August 2023

ಅರಂತೋಡು:ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಹೋದ ವ್ಯಕ್ತಿ ನಾಪತ್ತೆ

ಸಮಗ್ರ ನ್ಯೂಸ್:ಆಧಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಅರಂತೊಡಿಗೆ ಹೋದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಆ. 8ರಂದು ವರದಿಯಾಗಿದೆ. ಚೆಂಬುಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ (65) ಅವರು ಅರಂತೋಡಿಗೆ ತೆರಳಿದ್ದರು. ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಮರಳಿ ಹಿಂತಿರುಗದೆ ಇರುವುದರಿಂದ ಮನೆಯವರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾವಚಿತ್ರದಲ್ಲಿರುವ ವ್ಯಕ್ತಿಯು ಕಂಡುಬಂದಲ್ಲಿ ಸುಳ್ಯ ಠಾಣೆಗೆ ತಿಳಿಸುವಂತೆ ಅಥವಾ 9731435253, 7760505928 ಸಂಖ್ಯೆಗೆ ತಿಳಿಸುವಂತೆ ಕೋರಲಾಗಿದೆ.

ಅರಂತೋಡು:ಆಧಾರ್ ಕಾರ್ಡ್ ಬದಲಾವಣೆಗೆ ತಂಭ್ ಕೊಡಲು ಹೋದ ವ್ಯಕ್ತಿ ನಾಪತ್ತೆ Read More »

ಶಂಕಾಸ್ಪದ ಉಗ್ರ ಚಟುವಟಿಕೆ ಹಿನ್ನಲೆ| ಕರ್ನಾಟಕದ ಕರಾವಳಿ ಸೇರಿದಂತೆ 5 ರಾಜ್ಯಗಳಲ್ಲಿ ಎನ್ಐಎ ಮಿಂಚಿನ ದಾಳಿ

ಸಮಗ್ರ ನ್ಯೂಸ್: ಉಗ್ರ ಚಟುವಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆ ಭಾಗಿಯಾಗಿರುವುದನ್ನು ಶಂಕಿಸಿ 5 ರಾಜ್ಯಗಳ 14 ಕಡೆ ಏಕಕಾಲಕ್ಕೆ ಎನ್‌ಐಎ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಭಾರತದಲ್ಲಿ 2047ರೊಳಗೆ ಪಿಎಫ್ ಐ ಆರ್ಮಿ ಸ್ಥಾಪಿಸಲು ಮುಂದಾಗಿರುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಕರ್ನಾಟಕದ ದಕ್ಷಿಣ ಕನ್ನಡ , ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳ ಹಾಗೂ ಇತರ ರಾಜ್ಯಗಳಲ್ಲಿ ಎನ್​ಐಎ ಏಕಕಾಲದಲ್ಲಿ ದಾಳಿ ಮಾಡಿದೆ. ಕೆಲ ದಿನಗಳ ಹಿಂದೆ ಶಸ್ತ್ರಾಸ್ತ್ರ ತರಬೇತಿ, ಐರನ್ ರಾಡ್ಸ್, ಕತ್ತಿಗಳ ತರಬೇತಿ ನೀಡಿದ

ಶಂಕಾಸ್ಪದ ಉಗ್ರ ಚಟುವಟಿಕೆ ಹಿನ್ನಲೆ| ಕರ್ನಾಟಕದ ಕರಾವಳಿ ಸೇರಿದಂತೆ 5 ರಾಜ್ಯಗಳಲ್ಲಿ ಎನ್ಐಎ ಮಿಂಚಿನ ದಾಳಿ Read More »

