August 2023

ವಿಟ್ಲ: ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ಹಣ ದುರುಪಯೋಗ: ಟ್ರಸ್ಟಿಗಳ ಮೇಲೆ ಎಫ್ಐಆರ್

ಸಮಗ್ರ ನ್ಯೂಸ್: ಟ್ರಸ್ಟ್ ಕಾರ್ಯದರ್ಶಿಯ ಗಮನಕ್ಕೆ ತಾರದೆ, ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ನಲ್ಲಿದ್ದ ಲಕ್ಷಾಂತರ ರೂಪಾಯಿ ದುರುಪಯೋಗ ಪಡಿಸಿದ ವಿಟ್ಲ ಕಂಬಳಬೆಟ್ಟುವಿನ ಜನಪ್ರಿಯ ಸೆಂಟ್ರಲ್ ಶಾಲೆಯ ಟ್ರಸ್ಟಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ. ವಿಟ್ಲ ಮುಡ್ನೂರು ಗ್ರಾಮದಲ್ಲಿರುವ ಜನಪ್ರಿಯ ಸೆಂಟ್ರಲ್ ಸ್ಕೂಲ್ ಆಡಳಿತವು ಟ್ರಸ್ಟ್ ಡೀಡ್ ಪ್ರಕಾರ ನೋಂದಣಿಗೊಂಡಿದ್ದು, ಮಹಮ್ಮದ್ ಇರ್ಫಾನ್ ಟ್ರಸ್ಟ್ ಕಾರ್ಯದರ್ಶಿ ಯಾಗಿರುತ್ತಾರೆ. ಟ್ರಸ್ಟೀಗಳಾದ ಹಾಸನದಲ್ಲಿ ವಾಸ್ತವ್ಯವಿರುವ ಫಾತಿಮಾ ನಸ್ರೀನ್ ಬಶೀರ್ ಕೋಂ ಡಾ ಅಬ್ದುಲ್ ಬಶೀರ್ ವಿ.ಕೆ […]

ವಿಟ್ಲ: ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ಹಣ ದುರುಪಯೋಗ: ಟ್ರಸ್ಟಿಗಳ ಮೇಲೆ ಎಫ್ಐಆರ್ Read More »

ಎತ್ತಿನ‌ಭುಜಕ್ಕೆ ಚಾರಣ ಹೋಗ್ತಿದೀರಾ? ಹಾಗಿದ್ರೆ ಈ ಸೂಚನೆ ನಿಮಗಾಗಿ…

ಸಮಗ್ರ ನ್ಯೂಸ್: ಮೂಡಿಗೆರೆ ತಾಲ್ಲೂಕಿನ ಪ್ರಸಿದ್ಧ ಪ್ರಾಕೃತಿಕ ತಾಣ ಎತ್ತಿನಭುಜಕ್ಕೆ ಚಾರಣ ತೆರಳುವುದಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಚಿಕ್ಕಮಗಳೂರು ಇವರ ಆದೇಶದಂತೆ ಮೂಡಿಗೆರೆ ವಲಯ ಅರಣ್ಯ ಅಧಿಕಾರಿಗಳ ಕಛೇರಿಯಿಂದ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಮೂಡಿಗೆರೆ ವಲಯ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ, ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸುತ್ತಿರುವುದರಿಂದ, ರಸ್ತೆಬದಿಯ ವಿದ್ಯುತ್ ಕಂಬಗಳು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿರುವುದರಿಂದ, ಹಾಗೆಯೇ ಪೋಟೋ

ಎತ್ತಿನ‌ಭುಜಕ್ಕೆ ಚಾರಣ ಹೋಗ್ತಿದೀರಾ? ಹಾಗಿದ್ರೆ ಈ ಸೂಚನೆ ನಿಮಗಾಗಿ… Read More »

