August 2023

ಮೋದಿ ಉಪನಾಮ ಪ್ರಕರಣ| ರಾಹುಲ್ ಗಾಂಧಿಗೆ ಮತ್ತೆ ಮರಳಿದ ಸಂಸದ ಸ್ಥಾನ| ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ

ಸಮಗ್ರ ನ್ಯೂಸ್: ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೀಡಾಗಿದ್ದ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿಧಿಸಿದ ಎರಡು ವರ್ಷ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದಾಗಿ ಲೋಕಸಭೆ ಸದಸ್ಯತ್ವದಿಂದಲೇ ಅನರ್ಹಗೊಂಡಿದ್ದ ರಾಹುಲ್ ಗಾಂಧಿ ನಿರಾಳರಾಗಿದ್ದಾರೆ. ಹಾಗೆಯೇ, ಸಂಸತ್ ಸದಸ್ಯತ್ವ ಸ್ಥಾನವೀಗ ಮರಳಿದೆ. ರಾಹುಲ್ ಗಾಂಧಿ ಲೋಕಸಭೆ ಸದಸ್ವತ್ವದಿಂದ ಅನರ್ಹವಾಗಲು ಕಾರಣವಾಗಿರುವ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ಸಮರ್ಥಿಸಲು […]

ಮೋದಿ ಉಪನಾಮ ಪ್ರಕರಣ| ರಾಹುಲ್ ಗಾಂಧಿಗೆ ಮತ್ತೆ ಮರಳಿದ ಸಂಸದ ಸ್ಥಾನ| ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ Read More »

ಉಡುಪಿ:ವಿಡಿಯೋ ಚಿತ್ರೀಕರಣ ಪ್ರಕರಣ| ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು

ಸಮಗ್ರ ನ್ಯೂಸ್:ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಉಡುಪಿ ಜಿಲ್ಲಾ ಘಟಕದಿಂದ ಆ.3 ರಂದು ಉಡುಪಿ ನಗರದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿಯಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹಾಗೂ ದಿನೇಶ್ ಮೆಂಡನ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿಯ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ

ಉಡುಪಿ:ವಿಡಿಯೋ ಚಿತ್ರೀಕರಣ ಪ್ರಕರಣ| ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲು Read More »

ಸೌಜನ್ಯ ಕೊಲೆ ಪ್ರಕರಣ| ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಳ್ಳು ಆರೋಪ ಖಂಡಿಸಿ ಪ್ರತಿಭಟನೆ| ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆ ಯತ್ನ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕ ರೀತಿಯ ಸುಳ್ಳು ಆರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಮೂಲಕ ಮಂಜುನಾಥ ಸ್ವಾಮಿಯ ಭಕ್ತಾಭಿಮಾನಿಗಳಿಂದ ಉಜಿರೆಯಲ್ಲಿ ಆಯೋಜಿಸಲಾಗಿರುವ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆ ನಡೆಯಿತು. ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಪೇಟೆ ಮೂಲಕ ಸಾಗಿಬಂದ ಬೃಹತ್ ಮೆರವಣಿಗೆ ಎಸ್.ಡಿ.ಎಂ ಕಾಲೇಜು ಎದುರಿಗೆ ಸಾಗಿ ಬಂತು. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನರು ಶಿಸ್ತುಬದ್ಧವಾಗಿ ಮೆರವಣಿಗೆ

ಸೌಜನ್ಯ ಕೊಲೆ ಪ್ರಕರಣ| ಧರ್ಮಸ್ಥಳ ಕ್ಷೇತ್ರದ ವಿರುದ್ಧ ಸುಳ್ಳು ಆರೋಪ ಖಂಡಿಸಿ ಪ್ರತಿಭಟನೆ| ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆ ಯತ್ನ Read More »