ಸುಬ್ರಹ್ಮಣ್ಯ:ಇಂಜಾಡಿ ಹೊಟೇಲೊಂದರಲ್ಲಿ ಮದ್ಯ ಮಾರಾಟ| ಅಧಿಕಾರಿಗಳ ಮೌನ| ಸಾರ್ವಜನಿಕರಿಂದ ಆಕ್ರೋಶ

ಸಮಗ್ರ ನ್ಯೂಸ್: ಸುಬ್ರಹ್ಮಣ್ಯದ ಇಂಜಾಡಿ ಎಂಬಲ್ಲಿ ರಸ್ತೆ ಬದಿಯ ಹೋಟೆಲೊಂದರಲ್ಲಿ ರಾಜಾ ರೋಷವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂಜಾಡಿಯ ಗ್ರೀನ್‌ ಫಾಮ್ಸ್‌ ನ ಹೋಟೆಲೊಂದರಲ್ಲಿ ಮದ್ಯ ವ್ಯಾಪಾರ ಮಾಡುತ್ತಿರುವ ಆರೊಪ ಕೇಳಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಸ್ಥಳಿಯ ಗ್ರಾಮ ಪಂಚಾಯತ್ ಗೆ ಮತ್ತು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದರು ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ಮುಂದಿನ ದಿನಗಳಲ್ಲಿ ಈ

ಸುಬ್ರಹ್ಮಣ್ಯ:ಇಂಜಾಡಿ ಹೊಟೇಲೊಂದರಲ್ಲಿ ಮದ್ಯ ಮಾರಾಟ| ಅಧಿಕಾರಿಗಳ ಮೌನ| ಸಾರ್ವಜನಿಕರಿಂದ ಆಕ್ರೋಶ Read More »

ಆದಿಚುಂಚನಗಿರಿ ಶ್ರೀಗಳ ಭೇಟಿ ಮಾಡಿದ ಸೌಜನ್ಯ ಕುಟುಂಬ

ಸಮಗ್ರ ನ್ಯೂಸ್: ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದ ಶ್ರೀಗಳನ್ನು ಸೌಜನ್ಯ ಕುಟುಂಬಸ್ಥರು ಭೇಟಿ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀಗಳು ಸೌಜನ್ಯ ತಾಯಿ ಕುಸುಮಾವತಿ, ತಂಗೆ ಚಂದಪ್ಪ ಗೌಡ, ಹೋರಾಟಗಾರ ಮಹೇಶ್ ತಿಮರೋಡಿ ಜೊತೆಗೆ ಪ್ರಕರಣದ ಕುರಿತು ಚರ್ಚಿಸಿ ಸಾಂತ್ವನ ನೀಡಿದರು. ಅಲ್ಲದೇ ಸೌಜನ್ಯಳ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಸಹಕಾರ ನೀಡುವುದಾಗಿ ಶ್ರೀಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಆದಿಚುಂಚನಗಿರಿ ಶ್ರೀಗಳ ಭೇಟಿ ಮಾಡಿದ ಸೌಜನ್ಯ ಕುಟುಂಬ Read More »

ಬಂಟ್ವಾಳ: ಹೃದಯಾಘಾತದಿಂದ ಪೆಟ್ರೋಲ್ ಬಂಕ್ ಮ್ಯಾನೆಜರ್ ಮೃತ್ಯು

ಸಮಗ್ರ ನ್ಯೂಸ್: ಹೃದಯಾಘಾತದಿಂದ ಬಿಸಿರೋಡಿನ ಪೆಟ್ರೋಲ್ ಬಂಕ್ ಮ್ಯಾನೇಜರ್ ಸಾವನಪ್ಪಿರುವ ಘಟನೆ ನಡೆದಿದೆ. ‌ ಮೃತರನ್ನು ಬಿಸಿರೋಡಿನ ಸರ್ಕಲ್ ಬಳಿಯಲ್ಲಿರುವ ಪೆಲತ್ತಿಮಾರ್ ನಿವಾಸಿ ಪುರುಷೋತ್ತಮ ಪೂಜಾರಿ ( ಪರುಷಣ್ಣ) (45) ಎಂದು ಗುರುತಿಸಲಾಗಿದೆ.ಪುರುಷೋತ್ತಮ ಅವರು ಕೃಷಿಕನಾಗಿದ್ದುಕೊಂಡು ಬಿಸಿರೋಡಿನ ಸುತ್ತಮುತ್ತಲಿನ ಜನರ ಅಚ್ಚುಮೆಚ್ಚಿನ ಪುರುಷಣ್ಣ ಎಂದೇ ಹೆಸರುವಾಸಿಯಾಗಿ ಸಾಮಾಜಿಕ ಸೇವೆಯ ಮೂಲಕ ಚಿರಪರಿಚಿತರಾಗಿದ್ದರು.ನೇರ ನಡೆ ನುಡಿಯ ವ್ಯಕ್ತಿಯಾಗಿದ್ದ ಇವರು ಬಿಸಿರೋಡಿನ ಗುರುಕೃಪ ಪೆಟ್ರೋಲ್ ಪಂಪ್ ನಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಸುಮಾರು ಒಂದು ಗಂಟೆ ವೇಳೆ