ಸುಳ್ಯ: ನವಂಬರ್ 4 ರ ತನಕ ಇನ್ನೂ ದಿನಪೂರ್ತಿ ತರಗತಿ

ಸಮಗ್ರ ನ್ಯೂಸ್: ಜೂನ್ ಮತ್ತು ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ನೀಡಿದ್ದ ರಜೆಗಳನ್ನು ಸರಿದೂಗಿಸಲು ನವಂಬರ್ 4ರ ತನಕ ಶನಿವಾರ ದಿನ ಪೂರ್ತಿ ತರಗತಿಗಳು ನಡೆಯಲಿದೆ. ಈ ವರ್ಷ ಮಳೆಯ ಕಾರಣ ಸುಳ್ಯದಲ್ಲಿ 6 ದಿನ ರಜೆ ನೀಡಲಾಗಿತ್ತು. ಇದನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಶನಿವಾರದಂದು ಸಹ ಪೂರ್ತಿ ದಿನ ತರಗತಿಗಳು ನಡೆಸಲು ನಿರ್ಧರಿಸಿದೆ. ಒಂದು‌ ದಿನದ ರಜೆಗೆ ಎರಡು ಶನಿವಾರ ತರಗತಿ ನಡೆಸಿ ರಜೆಯನ್ನು ಸರಿದೂಗಿಸಿ ವೇಳಾ ಪಟ್ಟಿ ಹೊರಡಿಸಿದೆ. ಅದರನ್ವಯ ನ.4 ರವರೆಗೆ ದಿನಪೂರ್ತಿ

ಸುಳ್ಯ: ನವಂಬರ್ 4 ರ ತನಕ ಇನ್ನೂ ದಿನಪೂರ್ತಿ ತರಗತಿ Read More »

ಮಾತಿನ‌ ಭರದಲ್ಲಿ ನಾಲಿಗೆ ಹರಿಬಿಟ್ಟ ಅರಗ ಜ್ಞಾನೇಂದ್ರ| ಹೀಗೂ ಮಾತನಾಡಬಹುದೇ ಮಾಜಿ ಸಚಿವರೇ..?

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಡಿದ ಮಾತು ಈಗ ವಿವಾದ ಸೃಷ್ಟಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಈಶ್ವರ್ ಖಂಡ್ರೆ ಬಗ್ಗೆ ಮಾತಾಡುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ಮರಗಳೇ ಇಲ್ಲದ ಉತ್ತರ ಕರ್ನಾಟಕದ ನಾಯಕರು ಅರಣ್ಯ ಸಚಿವರಾಗಿದ್ದಾರೆ. ಅಲ್ಲಿಯವರೆಲ್ಲ ಸುಟ್ಟು ಕರಕಲಾಗಿರುತ್ತಾರೆ. ನಮ್ಮ ಖರ್ಗೆಯವರನ್ನೇ ನೋಡಿದ್ರೆ ಗೊತ್ತಾಗಲ್ವಾ ಎಂದಿದ್ದು, ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಮೂಲಕ ಆರಗ ಜ್ಞಾನೇಂದ್ರ

ಮಾತಿನ‌ ಭರದಲ್ಲಿ ನಾಲಿಗೆ ಹರಿಬಿಟ್ಟ ಅರಗ ಜ್ಞಾನೇಂದ್ರ| ಹೀಗೂ ಮಾತನಾಡಬಹುದೇ ಮಾಜಿ ಸಚಿವರೇ..? Read More »

ಕಾರ್ಕಳ: ವೈದ್ಯರ ತಂಡದ ಮೇಲೆ ನೈತಿಕ ಪೊಲೀಸ್ ಗಿರಿ| ಐವರು ಅರೆಸ್ಟ್

ಸಮಗ್ರ ನ್ಯೂಸ್: ಕಾರ್ಕಳದಲ್ಲಿ ಮಂಗಳೂರಿನ ವೈದ್ಯರ ತಂಡದ ಕಾರು ತಡೆದು ದುಷ್ಕರ್ಮಿಗಳು ಹಲ್ಲೆಗೆ ಯತ್ನಿಸಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಲ್ಪಾಡಿ ಗ್ರಾಮದ ಬಳಿ ಮಂಗಳೂರಿನ ಕಾಲೇಜಿನ ವೈದ್ಯರ ತಂಡ ತೆರಳುತ್ತಿದ್ದ ಕಾರು ತಡೆದು ಅವಾಜ್​ ಹಾಕಿ ನೈತಿಕ ಪೊಲೀಸ್​ಗಿರಿ ನಡೆಸಿದ್ದಾರೆ. ಈ ಸಂಬಂಧ ಕಾರ್ಕಳ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಬಂಧಿತ ಆರೋಪಿಗಳು. ಮಾಳ ಎಸ್.ಕೆ. ಗಡಿ

ಕಾರ್ಕಳ: ವೈದ್ಯರ ತಂಡದ ಮೇಲೆ ನೈತಿಕ ಪೊಲೀಸ್ ಗಿರಿ| ಐವರು ಅರೆಸ್ಟ್ Read More »

ವಿಟ್ಲ: ಸಂಘ ಪರಿವಾರದವರಿಂದ ಬಾಲಕಿಯ ನಿರಂತರ ಅತ್ಯಾಚಾರ| ಬಿಜೆಪಿ ಬಾಯಿ ಮುಚ್ಚಿ ಕುಳಿತಿರುವುದ್ಯಾಕೆ?-ಕಾಂಗ್ರೆಸ್ ಪ್ರಶ್ನೆ

ಸಮಗ್ರ ನ್ಯೂಸ್:‌ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಬಿಜೆಪಿಯವರ ಮೌನವೇಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,” ದಲಿತ ಹೆಣ್ಣುಮಗಳು ಎಂಬ ಕಾರಣಕ್ಕೆ ಅಸಡ್ಡೆಯೇ? ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಶೋಭಾ ಕರಂದ್ಲಾಜೆ ಅವರ ಬಾಯಿಯನ್ನು ಈಗ ಅದುಮಿ ಹಿಡಿದವರು ಯಾರು?” ಎಂದು ಕೇಂದ್ರ ಸಚಿವೆಯನ್ನು ತರಾಟಗೆ ತೆಗದುಕೊಂಡಿದೆ.”ಉಡುಪಿಯಲ್ಲಿ ಇಲಿಯನ್ನು ಹುಲಿ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಅದೇ ಕರಾವಳಿಯ

ವಿಟ್ಲ: ಸಂಘ ಪರಿವಾರದವರಿಂದ ಬಾಲಕಿಯ ನಿರಂತರ ಅತ್ಯಾಚಾರ| ಬಿಜೆಪಿ ಬಾಯಿ ಮುಚ್ಚಿ ಕುಳಿತಿರುವುದ್ಯಾಕೆ?-ಕಾಂಗ್ರೆಸ್ ಪ್ರಶ್ನೆ Read More »

‌2 ತಿಂಗಳಾದರೂ ಪತ್ತೆಯಾಗದ 29 ಶವಗಳ ಗುರುತು

ಸಮಗ್ರ ನ್ಯೂಸ್:‌ ಒಡಿಶಾದ ರೈಲು ಅಪಘಾತ ಸಂಭವಿಸಿ ಇಂದಿಗೆ 2 ತಿಂಗಳುಗಳು ಕಳೆದರು 29 ಮೃತದೇಹಗಳ ಗರುತು ಇನ್ನೂ ಪತ್ತೆಯಾಗಿಲ್ಲ ಎಂದು ಎಐಐಎಂಎಸ್‍ನ‌ ವೈದ್ಯಕೀಯ ಅಧೀಕ್ಷಕ ದಿಲೀಪ್ ಕುಮಾರ್ ಪರಿದಾ ಹೇಳಿದ್ದಾರೆ. ಘಟನೆ ಬಳಿಕ ಆಸ್ಪತ್ರೆಯಲ್ಲಿ 162 ದೇಹಗಳನ್ನು ಇರಿಸಲಾಗಿದ್ದು, ಆದರಲ್ಲಿ 113 ಮೃತದೇಹಗಳ ಗುರುತು ಪತ್ತೆಯಾಗಿದ್ದು ಅವುಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಮೃತ ದೇಹಗಳಿಗಾಗಿ ಡಿಎನ್‍ಎ ಪರೀಕ್ಷೆ ನಡೆಸಲಾಗಿದೆ. ಇನ್ನೂ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಖಚಿತ ವರದಿಯ ಬಳಿಕವಷ್ಟೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು. ಅಲ್ಲದೇ ಡಿಎನ್‍ಎ

‌2 ತಿಂಗಳಾದರೂ ಪತ್ತೆಯಾಗದ 29 ಶವಗಳ ಗುರುತು Read More »

ಚಾರ್ಜರ್ ಪಿನ್‌ಗೆ ಬಾಯಿ ಹಾಕಿದ 8 ತಿಂಗಳ ಕಂದಮ್ಮ ಸಾವು

ಸಮಗ್ರ ನ್ಯೂಸ್: ಮೊಬೈಲ್ ಚಾರ್ಜರ್ ಪಿನ್‌ಗೆ ಬಾಯಿ ಹಾಕಿ 8 ತಿಂಗಳ ಕಂದಮ್ಮ ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದಿದೆ. ಸಂತೋಷ್ ಕಲ್ಗುಟ್ಕರ್ ಹಾಗೂ ಸಂಜನಾ ಎಂಬವರ 8 ತಿಂಗಳ ಮಗು ಸಾನಿಧ್ಯ ಸಾವನಪ್ಪಿದ ಮಗು, ಮೊಬೈಲ್ ಚಾರ್ಜ್ ಮಾಡಿದ ಬಳಿಕ ಪೋಷಕರು ಪ್ಲಗ್‌ಅನ್ನು ಆಫ್ ಮಾಡದೇ ನಿರ್ಲಕ್ಷ್ಯವಹಿಸಿದ್ದರು. ಈ ವೇಳೆ ಮಗು ಆಟವಾಡುತ್ತಾ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿಕೊಂಡಿತ್ತು. ಇದರಿಂದಾಗಿ ಶಾಕ್ ಹೊಡೆದು ಮಗು ಸಾವನ್ನಪ್ಪಿದೆ. ಘಟನೆ ಸಂಬಂಧ ಕಾರವಾರ

ಚಾರ್ಜರ್ ಪಿನ್‌ಗೆ ಬಾಯಿ ಹಾಕಿದ 8 ತಿಂಗಳ ಕಂದಮ್ಮ ಸಾವು Read More »

ಚಾರ್ಮಾಡಿ ಘಾಟಿ ಜಲಪಾತಗಳ ಬಳಿ ಪೋಲಿಸರ ನಿಯೋಜನೆ

ಸಮಗ್ರ ನ್ಯೂಸ್: ಪ್ರವಾಸಿಗರು ರಸ್ತೆ ಮಧ್ಯೆ ವಾಹನಗಳನ್ನು ನಿಲ್ಲಿಸಿಕೊಂಡು ಜಲಪಾತಗಳ ಬಳಿ ಡ್ಯಾನ್ಸ್ ಮಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಜಲಪಾತಗಳ ಬಳಿ ಪೋಲಿಸ್ ಇಲಾಖೆ, ಪೊಲೀಸರನ್ನ ನಿಯೋಜನೆ ಮಾಡಿದೆ. 23 ಕಿಲೋ ಮೀಟರ್ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮಳೆಗಾಲದಲ್ಲಿ ರಸ್ತೆಯುದ್ದಕ್ಕೂ ಹತ್ತಾರು ಜಲಪಾತಗಳು ಸೃಷ್ಟಿಯಾಗಿರುತ್ತವೆ. ಚಿಕ್ಕಮಗಳೂರು ಜಿಲ್ಲೆಯಿಂದ ಉಡುಪಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಬರುವ ಪ್ರವಾಸಿಗರು ಈ ಮಾರ್ಗವನ್ನು ನೆಚ್ವಿಕೊಂಡಿದ್ದರು. ಮಳೆಗಾಲದಲ್ಲಿ ರಸ್ತೆ ಬದಿಯ ಜಲಪಾತಗಳ

ಚಾರ್ಮಾಡಿ ಘಾಟಿ ಜಲಪಾತಗಳ ಬಳಿ ಪೋಲಿಸರ ನಿಯೋಜನೆ Read More »

ಹವಾಮಾನ ವರದಿ: ಕರಾವಳಿಯಲ್ಲಿ ನಾಳೆಯಿಂದ ಮತ್ತೆ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆಗಸ್ಟ್​ 3 ರಿಂದ ವರುಣಾರ್ಭಟ ಶುರುವಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಬಿಟ್ಟು ಉಳಿದ ಭಾಗಗಳಾದ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ

ಹವಾಮಾನ ವರದಿ: ಕರಾವಳಿಯಲ್ಲಿ ನಾಳೆಯಿಂದ ಮತ್ತೆ ಮಳೆ ಸಾಧ್ಯತೆ Read More »