August 2023

ಎಂಟನೇ ತರಗತಿ ವಿದ್ಯಾರ್ಥಿನಿ ಈಗ ಐದು ತಿಂಗಳ ಗರ್ಭಿಣಿ| ಶಿಕ್ಷಕನೇ ಭಕ್ಷಕನಾದ ಕಥೆ!!

ಸಮಗ್ರ ನ್ಯೂಸ್: ಶಿಕ್ಷಕನಾಗಿ ಖಾಸಗಿ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿ ತನ್ನ ವಿದ್ಯಾರ್ಥಿನಿಗೆ ನಿರಂತರ ಲೈಂಗಿಕ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಶಿಕ್ಷಕ ಶಿವಕುಮಾರ್‌ (33) ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಸಂತ್ರಸ್ತೆಯು ಈತ ಬೋಧಿಸುತ್ತಿದ್ದ ಶಾಲೆಯಲ್ಲೇ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಈಗ ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದು, ಇತ್ತೀಚಿಗಷ್ಟೇ ಶಿಕ್ಷಕನ ಕೃತ್ಯ ಬಯಲಾಗಿದೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಪೋಷಕರು ಗೌನಿಪಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಶಿಕ್ಷಕನ […]

ಎಂಟನೇ ತರಗತಿ ವಿದ್ಯಾರ್ಥಿನಿ ಈಗ ಐದು ತಿಂಗಳ ಗರ್ಭಿಣಿ| ಶಿಕ್ಷಕನೇ ಭಕ್ಷಕನಾದ ಕಥೆ!! Read More »

ಜೇನು ಮಿಶ್ರಿತ ಹಾಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದು|ಯಾವೆಲ್ಲ ರೋಗಗಳಿಗೆ ರಾಮಬಾಣ|ಇಲ್ಲಿದೆ ಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಹಾಲನ್ನು ಕುಡಿಯುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನವಿದೆ. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಹಾಲು ಕುಡಿಯಲು ಸಲಹೆ ನೀಡುತ್ತಾರೆ. ಕೆಲವರು ಹಾಲಿಗೆ ಸಕ್ಕರೆಯನ್ನು ಬೆರೆಸಿ ಕುಡಿಯುತ್ತಾರೆ. ಹೌದು, ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವವರು, ಸಕ್ಕರೆ ಬದಲು ಜೇನುತುಪ್ಪ ಬೆರೆಸಿ ಕುಡಿಯಲು ಆರಂಭಿಸಿದರೆ ದೇಹಕ್ಕೆ ಅನೇಕ ಶಕ್ತಿಶಾಲಿ ಪ್ರಯೋಜನಗಳು ಸಿಗುತ್ತವೆ. ಇದರೊಂದಿಗೆ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮೂಲದಿಂದ ಕೊನೆಗೊಳ್ಳುತ್ತವೆ. ಜೇನುತುಪ್ಪಹಾಲನ್ನು ಕೆಲವರು ಇಷ್ಟಪಡುತ್ತಾರೆ. ಇನ್ನು ಕೆಲವರು ಇಷ್ಟಪಡುವುದಿಲ್ಲ. ಜೇನು ತುಪ್ಪ ಬೆರೆಸಿ ಹಾಲು ಕುಡಿಯುವುದರಿಂದ ಆಗುವ ಅದ್ಭುತ

ಜೇನು ಮಿಶ್ರಿತ ಹಾಲು ಆರೋಗ್ಯಕ್ಕೆ ಎಷ್ಟು ಒಳ್ಳೆಯದು|ಯಾವೆಲ್ಲ ರೋಗಗಳಿಗೆ ರಾಮಬಾಣ|ಇಲ್ಲಿದೆ ಪೂರ್ಣ ಮಾಹಿತಿ Read More »

