August 2023

ಪುತ್ತೂರು:ಸೈನಿಕ ಕಲ್ಯಾಣ ನಿಧಿ ಕಾರ್ಯಕ್ರಮ

ಸಮಗ್ರ ನ್ಯೂಸ್: ರಾಷ್ಟ್ರಭಕ್ತ ನಾಗರಿಕ ವೇದಿಕೆ ಸುರತ್ಕಲ್ ಇದರ ವತಿಯಿಂದ ಅರ್ಹ ಮೂರು ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ಕಾರ್ಯಕ್ರಮವು ಆ.5 ರಂದು ಪುತ್ತೂರಿನ ಸೈನಿಕ ಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಉಪಾಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಬಾಳಾ ಹಾಗೂ ಪುತ್ತೂರು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ರಾಷ್ಟ್ರ ಭಕ್ತರು ಉಪಸ್ಥಿತರಿದ್ದರು.

ಪುತ್ತೂರು:ಸೈನಿಕ ಕಲ್ಯಾಣ ನಿಧಿ ಕಾರ್ಯಕ್ರಮ Read More »

ಅರ್ಧ ಲೀಟರ್ ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ 450 ಮಿ.ಲೀ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ? ಯತ್ನಾಳ್ ಆರೋಪದ ಪ್ಯಾಕ್ಟ್ ಚೆಕ್ ಏನು?

ಸಮಗ್ರ ನ್ಯೂಸ್: ಕೆಎಂಎಫ್‌ ನಂದಿನಿ ಹಾಲಿನ ಅರ್ಧ ಲೀಟರ್‌ ಪ್ಯಾಕೇಟ್‌ನಲ್ಲಿ 450 ಮಿಲೀ ಹಾಲು ನೀಡಲಾಗುತ್ತಿದೆ. ” ಹಾಲಿನ ದರ ಏರಿಕೆ ಜತೆಗೆ ಹಾಲಿನ ಪ್ರಮಾಣವನ್ನು ಕೆಎಂಎಫ್‌ ತಗ್ಗಿಸಿದೆ ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಶುಕ್ರವಾರ ಸಂಜೆ ಟ್ವೀಟ್‌ ಮಾಡಿರುವ ಯತ್ನಾಳ್‌ ಅವರು, ನಂದಿನಿ ಹಾಲಿನ ಪ್ಯಾಕೇಟ್‌ ಪೋಟೊವನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ಮುಖಂಡರಿಗೆ ಎಲ್ಲೆಲ್ಲಿ ಹೇಗೇಗೆ ಮೋಸ ಮಾಡುವ ಕಲೆ ಕರಗತವಾಗಿದೆ! ನಂದಿನಿ ಹಾಲಿನ ಬೆಲೆ

ಅರ್ಧ ಲೀಟರ್ ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ 450 ಮಿ.ಲೀ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ? ಯತ್ನಾಳ್ ಆರೋಪದ ಪ್ಯಾಕ್ಟ್ ಚೆಕ್ ಏನು? Read More »

ಸಂಪಾಜೆ: ನಾಯಿ ನುಂಗಿದ ಹೆಬ್ಬಾವಿನ ರಕ್ಷಣೆ

ಸಮಗ್ರ ನ್ಯೂಸ್:‌ ನಾಯಿ ನುಂಗಿದ ಬೃಹತ್‌ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಬಿಡಲಾಯಿಇತು. ಸಂಪಾಜೆ ವಲಯದ ದಬ್ಬಡ್ಕ ಗ್ರಾಮದ ಪನೇಡ್ಕ ಸುಧಾ ಎಂಬುವವರ ಜಾಗದಲ್ಲಿ ಇದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕೃಷ್ಣ ಕಡೆಪಾಲ ಮತ್ತು ನಾರಾಯಣ ಕಡೆಪಾಲ ಇವರ ನೆರವಿನಿಂದ ಸೆರೆಹಿಡಿದು ಪಟ್ಟಿಘಾಟ್ ಮಿಸಲು ಅರಣ್ಯಕ್ಕೆ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ದಬ್ಬಡ್ಕ ಉಪ ವಲಯದ ಸಿಬ್ಬಂದಿ ಪಾಲ್ಗೊಂಡರು.

