August 2023

ಕಡಬ:ಎಂಡೋಪಾಲನಾ ಕೇಂದ್ರಕ್ಕೆ ಮಾನವಹಕ್ಕುಗಳ ಅಧ್ಯಕ್ಷ ಡಾ. ಯೋಗೇಶ್ ದುಬೆ ಭೇಟಿ.

ಸಮಗ್ರ ನ್ಯೂಸ್: ಕಡಬ ತಾಲೂಕು ಕೊಯಿಲ ಎಂಡೋಪಾಲನಾ ಕೇಂದ್ರಕ್ಕೆ ಮಾನವ ಹಕ್ಕುಗಳ ಅಧ್ಯಕ್ಷ ಡಾ.ಯೋಗೇಶ್ ದುಬೆ ಆ. 10ರಂದು ಭೇಟಿ ನೀಡಿ ಪರಿಶೀಲಿಸಿದರು. ದ.ಕ ಜಿಲ್ಲೆಯಲ್ಲಿರುವ ಎಂಡೋಪೀಡಿತರ ಬಗ್ಗೆ ಮತ್ತೆ ಅವರಿಗಿರುವ ಸೌಲಭ್ಯದ ಬಗ್ಗೆ ಪುತ್ತೂರು ತಾಲ್ಲೂಕಿನ ಅರೋಗ್ಯಧಿಕಾರಿ ಡಾ. ದೀಪಕ್ ರೈ. ಜಿಲ್ಲಾ ಮೆಡಿಕಲ್ ಆಫಿಸರ್ ಡಾ. ನವೀನ್ ಕುಲಾಲ್ ಮಾಹಿತಿ ನೀಡಿದರು. ಇತ್ತೀಚಿಗೆಷ್ಟೆ ಕೊಯಿಲದಲ್ಲಿದ್ದ ಹಳೆ ಕಟ್ಟಡ ದಿಂದ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಇಲ್ಲಿಯ ವೆವಸ್ಥೆ, […]

ಕಡಬ:ಎಂಡೋಪಾಲನಾ ಕೇಂದ್ರಕ್ಕೆ ಮಾನವಹಕ್ಕುಗಳ ಅಧ್ಯಕ್ಷ ಡಾ. ಯೋಗೇಶ್ ದುಬೆ ಭೇಟಿ. Read More »

ಬೆಂಗಳೂರು: ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ| ನೌಕರರಿಗೆ ತೀವ್ರ ಗಾಯ

ಸಮಗ್ರ ನ್ಯೂಸ್: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯ ಆವರಣದಲ್ಲಿ ಭಾರಿ ಬೆಂಕಿ ಅವಗಢ ಸಂಭವಿಸಿದ್ದು, 8ಕ್ಕೂ ಅಧಿಕ ಮಂದಿ ನೌಕರರಿಗೆ ತೀವ್ರ ಸುಟ್ಟ ಗಾಯಗಳಾಗಿರುವುದು ವರದಿಯಾಗಿದೆ. ಇಂದು (ಆ.11) ಗುಣ ನಿಯಂತ್ರಣ ಪ್ರಯೋಗಾಲಯ ಮತ್ತು ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಎಲ್ಲ ನೌಕರರಿಗೂ ಸುಟ್ಟ ಗಾಯಗಳಾಗಿದೆ. ಬೆಂಕಿ ಅವಘಡ ಸಂಭವಿಸಿದ ಬೆನ್ನಲ್ಲಿಯೇ ಬಿಬಿಎಂಪಿ ಆಯುಕ್ತರು ಹಾಗೂ ಡಿಸಿಪಿ ಶ್ರೀನಿವಾಸ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಾಯಗೊಂಡ

ಬೆಂಗಳೂರು: ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ| ನೌಕರರಿಗೆ ತೀವ್ರ ಗಾಯ Read More »

ಜೈವಿಕ ಸರಪಳಿಯನ್ನು ಸಂರಕ್ಷಿಸೋಣ: ಡಾ|| ಚೂಂತಾರು| ಮೂಲ್ಕಿ ಗೃಹರಕ್ಷಕರಿಂದ ವನಮಹೋತ್ಸವ

ಸಮಗ್ರ ನ್ಯೂಸ್:ನಿರಂತರವಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದಾಗಿ ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಜೀವ ಸಂಕುಲಗಳು ನಾಶವಾಗಿ, ಪರಿಸರದ ಸಮತೋಲನ ತಪ್ಪಿ ಹೋಗುತ್ತಿದೆ ಎಂದು ಆ.11ರಂದು ಮೂಲ್ಕಿಯ ಗೃಹರಕ್ಷಕ ದಳ ಕಛೇರಿ ಆವರಣದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಡಾ|| ಮುರಲೀ ಮೋಹನ್ ಚೂಂತಾರು ಹೇಳಿದರು. ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ||ಮುರಲೀ ಮೋಹನ್ ಚೂಂತಾರು ಜೈವಿಕ ಸರಪಳಿ ನಾಶವಾಗಿ ಹಲವಾರು ವಿರಳ ಗಿಡಸಸ್ಯಗಳು ಮತ್ತು ಪ್ರಾಣಿ ಸಂಕುಲಗಳು ನಾಶವಾಗಿ ಹೋಗುತ್ತಿದೆ. ಈ

ಜೈವಿಕ ಸರಪಳಿಯನ್ನು ಸಂರಕ್ಷಿಸೋಣ: ಡಾ|| ಚೂಂತಾರು| ಮೂಲ್ಕಿ ಗೃಹರಕ್ಷಕರಿಂದ ವನಮಹೋತ್ಸವ Read More »

ಚಿಕ್ಕಮಗಳೂರು :ಮತ್ತೆ ಮುನ್ನಲೆಗೆ ಬಂದ ಹಿಜಾಬ್

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ ಮತ್ತೆ ಹಿಜಾಬ್ ವಿವಾದ ಮುನ್ನಲೆಗೆ ಬಂದಿದೆ. ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲಿ ಹಿಜಾಬ್ ಧರಿಸಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿ ಕಾಲೇಜಿನಲ್ಲಿ ಸಮವಸ್ತ್ರ ಕಡ್ಡಾಯ ಎಂದು ಆದೇಶ ಮಾಡಿದ್ದು, ವಾರದ 6 ದಿನವೂ ಸಮವಸ್ತ್ರ ಧರಿಸಬೇಕೆಂದು ಆದೇಶ ಹೊರಡಿಸಿದೆ. ಸಮವಸ್ತ್ರ ಧರಿಸದ ವಿದ್ಯಾರ್ಥಿಗಳಿಗೆ ಕಾಲೇಜು ಆವರಣ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಸಮವಸ್ತ್ರ ಧರಿಸಿ ಐಡಿ ಕಾರ್ಡ್ ತೋರಿಸಿಯೇ ತರಗತಿಗೆ ಹಾಜರಾಗಬೇಕೆಂದು

ಚಿಕ್ಕಮಗಳೂರು :ಮತ್ತೆ ಮುನ್ನಲೆಗೆ ಬಂದ ಹಿಜಾಬ್ Read More »

ಪುರಾತನ ಕೀಲು ರೋಗದ ಬಗ್ಗೆ ನಿಮಗೆಷ್ಟು ಗೊತ್ತು?| ಇಲ್ಲಿದೆ ಅದರ ಲಕ್ಷಣಗಳು

ಸಮಗ್ರ ನ್ಯೂಸ್: “ಗೌಟ್” ಎನ್ನುವುದು ಕೀಲುಗಳಿಗೆ ಸಂಬಂದಿಸಿದ ಉರಿವಾತದ ರೋಗವಾಗಿದ್ದು ಅಚ್ಚಕನ್ನಡದಲ್ಲಿ, ಸಂಧಿವಾತ, ಕೀಲೂರ ಎಂದು ಕರೆಯುತ್ತಾರೆ. ದೇಹದಲ್ಲಿನ ಕೀಲುಗಳು ಊದಿಕೊಂಡು ಉರಿವಾತದಿಂದ ನರಳುವ ಕಾರಣದಿಂದಲೂ ಕೀಲೂರ ಎಂದು ಹೆಸರು ಬಂದಿರಬಹುದು. ಸಾಮಾನ್ಯವಾಗಿ ಈ ರೋಗದಿಂದ ಬಳಲುತ್ತಿರುವವರಲ್ಲಿ ರಕ್ತದಲ್ಲಿ “ಯೂರಿಕ್ ಆಸಿಡ್” ಎಂಬ ರಾಸಯನಿಕದ ಅಂಶ ಜಾಸ್ತಿಯಿರುತ್ತದೆ. ಹೆಚ್ಚಾಗಿ ಪುರುಷರಲ್ಲಿ ಕಾಣುವ ಈ ರೋಗ ಮಹಿಳೆಯರನ್ನು ಋತುಬಂಧದ (ಋತುಚಕ್ರ ನಿಂತ) ಬಳಿಕ ಕಾಣಿಸಿಕೊಳ್ಳಬಹುದು. ತನ್ನಿಂತಾನೇ ಕೀಲುಗಳಲ್ಲಿ ಜೋರಾದ ನೋವು, ಉರಿತ ಬಂದು ಕೆಂಪಾಗಿ ಊದಿಕೊಳ್ಳಬಹುದು. ಸಾಮಾನ್ಯವಾಗಿ ಕಾಲಿಗಳ

ಪುರಾತನ ಕೀಲು ರೋಗದ ಬಗ್ಗೆ ನಿಮಗೆಷ್ಟು ಗೊತ್ತು?| ಇಲ್ಲಿದೆ ಅದರ ಲಕ್ಷಣಗಳು Read More »

ಪುತ್ತಿಲ ಪರಿವಾರದಲ್ಲಿ ಬಿರುಕು!? ರಾಜಕೀಯಕ್ಕಷ್ಟೇ ಸೀಮಿತವಾಯ್ತೇ ಹಿಂದುತ್ವ?

ಸಮಗ್ರ ನ್ಯೂಸ್: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಅರುಣ್ ಕುಮಾರ್ ಪುತ್ತಿಲ ಟೀಂ ನಲ್ಲಿ ಬಿರುಕು ಕಾಣಿಸಿಕೊಂಡಿಸಿರುವ ಲಕ್ಷಣಗಳು ಗೋಚರಿಸುತ್ತಿವೆ. ಹೌದು, ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ‌ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಪುತ್ತಿಲ ಟಿಕೆಟ್ ಮಿಸ್ ಆದ ಬಳಿಕ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಪ್ರಬಲ‌ ಪೈಪೋಟಿ ನೀಡಿದ ಪುತ್ತಿಲ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪರನ್ನು ಮೂರನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಗಿದ್ದರು. ಸ್ವಲ್ಪ ಅಂತರದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತು.

ಪುತ್ತಿಲ ಪರಿವಾರದಲ್ಲಿ ಬಿರುಕು!? ರಾಜಕೀಯಕ್ಕಷ್ಟೇ ಸೀಮಿತವಾಯ್ತೇ ಹಿಂದುತ್ವ? Read More »

ಚಿಕ್ಕಮಗಳೂರು: ದಿಢೀರ್ ಸುರಿದ ಭಾರೀ ಮಳೆಗೆ ಹೈರಾಣಾದ ಮಲೆನಾಡಿನ ಜನ

ಸಮಗ್ರ ನ್ಯೂಸ್: ಕಳೆದ ಒಂದು ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಗುರುವಾರ ಕಾಫಿನಾಡು, ಮಲೆನಾಡು ಭಾಗದ ಹಲವೆಡೆ ಒಂದು ಗಂಟೆವರೆಗೆ ನಿರಂತರವಾಗಿ ಭಾರೀ ಮಳೆ ಸುರಿದಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ದಿಢೀರನೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕೊಪ್ಪ ತಾಲೂಕಿನ ಜಯಪುರ ಸುತ್ತಮುತ್ತ ದಿಢೀರನೆ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಯಪುರ, ಬಾಳೆಹೊನ್ನೂರು, ಮೇಗುಂದ ಭಾಗದಲ್ಲಿ ಭಾರೀ ಮಳೆಯಿಂದಾಗಿ ನೀರು ಉಕ್ಕಿ ಹರಿದಿವೆ. ಇನ್ನು ಗ್ರಾಮೀಣ ಭಾಗದ ರಸ್ತೆಗಳು ಜಲಾವೃತವಾಗಿದ್ದು ಜನರು ಪರದಾಡಿದ್ದಾರೆ.

ಚಿಕ್ಕಮಗಳೂರು: ದಿಢೀರ್ ಸುರಿದ ಭಾರೀ ಮಳೆಗೆ ಹೈರಾಣಾದ ಮಲೆನಾಡಿನ ಜನ Read More »

ಲೈಂಗಿಕ ಬಯಕೆಗಳಿಲ್ಲದೆ ಮಹಿಳೆಯನ್ನು ಅಪ್ಪಿಕೊಳ್ಳುವುದು ತಪ್ಪಲ್ಲ| ಕೋರ್ಟ್ ನಲ್ಲಿ ಬ್ರಿಜ್ ಭೂಷಣ್ ಸಮರ್ಥನೆ

ಸಮಗ್ರ ನ್ಯೂಸ್: ಒಲಿಂಪಿಕ್ಸ್ ವಿಜೇತ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ನ್ಯಾಯಾಲಯದಲ್ಲಿ ತಮ್ಮನ್ನ ಸಮರ್ಥಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಯಾವುದೇ ರೀತಿಯ ಲೈಂಗಿಕ ಉದ್ದೇಶವಿಲ್ಲದೇ ಮಹಿಳೆಯನ್ನ ಅಪ್ಪಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ನಲ್ಲಿ ಬಿಜೆಪಿ ಸಂಸದನ ಪರ ಹಾಜರಾದ ವಕೀಲ ರಾಜೀವ್ ಮೋಹನ್, ಮಹಿಳಾ ಕುಸ್ತಿಪಟುಗಳು ಮಾಡಿರುವ ಆರೋಪಗಳು ಕಾಲಮಿತಿಯನ್ನು ಮೀರಿ ಹೋಗಿವೆ. ಕುಸ್ತಿಪಟುಗಳು 5 ವರ್ಷಗಳವರೆಗೂ

ಲೈಂಗಿಕ ಬಯಕೆಗಳಿಲ್ಲದೆ ಮಹಿಳೆಯನ್ನು ಅಪ್ಪಿಕೊಳ್ಳುವುದು ತಪ್ಪಲ್ಲ| ಕೋರ್ಟ್ ನಲ್ಲಿ ಬ್ರಿಜ್ ಭೂಷಣ್ ಸಮರ್ಥನೆ Read More »

ದುರ್ಬಲಗೊಂಡ ಮುಂಗಾರು| ಕರಾವಳಿಯಲ್ಲಿ ಕುಂಠಿತಗೊಂಡ ಮಳೆ| ವೈರಲ್ ಜ್ವರ ಜೋರು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದ ಕರ್ನಾಟಕ ಕರಾವಳಿ ಹಾಗೆಯೇ ಕೇರಳದ ಕನ್ನಡ ಕರಾವಳಿಯಾದ ಕಾಸರಗೋಡು ಜಿಲ್ಲೆ ಸೇರಿದಂತೆ ಕಡಲತೀರದಲ್ಲಿ ಬಿಸಿಲ ಝಳ ಗುರುವಾರವೂ ಜಾಸ್ತಿ ಕಂಡುಬಂದಿದ್ದು, ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ದಕ್ಷಿಣೋತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಮೋಡ ಕವಿದ ವಾತಾವರಣ ಇತ್ತು. ಕೆಲವೆಡೆ ಇಡೀ ದಿನ ಮಳೆ ಸುರಿಯಲಿಲ್ಲ. ಆಷಾಢ ಮಾಸದ ಬಿಸಿಲಿಗೆ ರೋಗರುಜಿನಗಳು ಜಾಸ್ತಿಯಾಗುತ್ತವೆ ಎಂಬ ಹೇಳಿಕೆಗೆ ಇಂಬು ನೀಡುವಂತೆ ವೈದ್ಯರ ಬಳಿ ಸಾಲುಗಟ್ಟಲೆ

ದುರ್ಬಲಗೊಂಡ ಮುಂಗಾರು| ಕರಾವಳಿಯಲ್ಲಿ ಕುಂಠಿತಗೊಂಡ ಮಳೆ| ವೈರಲ್ ಜ್ವರ ಜೋರು Read More »

ಕರಾವಳಿಯಲ್ಲಿ ಕಿಚ್ಚು ಹಬ್ಬಿಸಿದ ಸೌಜನ್ಯ ಪ್ರಕರಣ| ಇಂದಿನಿಂದ ಸಾಲು – ಸಾಲು ಪ್ರತಿಭಟನೆ

ಸಮಗ್ರ ನ್ಯೂಸ್: ಹನ್ನೊಂದು ವರ್ಷಗಳ ಹಿಂದೆ ಕಾಮುಕರ ಕೈಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಗೌಡ ಪ್ರಕರಣಕ್ಕೆ ಮರುಜೀವ ಬಂದಿದ್ದು, ನ್ಯಾಯಕ್ಕಾಗಿ ಮತ್ತೆ ಹೋರಾಟಗಳು ಉಗ್ರ ರೂಪ ಪಡೆದುಕೊಳ್ಳುತ್ತಿವೆ. ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡುತ್ತಿರುವ ಈ ಪ್ರಕರಣ ಕರಾವಳಿಯಲ್ಲಿ ಕಿಚ್ಚು ಹಬ್ಬಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳ ಬಗ್ಗೆ ಮರುತನಿಖೆ ನಡೆಸಿ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡುವಂತೆ ಸೌಜನ್ಯ ಹೋರಾಟ ಸಮಿತಿ ಕರಾವಳಿಯ ವಿವಿಧೆಡೆ

ಕರಾವಳಿಯಲ್ಲಿ ಕಿಚ್ಚು ಹಬ್ಬಿಸಿದ ಸೌಜನ್ಯ ಪ್ರಕರಣ| ಇಂದಿನಿಂದ ಸಾಲು – ಸಾಲು ಪ್ರತಿಭಟನೆ Read More »