ಚಂದ್ರಯಾನ – 3; ಚಂದ್ರನ ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ

ಸಮಗ್ರ ನ್ಯೂಸ್: ಚಂದ್ರಯಾನ -3 ಸೆರೆಹಿಡಿದ ಚಂದ್ರನ ಮೊದಲ ನೋಟವನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಒಂದು ದಿನದ ನಂತರ ಈ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭಾರತದ ಮೂರನೇ ಮಾನವರಹಿತ ಚಂದ್ರಯಾನ ಮಿಷನ್ ಚಂದ್ರಯಾನ 3 ವೀಕ್ಷಿಸಿದ ಚಂದ್ರನ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಚಂದ್ರಯಾನ -3 ಶನಿವಾರ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ನಂತರ ಚಿತ್ರಗಳನ್ನು ಸೆರೆಹಿಡಿದಿದೆ.“ಆಗಸ್ಟ್ 5, 2023 ರಂದು

ಚಂದ್ರಯಾನ – 3; ಚಂದ್ರನ ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ Read More »

ಮಣಿಪುರ ಹಿಂಸಾಚಾರ| ಬಿಜೆಪಿ ಸಖ್ಯ ತೊರೆದ ಮಿತ್ರಪಕ್ಷ

ಸಮಗ್ರ ನ್ಯೂಸ್: ಕಳೆದ ಮೂರು ತಿಂಗಳಿನಿಂದ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ಹಿನ್ನಡೆಯಾಗಿದೆ. ಬಿಜೆಪಿ ಮಿತ್ರ ಪಕ್ಷವೊಂದು ಸರಕಾರಕ್ಕೆ ತಾನು ನೀಡಿರುವ ಬೆಂಬಲವನ್ನು ರವಿವಾರ ವಾಪಸ್ ಪಡೆದು ಮುಖ್ಯಮಂತ್ರಿ ಬಿರೇನ್ ಸಿಂಗ್ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ಇಬ್ಬರು ಶಾಸಕರನ್ನು ಹೊಂದಿರುವ ‘ಕುಕಿ ಪೀಪಲ್ಸ್ ಅಲಿಯನ್ಸ್’ ಪಕ್ಷ ಸರಕಾರಕ್ಕೆ ತಾನು ನೀಡಿರುವ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ರಾಜ್ಯಪಾಲೆ ಅನುಸೂಯ ಉಯಿಕೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಮಣಿಪುರ ಹಿಂಸಾಚಾರ| ಬಿಜೆಪಿ ಸಖ್ಯ ತೊರೆದ ಮಿತ್ರಪಕ್ಷ Read More »

ಸೌಜನ್ಯ ಅತ್ಯಾಚಾರ; ಕೊಲೆ ಪ್ರಕರಣ| ಸೌಜನ್ಯ ಪರ ಬ್ಯಾನರ್ ತೆರವಿಗೆ ಬೆಳ್ತಂಗಡಿ ತಾ.ಪಂ ಇಒ ಆದೇಶ

ಸಮಗ್ರ ನ್ಯೂಸ್: ಧರ್ಮಸ್ಥಳ ಸಮೀಪದ ಮಣ್ಣಸಂಕ ಬಳಿ ಕಳೆದ 11 ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಈಗಲೂ ಬಿಸಿಬಿಸಿ ಚರ್ಚೆಯಲ್ಲಿದೆ. ಈ ಪ್ರಕರಣದ ಆರೋಪಿಗಳು ಯಾರು ಅನ್ನೋದನ್ನು ತನಿಖಾಧಿಕಾರಿಗಳಿಗೆ ಇಲ್ಲಿಯ ತನಕ ಪತ್ತೆ ಹಚ್ಚಲಾಗದಿದ್ದರೂ ಕೂಡ ಜನರ ಬಾಯಲ್ಲಿ ಅವರಿವರ ಹೆಸರು ಕಳೆದ 11 ವರ್ಷಗಳಿಂದಲೂ ಹರಿದಾಡುತ್ತಲೇ ಇದೆ. ಈ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ರಕ್ಷಣೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿರುವ ಮಧ್ಯೆಯೇ ಇತ್ತೀಚೆಗೆ ಬಂಧಿತನಾಗಿದ್ದ ಸಂತೋಷ್ ರಾವ್ ಅವರನ್ನು

ಸೌಜನ್ಯ ಅತ್ಯಾಚಾರ; ಕೊಲೆ ಪ್ರಕರಣ| ಸೌಜನ್ಯ ಪರ ಬ್ಯಾನರ್ ತೆರವಿಗೆ ಬೆಳ್ತಂಗಡಿ ತಾ.ಪಂ ಇಒ ಆದೇಶ Read More »

ಆಹಾರ-ಆರೋಗ್ಯ| ಈ ಸಂಡೆ ಮಾಡಿ ಆರೋಗ್ಯಕರ ಗೋಧಿ ಉಂಡೆ

ಸಮಗ್ರ ನ್ಯೂಸ್: ಮಕ್ಕಳು ಮನೆಯಲ್ಲಿ ಇದ್ದರೆ ಸಿಹಿತಿಂಡಿಗೆ ಬೇಡಿಕೆ ಜಾಸ್ತಿ. ಏನಾದರೂ ತಿಂಡಿ ಬೇಕು ಎಂದು ಹಟ ಮಾಡುತ್ತಾ ಇರುತ್ತಾರೆ. ಬೇಗನೆ ಆಗುವಂತಹ ತಿಂಡಿ ಇದ್ದರೆ ತಾಯಂದಿರಿಗೂ ಕೆಲಸ ಕಡಿಮೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡುವ ಗೋಧಿ ಲಡ್ಡು ಇದೆ. ಆರೋಗ್ಯಕ್ಕೂ ತುಂಬ ಒಳ್ಳೆಯದು ಇದು. ಬೇಕಾಗುವ ಸಾಮಗ್ರಿಗಳು:1 ಕಪ್ ಗೋಧಿಹಿಟ್ಟು, ½ ಕಪ್ – ಬೆಲ್ಲ, ½ ಕಪ್ – ತುಪ್ಪ, ½ ಕಪ್ – ಮಿಕ್ಸಡ್ ಡ್ರೈಫ್ರೂಟ್ಸ್ ತರಿ ತರಿಯಾಗಿ ಪುಡಿ ಮಾಡಿಕೊಂಡಿದ್ದು, (ಗೋಡಂಬಿ,

ಆಹಾರ-ಆರೋಗ್ಯ| ಈ ಸಂಡೆ ಮಾಡಿ ಆರೋಗ್ಯಕರ ಗೋಧಿ ಉಂಡೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಪ್ರಕಾರ ಈ ವಾರದ ಭವಿಷ್ಯ ನೀಡಲಾಗಿದ್ದು 12 ರಾಶಿಗಳಿಗೆ ಈ ವಾರ ಹೇಗಿರಲಿದೆ. ಆಗಸ್ಟ್ 6 ರಿಂದ ಆಗಸ್ಟ್ 12 ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಯಾರಿಗೆ ಲಾಭ? ಯಾವ ರಾಶಿಗೆ ಶುಭ? ಎನ್ನುವುದನ್ನು ತಿಳಿಯಿರಿ. ಮೇಷ ರಾಶಿ:ಈ ವಾರದಲ್ಲಿ ನೀವು ಶುಭಫಲವಿದೆ. ಪಂಚಮದಲ್ಲಿ ಇರುವ ಶುಕ್ರನು ಚತುರ್ಥಕ್ಕೆ ಬಂದು ಸೂರ್ಯನ ಜೊತೆ ಇರುವನು.‌ ಮಂಗಲ ಕಾರ್ಯಗಳಿಗೆ ನೂತನ ಗೃಹನಿರ್ಮಾಣ ಹಾಗೂ ವಿವಾಹ ಮೊದಲಾದ ಕಾರ್ಯಗಳಿಗೆ‌

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸೌಜನ್ಯ ಕುಟುಂಬದ ಪರ ನಿಂತ ಕಾಂಗ್ರೆಸ್| ನ್ಯಾಯ ಕೇಳುವುದೂ ಧರ್ಮವೇ…ಎಂದು ಟ್ವೀಟ್

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಸೌಜನ್ಯ ಕುಟುಂಬಕ್ಕೆ ರಕ್ಷಣೆ ನೀಡುವುದಾಗಿ ಹೇಳಿಕೊಂಡಿದೆ. ‘ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರಕಾರ ಬದ್ಧವಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. ಧರ್ಮವೆಂದರೆ ನ್ಯಾಯ, ನ್ಯಾಯವನ್ನು ಕೇಳುವುದು ಕೂಡ ಧರ್ಮವೇ. ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನೊಂದ ಕುಟುಂಬದ

ಸೌಜನ್ಯ ಕುಟುಂಬದ ಪರ ನಿಂತ ಕಾಂಗ್ರೆಸ್| ನ್ಯಾಯ ಕೇಳುವುದೂ ಧರ್ಮವೇ…ಎಂದು ಟ್ವೀಟ್ Read More »

ಇಸ್ರೋದಿಂದ ಮಹತ್ವದ ಮೈಲಿಗಲ್ಲು| ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ – 3 ನೌಕೆ

ಸಮಗ್ರ ನ್ಯೂಸ್: ಇಸ್ರೋ ಶನಿವಾರ ಚಂದ್ರಯಾನ -3 ಅನ್ನು ಯಾವುದೇ ತೊಂದರೆಯಿಲ್ಲದೆ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ನಿರ್ದೇಶಿಸಿದೆ, ಇದು ಭಾರತದ ಮೂರನೇ ಚಂದ್ರ ಕಾರ್ಯಾಚರಣೆಗೆ ಪ್ರಮುಖ ಮೈಲಿಗಲ್ಲಾಗಿದೆ. ಜುಲೈ 14 ರಂದು LVM-3ನಲ್ಲಿ ಉಡಾವಣೆಯಾದಾಗಿನಿಂದ ಚಂದ್ರಯಾನ -3 ರ 40 ದಿನಗಳ ಚಂದ್ರ ಪ್ರಯಾಣದಲ್ಲಿ ಶನಿವಾರ 22 ದಿನಗಳನ್ನು ಪೂರ್ಣಗೊಳಿಸಿದೆ. ಬಾಹ್ಯಾಕಾಶ ನೌಕೆಯ ಕಾರ್ಯ ವೈಖರಿಯನ್ನು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ (ಇಸ್ಟ್ರಾಕ್) ನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್ (ಎಂಒಎಕ್ಸ್) ನಿಂದ ನಿರಂತರವಾಗಿ

ಇಸ್ರೋದಿಂದ ಮಹತ್ವದ ಮೈಲಿಗಲ್ಲು| ಚಂದ್ರನ ಕಕ್ಷೆಗೆ ಸೇರಿದ ಚಂದ್ರಯಾನ – 3 ನೌಕೆ Read More »

ಚಿಕ್ಕಮಗಳೂರು: ಮೀನು ಹಿಡಿಯಲು ಹೋಗಿದ್ದ ಬಾಲಕರಿಬ್ಬರು ನೀರುಪಾಲು

ಸಮಗ್ರ ನ್ಯೂಸ್:ಮೀನು ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾದ ಘಟನೆ ಮೂಡಿಗೆರೆ ಪಟ್ಟಣದ ಹೊರವಲಯದ ಹ್ಯಾಂಡ್ ಪೋಸ್ಟ್ ಬಳಿ ಸಂಭವಿಸಿದೆ. ತನ್ಮಯಿ, ಕಿಶೋರ್ (೧೨) ಮೃತ ಬಾಲಕರು. ಮೂವರು ಬಾಲಕರು ಮೀನು ಹಿಡಿಯಲು ತೆರಲಿದ್ದು ಈ ವೇಳೆ ಇಬ್ಬರು ನೀರುಪಾಲಗಿದ್ದಾರೆ. ಇನ್ನೊರ್ವ ಕೆರೆಯಲ್ಲಿ ಸಿಲುಕಿದ್ದು ಹರಸಾಹನ ಪಟ್ಟು ಬಚಾವ್ ಆಗಿದ್ದಾನೆ. ಇನ್ನೂ ಸ್ಥಳೀಯ ಈಜು ತಜ್ಞರು ಹಾಗೂ ಪೊಲೀಸರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಇಬ್ಬರ ಮೃತದೇಹವನ್ನ ಹೊರತೆಗೆಯಲಾಗಿದೆ.

ಚಿಕ್ಕಮಗಳೂರು: ಮೀನು ಹಿಡಿಯಲು ಹೋಗಿದ್ದ ಬಾಲಕರಿಬ್ಬರು ನೀರುಪಾಲು Read More »