ಸಂಪಾಜೆ: ನಾಯಿ ನುಂಗಿದ ಹೆಬ್ಬಾವಿನ ರಕ್ಷಣೆ Read More »

ಮೂಡಿಗೆರೆ: ಅಕ್ರಮವಾಗಿ ಚರ್ಚ್ ನಿರ್ಮಾಣದ ಆರೋಪ| ಗ್ರಾಮಸ್ಥರಿಂದ ವಿರೋಧ

ಸಮಗ್ರ ನ್ಯೂಸ್:ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ನೀಡಿದ ಜಾಗದಲ್ಲಿ ವ್ಯಕ್ತಿಯೋರ್ವರು ಮನೆ ನಿರ್ಮಾಣದ ಬದಲು ಅಕ್ರಮವಾಗಿ ಚರ್ಚ್ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ಕೂಡಲೆ ತಡೆ ಹಿಡಿಯಬೇಕೆಂದು ಒತ್ತಾಯಿಸಿ ಮೂಡಿಗೆರೆ ತಾಲೂಕಿನ ಲೋಕವಳ್ಳಿ ಎಸ್ಟೇಟ್ ಬಡಾವಣೆ ಗ್ರಾಮಸ್ಥರು ಜು. 4ರಂದು ಹಳೆಮೂಡಿಗೆರೆ ಗ್ರಾ.ಪಂ.ಗೆ ಮನವಿ ಸಲ್ಲಿಸಿದರು. ಲೋಕವಳ್ಳಿ ಎಸ್ಟೇಟ್ ಬಡಾವಣೆಯ 3ನೇ ಅಡ್ಡ ರಸ್ತೆಯ ಹಾಂದಿ ಗ್ರಾಮದ ಕ್ರಿಶ್ಚಿಯನ್ ಗೆ ಧರ್ಮಕ್ಕೆ ಮತಾಂತರವಾಗಿರುವ ರಂಗ ಎನ್ನುವ ವ್ಯಕ್ತಿ ಸ್ಥಳೀಯರೊಬ್ಬರಿಗೆ ಆಶ್ರಯ ಯೋಜನೆಯಲ್ಲಿ ಮಂಜೂರಾಗಿದ್ದ ನಿವೇಶನ ಕೊಂಡು ಅದರಲ್ಲಿ ಕಳೆದ

ಮೂಡಿಗೆರೆ: ಅಕ್ರಮವಾಗಿ ಚರ್ಚ್ ನಿರ್ಮಾಣದ ಆರೋಪ| ಗ್ರಾಮಸ್ಥರಿಂದ ವಿರೋಧ Read More »

ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೆಟ್ ನಲ್ಲಿರುವ ಮುದ್ದಾದ ಬಾಲೆ ಯಾರು‌ ಗೊತ್ತಾ?|ಈ ಪ್ರಶ್ನೆಗೆ ಉತ್ತರ ಇಲ್ಲಿದೆ

ಸಮಗ್ರ ನ್ಯೂಸ್: ಪಾರ್ಲೆ-ಜಿ (Parle-G) ಬಿಸ್ಕೆಟ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಪ್ರಸ್ತುತ ಕಾಲಘಟ್ಟದಲ್ಲಿ ವಿಭಿನ್ನ ಬಿಸ್ಕೆಟ್​​ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಹೆಚ್ಚಿನವರು ಪಾರ್ಲೆ-ಜಿ ಬಿಸ್ಕೆಟನ್ನೇ ಇಷ್ಟಪಡುತ್ತಾರೆ. ಈ ಬಿಸ್ಕೆಟ್ ಕವರ್ ನಲ್ಲಿ ಪುಟ್ಟ ಹುಡುಗಿಯೊಬ್ಬಳ ಮುದ್ದಾದ ಚಿತ್ರವಿದೆ. ವಿಶ್ವದಲ್ಲೇ ಅತೀ ಹೆಚ್ಚು ಮಾರಾಟವಾಗುವ ಈ ಬಿಸ್ಕೆಟ್ 12 ಕೆಲಸಗಾರರೊಂದಿಗೆ ಪ್ರಾರಂಭವಾಗಿತ್ತು. ಈಗ ಈ ಬಿಸ್ಕೆಟ್ ಕಂಪೆನಿಯು ಪ್ರತಿವರ್ಷ 8000 ಕೋಟಿ ಮೌಲ್ಯ ಬಿಸ್ಕೆಟ್​​ಗಳನ್ನು ಮಾರಾಟ ಮಾಡುತ್ತಿರುವುದು ದಾಖಲೆ ಅಂತಾನೇ ಹೇಳಬಹುದು. ಈ ಬಿಸ್ಕೆಟ್ ಪೊಟ್ಟಣದಲ್ಲಿ ಒಬ್ಬ ಪುಟ್ಟ ಬಾಲಕಿಯ

ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೆಟ್ ನಲ್ಲಿರುವ ಮುದ್ದಾದ ಬಾಲೆ ಯಾರು‌ ಗೊತ್ತಾ?|ಈ ಪ್ರಶ್ನೆಗೆ ಉತ್ತರ ಇಲ್ಲಿದೆ Read More »

ಈವಾಗ ಕಾಶ್ಮೀರದಲ್ಲಿ ಸ್ವಾತಂತ್ರ್ಯ ನೋಡಿ| ಇದು ಈ ಮೊದಲು ಇತ್ತೇ?

ಸಮಗ್ರ ನ್ಯೂಸ್: ಕಾಶ್ಮೀರದಲ್ಲಿ ಸ್ವಾತಂತ್ರ್ಯ ಇಲ್ಲ. ಕೇಂದ್ರ ಸರ್ಕಾರ ಆರ್ಟಿಕಲ್‌ 370 ತೆಗೆದುಹಾಕುವ ಮೂಲಕ ತಪ್ಪು ಮಾಡಿದೆ ಎನ್ನುವವರಿಗೆಲ್ಲಾ ಕೆನ್ನೆಗೆ ಹೊಡೆದಂತಿರುವ ವಿಡಿಯೋವೊಂದು ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ವೈರಲ್‌ ಆಗಿದೆ. ಕಾಶ್ಮೀರದಲ್ಲಿ ಆರ್ಟಿಕಲ್‌ 370 ತೆಗೆದಿದ್ದು ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಾಡುತ್ತಿದ್ದರೆ, ಇನ್ನೊಂದೆಡೆ ಕಾಶ್ಮೀರದ ಬಾರಾಮುಲ್ಲಾ ಪ್ರದೇಶದಲ್ಲಿ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ವಿಡಿಯೋಗಳು ವೈರಲ್‌ ಆಗುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾಶ್ಮೀರದ ಆರ್ಟಿಕಲ್‌ 370 ವಿಧಿ ಚರ್ಚೆ ಆಗುತ್ತಿರುವ ನಡುವೆ,

ಈವಾಗ ಕಾಶ್ಮೀರದಲ್ಲಿ ಸ್ವಾತಂತ್ರ್ಯ ನೋಡಿ| ಇದು ಈ ಮೊದಲು ಇತ್ತೇ? Read More »

ಯಕ್ಷ ಗುರು ವಿಶ್ವ ವಿನೋದ ಬನಾರಿ, ಕುಮಾರ ಸುಬ್ರಹ್ಮಣ್ಯರಿಗೆವನಜ ರಂಗಮನೆ ಪ್ರಶಸ್ತಿ 2022-23

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ವತಿಯಿಂದರಂಗಮನೆಯ ಅಧ್ಯಕ್ಷ ಡಾ|| ಜೀವನ್ ರಾಂ ಸುಳ್ಯರವರ ಮಾತೃಶ್ರೀ ಶ್ರೀಮತಿ ವನಜಾಕ್ಷಿ ಜಯರಾಮ ಇವರ ನೆನಪಿನಲ್ಲಿ ವರ್ಷಂಪ್ರತಿ ಕೊಡಮಾಡುವ ‘ವನಜ ರಂಗಮನೆ ಪ್ರಶಸ್ತಿ’ಗೆ 2022 ನೇ ಸಾಲಿನಲ್ಲಿ ಯಕ್ಷ ಗುರು ಕೆ.ವಿಶ್ವವಿನೋದ ಬನಾರಿ ಹಾಗೂ 2023 ನೇ ಸಾಲಿಗೆ ಹಿಮ್ಮೇಳ ಗುರುಗಳಾದ ವಳಕ್ಕುಂಜ ಕುಮಾರ ಸುಬ್ರಹ್ಮಣ್ಯರನ್ನು ಆಯ್ಕೆ ಮಾಡಲಾಗಿದೆ. ವಿಶ್ವ ವಿನೋದ ಬನಾರಿ ಮೇರುವ್ಯಕ್ತಿತ್ವದ ಯಕ್ಷಗುರು ಕಿರಿಕ್ಕಾಡು ವಿಷ್ಣು ಭಟ್ಟ ಮತ್ತು ಶ್ರೀಮತಿ ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರರಾದ

ಯಕ್ಷ ಗುರು ವಿಶ್ವ ವಿನೋದ ಬನಾರಿ, ಕುಮಾರ ಸುಬ್ರಹ್ಮಣ್ಯರಿಗೆವನಜ ರಂಗಮನೆ ಪ್ರಶಸ್ತಿ 2022-23 Read More »

ವೈಟ್ ಬೋರ್ಡ್ ಕಾರ್ ಇದ್ದವರಿಗೆ ಬಿಪಿಎಲ್ ಕಾರ್ಡ್ ಇಲ್ಲ

ಸಮಗ್ರ ನ್ಯೂಸ್:‌ ಅನ್ನಭಾಗ್ಯ ಯೋಜನೆಗೆ ಚಾಲನೆ ದೊರೆತು 25 ದಿನಗಳ ಅವಧಿಯಲ್ಲಿ 1 ಕೋಟಿ ಕುಟುಂಬಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ. ಹೊಸ ಪಡಿತರ ಚೀಟಿ ವಿತರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ರೇಷನ್ ಕಾರ್ಡ್ ತಿದ್ದುಪಡಿ/ರದ್ದತಿ/ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಆದಷ್ಟು ಬೇಗ ಹಣದ ಬದಲಿಗೆ ಅಕ್ಕಿ ಕೊಡಲಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಕೆ.ಎಚ್. ಮುನಿಯಪ್ಪ ಅವರು ಎಲ್ಲೊ ಬೋರ್ಡ್‌

ವೈಟ್ ಬೋರ್ಡ್ ಕಾರ್ ಇದ್ದವರಿಗೆ ಬಿಪಿಎಲ್ ಕಾರ್ಡ್ ಇಲ್ಲ Read More »

ಮಂಗಳೂರು: ಮಹಿಳೆಯ ಸ್ನಾನದ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿದ ಸಂಘಟನೆ ಕಾರ್ಯಕರ್ತ

ಸಮಗ್ರ ನ್ಯೂಸ್: ನೆರೆ ಮನೆಯ ಮಹಿಳೆಯೊಬ್ಬರು ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುವುದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ಯುವಕನೋರ್ವನನ್ನು ಸ್ಥಳೀಯರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ವರದಿಯಾಗಿದೆ. ಬಂಧಿತನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂದು ತಿಳಿದು ಬಂದಿದೆ. ಈತ ಹಿಂದೂ ಸಂಘಟನೆ ಪಕ್ಷಿಕೆರೆ ಘಟಕದ ಸಕ್ರಿಯ ಕಾರ್ಯಕರ್ತ ಎಂದು ಹೇಳಲಾಗಿದೆ. ಘಟನೆ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ಬುಧವಾರ ರಾತ್ರಿ 11 ಗಂಟೆಗೆ ನಡೆದಿದ್ದು ಶುಕ್ರವಾರ ಬೆಳಕಿಗೆ

ಮಂಗಳೂರು: ಮಹಿಳೆಯ ಸ್ನಾನದ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿದ ಸಂಘಟನೆ ಕಾರ್ಯಕರ್ತ Read More »

ಸುಳ್ಯ: ಕಳ್ಳತನ ಹೀಗೂ ಮಾಡಬಹುದಾ!? ದನದ ಕೊಟ್ಟಿಗೆಗೆ ನುಗ್ಗಿ ಕದ್ದು ಹಾಲು ಕರೆದ‌ ಮಹಿಳೆ

ಸಮಗ್ರ ನ್ಯೂಸ್: ದನದ ಕೊಟ್ಟಿಗೆಗೆ‌ ನುಗ್ಗಿ ಕದ್ದು ಹಾಲು‌ ಕರೆದು ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ‌ ನಡೆದಿದೆ. ಕಳ್ಳತನದ ರೀತಿಯೇ ವಿಚಿತ್ರವಾಗಿದ್ದು ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಕರಿಕ್ಕಳದ ಮನೆಯೊಂದರಲ್ಲಿ ಮಹಿಳೆಯೊಬ್ಬರು ಹಲವು ವರ್ಷಗಳಿಂದ ಹಾಲು ಕರೆಯುವ ಕೆಲಸದಲ್ಲಿದ್ದು ಅವರೇ ಡೈರಿಗೆ ಕೊಂಡೊಯ್ಯುತಿದ್ದರೆನ್ನಲಾಗಿದೆ. ಇತ್ತೀಚೆಗೆ ಆ ಮಹಿಳೆ 4-5 ದಿನ ರಜೆ ಮಾಡಿದ್ದರು. ಈ ಸಂದರ್ಭ‌ ಮನೆಯವರು ಹಾಲು ಕರೆಯುವ ಕೆಲಸಕ್ಕೆ ಬೇರೊಂದು ವ್ಯಕ್ತಿಯನ್ನು ಕೆಲಸಕ್ಕೆ ನೇಮಿಸಿದ್ದರೆನ್ನಲಾಗಿದೆ. ಆದರೆ ಹೊಸದಾಗಿ

ಸುಳ್ಯ: ಕಳ್ಳತನ ಹೀಗೂ ಮಾಡಬಹುದಾ!? ದನದ ಕೊಟ್ಟಿಗೆಗೆ ನುಗ್ಗಿ ಕದ್ದು ಹಾಲು ಕರೆದ‌ ಮಹಿಳೆ Read More »