ಬಂಟ್ವಾಳ: ಹೃದಯಾಘಾತದಿಂದ ಪೆಟ್ರೋಲ್ ಬಂಕ್ ಮ್ಯಾನೆಜರ್ ಮೃತ್ಯು Read More »

ವಿಟ್ಲ: ‌ಮುಂಗುಸಿ ಅಡ್ಡ ಬಂದು ರಿಕ್ಷಾ ಪಲ್ಟಿ

ಸಮಗ್ರ ನ್ಯೂಸ್: ಮುಂಗುಸಿ ಅಡ್ಡ ಬಂದು ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ನಡೆದಿದೆ. ಮಂಗಲಪದವು ನಿವಾಸಿ ಆಟೋ ಚಾಲಕ ಇಸ್ಮಾಯಿಲ್ (53) ಗಾಯಾಳು. ಸಾಲೆತ್ತೂರು ಕಡೆಗೆ ಪ್ರಯಾಣಿಕರನ್ನು ಬಿಟ್ಟು ಹಿಂತಿರುಗುತ್ತಿದ್ದಾಗ ಕೊಡಂಗಾಯಿ ಸೇತುವೆ ಬದಿಯಲ್ಲಿ ರಸ್ತೆ ದಾಟುತ್ತಿದ್ದ ಮುಂಗುಸಿಯೊಂದು ಅಡ್ಡಬಂದಿದೆ. ಮುಂಗುಸಿಯ ಪ್ರಾಣ ರಕ್ಷಣೆಗಾಗಿ ಚಾಲಕ ಹಠಾತ್ ಬ್ರೇಕ್ ಹಾಕುತ್ತಿದ್ದಂತೆ ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಬಲವಾಗಿ ಅಪ್ಪಳಿಸಿ ಜಖಂಗೊಂಡಿದ್ದು

ವಿಟ್ಲ: ‌ಮುಂಗುಸಿ ಅಡ್ಡ ಬಂದು ರಿಕ್ಷಾ ಪಲ್ಟಿ Read More »

ಸುಳ್ಯ ತಾಲೂಕು ಮಟ್ಟದ ಚೆನ್ನೆಮಣೆ ಸ್ಪರ್ಧೆ|ಚೆನ್ನೆಮಣೆ ಬಗ್ಗೆ ಅರಿವು ಅಗತ್ಯ; ತೀರ್ಥರಾಮ

ಸಮಗ್ರ ನ್ಯೂಸ್:ತುಳುನಾಡಿನ ಜಾನಪದ ಕ್ರೀಡೆಗಳಲ್ಲೊಂದಾದ ಚೆನ್ನೆಮಣೆ ಆಟ ಇಂದು ನಶಿಸಿ ಹೋಗುವ ಹಂತದಲ್ಲಿದೆ. ಚೆನ್ನೆಮಣೆ ಆಟದ ಬಗ್ಗೆ ಹಿರಿಯರು, ಪೋಷಕರು ಇಂದಿನ ಮಕ್ಕಳಿಗೆ ತಿಳಿಸುವ ಜೊತೆಗೆ ಆಟವನ್ನು ಕಲಿಸುವ ಮೂಲಕ ಚೆನ್ನೆಮಣೆ ಆಟದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ ಎಂದು ಸರಕಾರಿ ನೌಕರರ ಸಂಘದ ಸುಳ್ಯ ತಾಲೂಕು ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ ಹೇಳಿದರು. ಅವರು ಶನಿವಾರ ದುಗ್ಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಸುಳ್ಯ ತಾಲೂಕು ಶಾಲಾ ಶಿಕ್ಷಣ ಇಲಾಖೆ, ಸಿ.ಸಿ.ಆರ್.ಟಿ. ಗ್ರೂಪ್ ಸುಳ್ಯ ಮತ್ತು ದುಗ್ಗಲಡ್ಕ ಸರಕಾರಿ

ಸುಳ್ಯ ತಾಲೂಕು ಮಟ್ಟದ ಚೆನ್ನೆಮಣೆ ಸ್ಪರ್ಧೆ|ಚೆನ್ನೆಮಣೆ ಬಗ್ಗೆ ಅರಿವು ಅಗತ್ಯ; ತೀರ್ಥರಾಮ Read More »

ಸುಳ್ಯ: ನೈತಿಕ ಪೊಲೀಸ್ ಗಿರಿ ಪ್ರಕರಣ| ಐವರ ವಿರುದ್ಧ ದೂರು; ಓರ್ವ ಅರೆಸ್ಟ್

ಸಮಗ್ರ ನ್ಯೂಸ್: ತಡರಾತ್ರಿ ಸುಳ್ಯ ತಾಲೂಕಿನ ಅರಂತೋಡು ಸಮೀಪ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ಯುವಕ ಸುಳ್ಯ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ದೂರು ನೀಡಿದ್ದು, ಓರ್ವ ಆರೋಪಿಯ ಬಂಧನವಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು ಯುವಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅರ್ಜುನ್ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಈ ವಿಚಾರ ತಿಳಿದ ಸುಳ್ಯದ ಬಿಜೆಪಿ ಮುಖಂಡರು ಪೊಲೀಸ್ ಠಾಣೆಗೆ ತೆರಳಿದ್ದರು. ಪುತ್ತೂರಿನಿಂದ ಅರುಣ್ ಕುಮಾರ್ ಪುತ್ತಿಲ ಕೂಡಾ ಆಗಮಿಸಿದ್ದರು. ಹಲವು

ಸುಳ್ಯ: ನೈತಿಕ ಪೊಲೀಸ್ ಗಿರಿ ಪ್ರಕರಣ| ಐವರ ವಿರುದ್ಧ ದೂರು; ಓರ್ವ ಅರೆಸ್ಟ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಗ್ರಹಗತಿಗಳ ಸ್ಥಾನದ ಆಧಾರದ ಮೇಲೆ ವಾರ ಭವಿಷ್ಯ ನೀಡಲಾಗಿದ್ದು ಈ ವಾರ 8 ರಾಶಿಗಳಿಗೆ ಅನುಕೂಲಕರವಾದರೆ 4 ರಾಶಿಯವರಿಗೆ ಮಿಶ್ರಫಲ. ನಿಮ್ಮ ರಾಶಿಗೆ ಈ ವಾರ ಹೇಗಿದೆ ನೋಡೋಣ: ಮೇಷ:ಕೆಲಸ ಕಾರ್ಯಗಳ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಮರೆಯದಿರಿ. ನಿಮಗೆ ಇಷ್ಟವೆನಿಸುವ ವಸ್ತುಗಳನ್ನು ಕೊಳ್ಳಲು ಹೆಚ್ಚಿನ ಹಣದ ಅವಶ್ಯಕತೆ ಕಂಡು ಬರುತ್ತದೆ. ಅತಿಯಾದ ಕೆಲಸದ ಕಾರಣ ಒತ್ತಡವನ್ನು ