August 2023

ಕೇರಳ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರಕ್ಕೆ ಒತ್ತಾಯ

ಸಮಗ್ರ ನ್ಯೂಸ್: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಎಲ್ಲ ಭಾಷೆಗಳಲ್ಲೂ ‘ಕೇರಳಂ’ ಎಂದೇ ಮರುನಾಮಕರಣ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ. ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿರುವ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವನ್ನು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರತಿಪಕ್ಷಗಳು ಅಂಗೀಕರಿಸಿದವು. ಸಿಎಂ […]

ಕೇರಳ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರಕ್ಕೆ ಒತ್ತಾಯ Read More »

ಕೊನೆಗೂ ಕುಸಿತ ಕಂಡ ಟೊಮ್ಯಾಟೊ ದರ| ಈವಾಗ ಮಾರ್ಕೆಟ್ ಹೇಗಿದೆ..?

ಸಮಗ್ರ ನ್ಯೂಸ್: ಚಿನ್ನದಷ್ಟೇ ಬೆಲೆ ಹೊಂದಿದ್ದ ಟೊಮ್ಯಾಟೋ ಬೆಲೆಯಲ್ಲಿ ಈಗ ಕುಸಿತ ಕಂಡಿದ್ದು, ಇದೀಗ ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ ಜೂನ್ ತಿಂಗಳಿನಿಂದ ಮುಂಗಾರಿನ ಅಭಾವದಿಂದ ಟೊಮ್ಯಾಟೋ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಇದರಿಂದ ರೈತರಿಗೇನೋ ತುಂಬಾ ಲಾಭವಾಯಿತು ಆದರೆ ಗ್ರಾಹಕರಿಗೆ ಎಟುಕಲಾರದಂತಹ ದರದಲ್ಲಿ ಟೊಮೇಟೊ ಮಾರಾಟವಾಗಿತ್ತು. ಆದರೆ ಈಗ ಕಳೆದು ಒಂದು ವಾರದಿಂದ ಟೊಮ್ಯಾಟೋ ಬೆಲೆ ಕುಸಿತ ಕಂಡಿದ್ದು, ಇದೀಗ ಒಂದು ಬಾಕ್ಸ್‌ಗೆ 1000 ರೂಪಾಯಿ ಇಂದ 1200 ರೂಪಾಯಿಗೆ ಮಾರಾಟವಾಗುತ್ತಿದ್ದು, ಕೆಜಿಗೆ

ಕೊನೆಗೂ ಕುಸಿತ ಕಂಡ ಟೊಮ್ಯಾಟೊ ದರ| ಈವಾಗ ಮಾರ್ಕೆಟ್ ಹೇಗಿದೆ..? Read More »

ಮೈಸೂರು: ದಸರಾ ಗಜಪಡೆ ಪಟ್ಟಿ ಬಿಡುಗಡೆ: ಈ ಬಾರಿ ಜಂಬೂ ಸವಾರಿಯಲ್ಲಿ 9 ಗಜಗಳು

ಸಮಗ್ರ ನ್ಯೂಸ್:ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಹೊತ್ತು ಸಾಗಲು ದಸರಾ ಗಜಪಡೆ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ 9 ಗಜಪಡೆಯಲ್ಲಿ ಸ್ಥಾನ ನೀಡಲಾಗಿದೆ. ಬೆಂಗಳೂರಿನ ಅಶೋಕಪುರದಲ್ಲಿರುವ ಅರಣ್ಯಭವನದಲ್ಲಿ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಜಿ.ವಿ ರಂಗರಾವ್ ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲ ತಂಡದಲ್ಲಿ 9 ಆನೆಗಳು ಪಾಲ್ಗೊಳ್ಳಲಿವೆ.

ಮೈಸೂರು: ದಸರಾ ಗಜಪಡೆ ಪಟ್ಟಿ ಬಿಡುಗಡೆ: ಈ ಬಾರಿ ಜಂಬೂ ಸವಾರಿಯಲ್ಲಿ 9 ಗಜಗಳು Read More »

ಕೀಟೋ ಡಯಟ್| ಏನಿದರ ರಹಸ್ಯ?

ಸಮಗ್ರ ನ್ಯೂಸ್:ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಅದರಲ್ಲೂ ದೇಹದ ತೂಕದ ಬಗ್ಗೆ ವಿಶೇಷವಾದ ಕಾಳಜಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಯುವಕರು ಮತ್ತು ಯುವತಿಯರಲ್ಲಿ ಆಕರ್ಷಕವಾಗಿ ಕಾಣಲು ದೇಹದ ತೂಕ ಇಳಿಸುವ ವಿಶೇಷವಾದ ಆಹಾರ ಪದ್ಧತಿ, ದೈಹಿಕ ಕಸರತ್ತು, ಏರಿಯಲ್ ಯೋಗ, ಜಿಮ್ ಕಸರತ್ತು ಮುಂತಾದವುಗಳಿಗೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಈ ಪಟ್ಟಿಗೆ ಸೇರಿರುವ ಒಂದು ಆಹಾರ ಪದ್ಧತಿಯನ್ನೇ ಕೀಟೋಜೆನಿಕ್ ಡಯಟ್ ಅಥವಾ ಕೀಟೋ ಡಯಟ್ ಎಂದು ಕರೆಯಲಾಗುತ್ತದೆ. ಇದು ಇಂದಿನ ಯುವಕ ಯುವತಿಯರನ್ನು ಸೂಜಿಗಲ್ಲಿನಂತೆ

ಕೀಟೋ ಡಯಟ್| ಏನಿದರ ರಹಸ್ಯ? Read More »

ಕೆಂಗಣ್ಣು (ಮದ್ರಾಸ್ ಐ)| ಮುಂಜಾಗ್ರತಾ ಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಇದೊಂದು ಸಾಂಕ್ರಾಮಿಕವಾಗಿ ಹರಡುವ ಬ್ಯಾಕ್ಟಿರೀಯಾ ಮತ್ತು ವೈರಾಣು ಸೋಂಕು ಆಗಿರುತ್ತದೆ. ಕಣ್ಣಿನ ಹೊರಭಾಗದ ಬಿಳಿ ಪಾರದರ್ಶಕ ಪದರವಾದ ಕಂಜಕ್ಟೈವಾ ಮತ್ತು ಕಣ್ಣಿನ ರೆಪ್ಪೆಯ ಒಳಭಾಗವನ್ನು ಹೆಚ್ಚಾಗಿ ಕಾಡುತ್ತದೆ. ಈ ಕಣ್ಣಿನ ಉರಿಯೂತವನ್ನು ಕಂಜಕ್ಟೆವೈಟಿಸ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ವೈರಾಣು, ಬ್ಯಾಕ್ಟೀರಿಯಾ, ಅಲರ್ಜಿ ಮತ್ತು ರಾಸಾಯನಿಕಗಳ ಸಂಪರ್ಕದಿಂದ ಈ ಕಂಜಕ್ಟೆವೈಟಿಸ್ ರೋಗ ಬರುತ್ತದೆ. ಸಾಮಾನ್ಯವಾಗಿ ಅಡಿನೋ ವೈರಾಣು ಗುಂಪಿಗೆ ಸೇರಿದ ವೈರಾಣುವಿನಿಂದ ಹರಡುತ್ತದೆ. ಅದೇ ರೀತಿ ಸ್ಟಾಪೈಲೋಕಾಕಸ್ ಆರಿಯಸ್ ಮತ್ತು ಸ್ಟೆಪ್ಟೊಕೋಕಸ್ ನ್ಯುಮೋನಿಯಾ ವೈರಾಣುವಿನಿಂದಲೂ ಬರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ

ಕೆಂಗಣ್ಣು (ಮದ್ರಾಸ್ ಐ)| ಮುಂಜಾಗ್ರತಾ ಕ್ರಮಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಮಂಗಳೂರು: ಐದು ತಲೆಮಾರಿನ ಕುಟುಂಬದಿಂದ ಏಕಕಾಲಕ್ಕೆ ಅಂಚೆ ಖಾತೆ ಓಪನ್

ಸಮಗ್ರ ನ್ಯೂಸ್: ಕರಾವಳಿ ಜಿಲ್ಲೆ ಮಂಗಳೂರು ಮೂಲದ ಈ ಕುಟುಂಬದ ಮುತ್ತಜ್ಜಿಯ ವಯಸ್ಸು 103, ಅವರ ಮರಿಮೊಮ್ಮಗಳಿಗೆ ಮೂರು ವರ್ಷ. ಐದು-ಪೀಳಿಗೆಯ ಈ ಕುಟುಂಬ ಸದಸ್ಯರನ್ನು ಒಗ್ಗೂಡಿಸಿದ್ದು ಭಾರತೀಯ ಅಂಚೆ ಇಲಾಖೆ ಇತ್ತೀಚೆಗೆ ಆರಂಭಿಸಿರುವ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಅಡಿಯಲ್ಲಿ ಖಾತೆಗಳನ್ನು ತೆರೆದಿದ್ದಾರೆ. ಆಗಸ್ಟ್ 3 ರಂದು ಮಂಗಳೂರು ಸಮೀಪದ ಕಿನ್ನಿಗೋಳಿ ಉಪ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆಗಳನ್ನು ತೆರೆದ ಭಾರತದ ಏಕೈಕ ಐದು ತಲೆಮಾರಿನ ಕುಟುಂಬ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕುಪ್ಪೆಪದವು ನಿವಾಸಿ ಸೀತಾ

ಮಂಗಳೂರು: ಐದು ತಲೆಮಾರಿನ ಕುಟುಂಬದಿಂದ ಏಕಕಾಲಕ್ಕೆ ಅಂಚೆ ಖಾತೆ ಓಪನ್ Read More »

ರಿಲಾಯನ್ಸ್ ಅನ್ನೇ ಹಿಂದಿಕ್ಕಿದ ಎಸ್ ಬಿಐ| ಎರಡನೇ ಬಾರಿಗೆ ಭಾರೀ ಲಾಭ ಗಳಿಸಿದ ಸರ್ಕಾರಿ ಬ್ಯಾಂಕ್

ಸಮಗ್ರ ನ್ಯೂಸ್: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎನಿಸಿರುವ ಎಸ್​ಬಿಐ ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಭರ್ಜರಿ ಲಾಭ ಗಳಿಸಿದೆ. 2023ರ ಎಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 18,537 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಅಚ್ಚರಿ ಎಂದರೆ ಲಾಭದ ಓಟದಲ್ಲಿ ಎಸ್​ಬಿಐ ಭಾರತದ ಅತಿದೊಡ್ಡ ಕಂಪನಿ ಮತ್ತು ಅತಿಹೆಚ್ಚು ಲಾಭದಾಯಕ ಸಂಸ್ಥೆ ಎನಿಸಿದ ರಿಲಾಯನ್ಸ್ ಇಂಡಸ್ಟ್ರೀಸ್ ಅನ್ನೇ ಮೀರಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ಆರ್​ಐಎಲ್ (RIL) ಸಂಸ್ಥೆಯ ತ್ರೈಮಾಸಿಕ ಅವಧಿಯ

ರಿಲಾಯನ್ಸ್ ಅನ್ನೇ ಹಿಂದಿಕ್ಕಿದ ಎಸ್ ಬಿಐ| ಎರಡನೇ ಬಾರಿಗೆ ಭಾರೀ ಲಾಭ ಗಳಿಸಿದ ಸರ್ಕಾರಿ ಬ್ಯಾಂಕ್ Read More »

ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟ ಪುತ್ತೂರ ಮೂಲದ ಪಿಎಸೈ ಪ್ರದೀಪ್ ಪೂಜಾರಿ

ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರ ದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಬೆಟ್ಟದಲ್ಲಿ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟು ಬೆಟ್ಟದಲ್ಲಿ ಇಳಿಸುವ ಮೂಲಕ ಪಿಎಸೈ ಪ್ರದೀಪ್ ಪೂಜಾರಿ ಹಾಗೂ ಸಿಬ್ಬಂದಿ ,ಸೈನಿಕರು ಮಾನವೀಯತೆ ಮೆರೆದಿದ್ದಾರೆ. ಜಾಲಾರಿ ದೇವಾಲಯದ ಬೆಟ್ಟದ ಬಳಿ ಸೈನಿಕರು ಕ್ಯಾಂಪ್ ಹಾಕಿ ಕೂಂಬಿಂಗ್ ನಡೆಸುತ್ತಿದ್ದಾಗ ಬೆಟ್ಟದಲ್ಲಿ ಸೈನಿಕರ ಕಣ್ಣಿಗೆ ಶವ ಕಾಣಿಸಿದೆ. ಈ ವಿಷಯವನ್ನು ಚಿಕ್ಕಬಳ್ಳಾಪುರ ಎಸ್‌ಪಿಯವರ ಗಮನಕ್ಕೆ ಸೈನಿಕರು ತಂದಿದ್ದಾರೆ. ಸುಮಾರು 50 ವರ್ಷದ ಪ್ರಾಯದ ಅಪರಿಚಿತ ವ್ಯಕ್ತಿಯಾಗಿದ್ದು ಗುರುತು ಪತ್ತೆಯಾಗಿಲ್ಲ. ಬಳಿಕ

ಅಪರಿಚಿತ ವ್ಯಕ್ತಿಯ ಮೃತದೇಹಕ್ಕೆ ಹೆಗಲು ಕೊಟ್ಟ ಪುತ್ತೂರ ಮೂಲದ ಪಿಎಸೈ ಪ್ರದೀಪ್ ಪೂಜಾರಿ Read More »

ರಾಜ್ಯದ ‘ಗೃಹಲಕ್ಷ್ಮಿ’ಯರೇ… ನಿಮಗೊಂದು ಮಹತ್ವದ ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆ ನೋಂದಣಿ ಇದೀಗ ಮತ್ತಷ್ಟು ಸರಳಗೊಂಡಿದ್ದು, ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು. ಅರ್ಹ ಫಲಾನುಭವಿಗಳು ನೇರವಾಗಿ ತಮ್ಮ ಹತ್ತಿರದ ನೋಂದಣಿ ಕೇಂದ್ರಗಳಿಗೆ ತಮ್ಮ ದಾಖಲೆಗಳೊಂದಿಗೆ ತೆರಳಿ ಹೆಸರು ನೋಂದಾಯಿಸಿಕೊಳ್ಳಬಹುದು. ಮುಖ್ಯವಾದ ವಿಚಾರ ಅಂದ್ರೆ ಗೃಹಲಕ್ಷ್ಮಿಗೆ’ ಅರ್ಜಿ ಸಲ್ಲಿಸದ ಮಾತ್ರಕ್ಕೆ ಹಣ ಜಮೆ ಆಗಲ್ಲ, ತಪ್ಪದೇ ನೀವು ಈ ಕೆಲಸ ಮಾಡಬೇಕು .ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೂ ಈ ಕೆಲಸ ಮಾಡದಿದ್ದರೆ ಅವರು ಯೋಜನೆಯಿಂದ ವಂಚಿತರಾಗಬಹುದು. ಯಾಕೆಂದರೆ ಯಜಮಾನಿಯರು

ರಾಜ್ಯದ ‘ಗೃಹಲಕ್ಷ್ಮಿ’ಯರೇ… ನಿಮಗೊಂದು ಮಹತ್ವದ ಸೂಚನೆ Read More »

ಅಬ್ಬರಿಸಿದ ಸೂರ್ಯಕುಮಾರ್; ಭಾರತಕ್ಕೆ 7 ವಿಕೆಟ್ ಗಳ ಜಯ

ಸಮಗ್ರ ನ್ಯೂಸ್: ಸ್ಪೋಟಕ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಅಬ್ಬರದ ಆಟದಿಂದ ಭಾರತ ತಂಡ 7 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿದೆ. ಈ ಮೂಲಕ ಟಿ-20 ಸರಣಿಯಲ್ಲಿ 1-2ರಿಂದ ಹಿನ್ನಡೆ ಅಂತರ ತಗ್ಗಿಸಿಕೊಂಡಿದೆ. ಪ್ರಾವಿನೆನ್ಸ್ ನಲ್ಲಿ ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು.ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಭಾರತ ತಂಡ 18 ಓವರ್

ಅಬ್ಬರಿಸಿದ ಸೂರ್ಯಕುಮಾರ್; ಭಾರತಕ್ಕೆ 7 ವಿಕೆಟ್ ಗಳ ಜಯ Read More »