ಚಿಕ್ಕಮಗಳೂರು: ಮರಣ ದೃಢೀಕರಣ ಪತ್ರ ನೀಡಲು ಲಂಚ ಸ್ವೀಕರಿಸಿದ ಅಧಿಕಾರಿ ಲೋಕಾಯುಕ್ತ ಬಲೆಗೆ

ಸಮಗ್ರ ನ್ಯೂಸ್ : ಮರಣ ದೃಢೀಕರಣ ಪತ್ರ ಮಾಡಿಕೊಡಲು 12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಾಲೂಕು ಕಚೇರಿಯ ಸಾಂಖೀಕ ನಿರೀಕ್ಷಕರಾದ ಇಕ್ಬಾಲ್ ಎಂಬುವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಗರದ ಆದಿಶಕ್ತಿ ನಗರದ ನಿವಾಸಿ ತಾಜ್ ಎಂಬುವರ ಪತಿ ಇದೇ ಜುಲೈ 7ರಂದು ಸಾವನ್ನಪ್ಪಿದ್ದರು. ಅವರ ಮರಣ ದೃಢೀಕರಣ ಪತ್ರ ಮಾಡಿಕೊಡುವಂತೆ ತಾಲೂಕು ಕಚೇರಿಯ ಸಾಂಖೀಕ ನಿರೀಕ್ಷಕರಿಗೆ ಮನವಿ ಮಾಡಿದ್ದರು. ಮನವಿ ಪತ್ರವನ್ನ ಗಮನಿಸಿದ ಸಾಂಖೀಕ ಅಧಿಕಾರಿ ಇಕ್ಬಾಲ್ ತಾಜ್ ಅವರಿಗೆ ಫೋನ್ ಮಾಡಿ ಕಚೇರಿಗೆ ಕರೆಸಿಕೊಂಡು

ಚಿಕ್ಕಮಗಳೂರು: ಮರಣ ದೃಢೀಕರಣ ಪತ್ರ ನೀಡಲು ಲಂಚ ಸ್ವೀಕರಿಸಿದ ಅಧಿಕಾರಿ ಲೋಕಾಯುಕ್ತ ಬಲೆಗೆ Read More »

ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ಕುಳಿತು ತಿಂದವರು ಬೆಳ್ಳಗೆ ಇರ್ತಾರೆ| ಖಡಕ್ ಉತ್ತರ ನೀಡಿದ ಪ್ರಿಯಾಂಕ ಖರ್ಗೆ

ಸಮಗ್ರ ನ್ಯೂಸ್: ಆರಗ ಜ್ಞಾನೇಂದ್ರ ಕಲ್ಯಾಣ ಕರ್ನಾಟಕದಲ್ಲಿ ನೆರಳಿಲ್ಲ ತಮ್ಮ ತಲೆ ಕೂದಲೇ ನೆರಳು ಎಂಬುವುದಾಗಿ ತುಚ್ಛವಾಗಿ ಮಾತನಾಡಿ ಖರ್ಗೆ ಅವರ ಬಗ್ಗೆ ಬಹಳಷ್ಟು ಕೀಳಾಗಿ ಮಾತನಾಡಿದ್ದಾರೆ ಎಂಬ ವಿಚಾರಕ್ಕೆ ಆರಗ ಜ್ಞಾನೇಂದ್ರ ಅವರಿಗೆ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಶಾಸಕನಿಗೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆ ಮಾತು ಎಂದು

ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ಕುಳಿತು ತಿಂದವರು ಬೆಳ್ಳಗೆ ಇರ್ತಾರೆ| ಖಡಕ್ ಉತ್ತರ ನೀಡಿದ ಪ್ರಿಯಾಂಕ ಖರ್ಗೆ Read More »

ಹಿಂದೂ ದೇವರ ಬಗ್ಗೆ ಆಶ್ಲೀಲವಾಗಿ ಕಮೆಂಟ್| ಆರೋಪಿ ಬಂಧನ

ಸಮಗ್ರ ನ್ಯೂಸ್:ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರ ಬಗ್ಗೆ ಆಶ್ಲೀಲವಾಗಿ ಕಮೆಂಟ್ ಮಾಡಿದ ಆರೋಪದ ಮೇಲೆ ಮಂಗಳೂರು ಮೊಹಮ್ಮದ್ ಸಲ್ಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಕುಲಶೇಖರ ಬಿಕರ್ನಕಟ್ಟೆಯ ಮಸೀದಿ ಹಿಲ್ ರೋಡ್ ನ ಮೊಹಮ್ಮದ್ ಸಲ್ಮಾನ್ (22) Instagram ನಲ್ಲಿ ಹಿಂದೂ ದೇವರ ಬಗ್ಗೆ ಅಶ್ಲೀಲವಾಗಿ ಬರೆದು ಕಮೆಂಟ್ (Comment) ಮಾಡಿದ್ದನು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಆರೋಪಿಯನ್ನು ಬಂಧಿಸಿ ಮಂಗಳೂರಿನ 7 ನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹಿಂದೂ ದೇವರ ಬಗ್ಗೆ ಆಶ್ಲೀಲವಾಗಿ ಕಮೆಂಟ್| ಆರೋಪಿ ಬಂಧನ Read More »

ಸುಳ್ಯ: ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲ್ ಇವರಿಂದ “ಸೌಜನ್ಯ ಹೆಣ್ಣಲ್ಲವೇ” ಬ್ಯಾನರ್ ಅಳವಡಿಕೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ “ಸೌಜನ್ಯ ಹೆಣ್ಣಲ್ಲವೇ” ಎಂಬ ಬ್ಯಾನರನ್ನು ಚೈತನ್ಯ ಗೆಳೆಯರ ಬಳಗ ವೀರಾಂಜನೇಯ ಶಾಖೆ ಶೆಟ್ಟಿಮಜಲಿನ ಬಜರಂಗ ದಳದ ಕಾರ್ಯಕರ್ತರು ಗ್ರಾಮಸ್ಥರು ಅಳವಡಿಸಿದ್ದಾರೆ. ಸೌಜನ್ಯಳ ಸಾವಿಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಹಗಲಿರುಳು ಹೋರಾಡುತ್ತಿರುವ ನೈಜ ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಸದಾ ನಮ್ಮ ಬೆಂಬಲ, ನೈಜ ಹೋರಾಟ ಯಶಸ್ವಿಯಾಗಲಿ ಎಂದು ಬ್ಯಾನರನ್ನು ಚೈತನ್ಯ ಗೆಳೆಯರ ಬಳಗ ವೀರಾಂಜನೇಯ ಶಾಖೆ ಶೆಟ್ಟಿಮಜಲಿನ ಬಜರಂಗ ದಳದ ಕಾರ್ಯಕರ್ತರು ಅಳವಡಿಸಿದ್ದಾರೆ. ಈ

ಸುಳ್ಯ: ಚೈತನ್ಯ ಗೆಳೆಯರ ಬಳಗ ಶೆಟ್ಟಿಮಜಲ್ ಇವರಿಂದ “ಸೌಜನ್ಯ ಹೆಣ್ಣಲ್ಲವೇ” ಬ್ಯಾನರ್ ಅಳವಡಿಕೆ Read More »

ಮುಸ್ಲಿಂ ಮಹಿಳೆಯರೊಂದಿಗೆ ರಕ್ಷಾ ಬಂಧನ ಆಚರಿಸುವಂತೆ ಮೋದಿ ಸೂಚನೆ

ಸಮಗ್ರ ನ್ಯೂಸ್: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರ್ವಾಭಾವಿ ಸಿದ್ಧತೆಗಳನ್ನು ಭಾರತೀಯ ಜನತಾ ಪಕ್ಷ(ಬಿಜೆಪಿ) ನೇತೃತ್ವದ ಪ್ರಜಾಸತ್ತಾತ್ಮಕ ಒಕ್ಕೂಟ(NDA)ವು ನಡೆಸುತ್ತಿದೆ.ತ್ರಿವಳಿ ತಲಾಖ್ ನಿಷೇಧಿಸುವ ತಮ್ಮ ಸರ್ಕಾರದ ನಿರ್ಧಾರವು ಮುಸ್ಲಿಂ ಮಹಿಳೆಯರಲ್ಲಿ ಭದ್ರತೆಯ ಭಾವನೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂಬರುವ ರಕ್ಷಾ ಬಂಧನ ಹಬ್ಬದಲ್ಲಿ ಸಾಧ್ಯವಾದಷ್ಟು ಮುಸ್ಲಿಂ ಮಹಿಳೆಯರನ್ನು ತಲುಪುವಂತೆ ಅವರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಸದರ ಸಭೆಯಲ್ಲಿ ಈ ಬಗ್ಗೆ ಮಾತಾಡಿದ ಮೋದಿ ಈ

ಮುಸ್ಲಿಂ ಮಹಿಳೆಯರೊಂದಿಗೆ ರಕ್ಷಾ ಬಂಧನ ಆಚರಿಸುವಂತೆ ಮೋದಿ ಸೂಚನೆ Read More »

ಸುಳ್ಯ: ಗಡಿಕಲ್ಲು ಗ್ರಾಮದಲ್ಲಿ “ಸೌಜನ್ಯ ಹೆಣ್ಣಲ್ಲವೇ” ಬ್ಯಾನರ್ ಅಳವಡಿಕೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಗಡಿಕಲ್ಲು ಗ್ರಾಮದಲ್ಲಿ “ಸೌಜನ್ಯ ಹೆಣ್ಣಲ್ಲವೇ” ಎಂಬ ಬ್ಯಾನರನ್ನು ಅಳವಡಿಸಿದ್ದಾರೆ. ಸೌಜನ್ಯ ಳ ಸಾವಿಗೆ ಕಾರಣರಾದ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಹಗಲಿರುಳು ಹೋರಾಡುತ್ತಿರುವ ನೈಜ ಹಿಂದೂ ಹುಲಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಸದಾ ನಮ್ಮ ಬೆಂಬಲ ,ನೈಜ ಹೋರಾಟ ಯಶಸ್ವಿಯಾಗಲಿ ಎಂದು ಬ್ಯಾನರನ್ನು ಗ್ರಾಮಸ್ಥರು ಅಳವಡಿಸಿದ್ದಾರೆ.

ಸುಳ್ಯ: ಗಡಿಕಲ್ಲು ಗ್ರಾಮದಲ್ಲಿ “ಸೌಜನ್ಯ ಹೆಣ್ಣಲ್ಲವೇ” ಬ್ಯಾನರ್ ಅಳವಡಿಕೆ Read More »

ಅಲೇಕಾನ್ ಮಲೆಮನೆ ಭಾಗದಲ್ಲಿ ಕಾಡಾನೆ ದಾಳಿ| ಅಪಾರ ಬೆಳೆ ಹಾನಿ, ಪರಿಹಾರಕ್ಕೆ ಒತ್ತಾಯ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಸಮೀಪದ ಅಲೇಕಾನ್ ಹೊರಟ್ಟಿ, ಮಲೆಮನೆ, ಮೇಗೂರು ಹಟ್ಟಿಹರ, ಮಧುಗುಂಡಿ ಭಾಗದಲ್ಲಿ ಮೂರು ಕಾಡಾನೆಗಳು ಸಂಚರಿಸುತ್ತಿದ್ದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. 20 ಕ್ಕೂ ಹೆಚ್ಚು ರೈತರ ಬೆಳೆಗಳನ್ನು ಕಾಡಾನೆ ತುಳಿದು ನಾಶ ಮಾಡಿವೆ. ಹಟ್ಟಿಹರ ರಾಮಪ್ಪ,ಕೃಷ್ಣಪ್ಪ,ಚಂದ್ರಪ್ಪ, ನರೇಂದ್ರಗೌಡ ಮೇಗೂರು,ಜಯಂತ್ ದಿಲೀಪ್ ಮೇಗೂರು, ಮಂಜುನಾಥ್, ಯೋಗೇಶ್,ಮಧುಗುಂಡಿ ಎಸ್ ಕೆ.ಸುನಿಲ್, ಆಲೇಕಾನ್ ಎಚ್.ಕೆ. ಚಂದ್ರೇಗೌಡ,ಸುನಿಲ್,ವೀರಪ್ಪಗೌಡ ಮತ್ತಿತರ ರೈತರ ಕಾಫಿ ತೋಟ, ಬಾಳೆ ಬೆಳೆಗಳನ್ನು ಕಾಡಾನೆಗಳು ತುಳಿದು ಬೆಳೆ ಹಾನಿ ಮಾಡಿವೆ. ಬೆಳೆ ಹಾನಿ ಸ್ಥಳಗಳಿಗೆ

ಅಲೇಕಾನ್ ಮಲೆಮನೆ ಭಾಗದಲ್ಲಿ ಕಾಡಾನೆ ದಾಳಿ| ಅಪಾರ ಬೆಳೆ ಹಾನಿ, ಪರಿಹಾರಕ್ಕೆ ಒತ್ತಾಯ Read More »