಾರಿ, ಸುಳ್ಳು ಹೇಳಿಕೆ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಸೂಕ್ತ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸುತ್ತೇನೆ :ಡಾ.ವೀರೇಂದ್ರ ಹೆಗ್ಗಡೆ Read More »

ಮಂಗಳೂರು: ಕಡಲ್ಕೊರೆತ ಸ್ಥಳಕ್ಕೆ ಮುಖ್ಯಮಂತ್ರಿ ಬೇಟಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿ ಪರಿಶೀಲನೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆ ನಡೆಸಲು ಆಗಮಿಸಿದಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ.1 ಮಂಗಳವಾರ ಸಂಜೆ ಉಳ್ಳಾಲ ತಾಲೂಕಿನ ಬಟ್ಟಪಾಡಿಯ ಕಡಲ್ಕೊರೆತಕ್ಕೆ ಹಾನಿಯಾದಂತಹ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ‌ ಮಾತನಾಡಿ ಈಗಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್,ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ

ಮಂಗಳೂರು: ಕಡಲ್ಕೊರೆತ ಸ್ಥಳಕ್ಕೆ ಮುಖ್ಯಮಂತ್ರಿ ಬೇಟಿ Read More »

ಸೌಜನ್ಯ ಪ್ರಕರಣವನ್ನು ನಾನೇ ಸ್ಟಡಿ ಮಾಡ್ತೇನೆ; ಮೇಲ್ಮನವಿಗೆ ಅವಕಾಶ ಇದೆಯಾ ಎಂದು ನೋಡೋಣ| ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಸಮಗ್ರ ನ್ಯೂಸ್: ಕಳೆದೊಂದು ದಶಕದ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್‌ನಿಂದ ಜಡ್ಜ್‌ಮೆಂಟ್‌ ಬಂದಿದೆ. ಈ ಬಗ್ಗೆ ನಾನು ಲಾಯರ್‌ ಆಗಿ ಹೇಳೋದಾದರೆ ಹೈಕೋರ್ಟ್‌ಗೆ ಅಪೀಲ್‌ ಹೋಗಬೇಕು. ಸಿಬಿಐ ಕೋರ್ಟ್‌ ಜಡ್ಜ್‌ಮೆಂಟ್‌ ಕಾಪಿಯನ್ನು ಓದಿ ಅಪೀಲ್‌ಗೆ ಹೋಗಲು ಅವಕಾಶವಿದೆಯೇ ಎಂಬುದನ್ನು ನೋಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ

ಸೌಜನ್ಯ ಪ್ರಕರಣವನ್ನು ನಾನೇ ಸ್ಟಡಿ ಮಾಡ್ತೇನೆ; ಮೇಲ್ಮನವಿಗೆ ಅವಕಾಶ ಇದೆಯಾ ಎಂದು ನೋಡೋಣ| ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ Read More »

ಸೌಜನ್ಯಾ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಮಂಜುನಾಥನ ದರ್ಶನ ಮಾಡಕೂಡದು: ದುನಿಯಾ ವಿಜಯ್‌

ಸಮಗ್ರ ನ್ಯೂಸ್: ಕು.ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ನಟ ದುನಿಯಾ ವಿಜಯ್‌, ಸೌಜನ್ಯಾ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ ಎಂದು ಹೇಳಿದ್ದಾರೆ. “ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು” ಎಂಬ ಬುದ್ಧವಾಣಿಯೊಂದಿಗೆ ಫೇಸ್‌ಬುಕ್‌ ನಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವ ದುನಿಯಾ ವಿಜಯ್, ”ಪ್ರತಿ ವರ್ಷ ಧರ್ಮಸ್ಥಳದ ದರ್ಶನ ಪಡೆಯುವುದು ವಾಡಿಕೆಯಾಗಿತ್ತು” ಎಂದು ತಿಳಿಸಿದ್ದಾರೆ. ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು

ಸೌಜನ್ಯಾ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಮಂಜುನಾಥನ ದರ್ಶನ ಮಾಡಕೂಡದು: ದುನಿಯಾ ವಿಜಯ್‌ Read More »

ಉಡುಪಿ: ಅಲೆಗಳ ರಭಸಕ್ಕೆ ಮುಳುಗಿದ ದೋಣಿ, ಓರ್ವ ಮೃತ್ಯು

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಅಲೆಗಳ ರಭಸಕ್ಕೆ 8 ಮಂದಿ ಇದ್ದ ದೋಣಿ ಮುಳುಗಡೆಯಾದ ಘಟನೆ ಜು.31 ರಂದು ನಡೆದಿದೆ, ಈ ವೇಳೆ ಓರ್ವ ಮೀನುಗಾರ ಸಮುದ್ರದಲ್ಲಿ ಮೃತ ಪಟ್ಟಿರುವುದು ತಿಳಿದುಬಂದಿದೆ. ಈ ದೋಣಿಯು ಸಚಿನ್ ಮೊಗವೀರ ಎಂಬವರಿಗೆ ಸೇರಿದ್ದು, ಮಾಸ್ತಿ ಮರ್ಲ ಚಿಕ್ಕು ಎಂಬ ಹೆಸರನ್ನು ಹೊಂದಿತ್ತು. ನಾಡ ದೋಣಿಯಲ್ಲಿ ಒಟ್ಟು 8 ಮಂದಿ ಮೀನುಗಾರರು ಇದ್ದರು, ಅದರಲ್ಲಿ ಆರು ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ, ಆದರೆ ಇಬ್ಬರು ಮೀನುಗಾರರು ಸಮುದ್ರ

ಉಡುಪಿ: ಅಲೆಗಳ ರಭಸಕ್ಕೆ ಮುಳುಗಿದ ದೋಣಿ, ಓರ್ವ ಮೃತ್ಯು Read More »

ಕೇದಾರನಾಥ ಯಾತ್ರೆಗೆ‌ ತೆರಳಿದ್ದ ಚಿಕ್ಕಮಗಳೂರಿನಿಂದ ಯುವಕ ಸಾವು

ಸಮಗ್ರ ನ್ಯೂಸ್: ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಯುವಕ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತ ಯುವಕನನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರ ನಿವಾಸಿ ಗಿರೀಶ್ (25) ಎಂದು ಗುರುತಿಸಲಾಗಿದೆ. ಈತ ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಮೃತದೇಹವನ್ನು ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕಳೆದ ವಾರವಷ್ಟೇ ಮೂಡಿಗೆರೆಯಿಂದ ಕೇದಾರನಾಥ ಯಾತ್ರೆಗೆ ಗಿರೀಶ್ ತೆರಳಿದ್ದಾಗಿ ತಿಳಿದುಬಂದಿದೆ. ಕೇದಾರನಾಥ ಪೊಲೀಸರಿಂದ ಗಿರೀಶ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ.

ಕೇದಾರನಾಥ ಯಾತ್ರೆಗೆ‌ ತೆರಳಿದ್ದ ಚಿಕ್ಕಮಗಳೂರಿನಿಂದ ಯುವಕ ಸಾವು Read More »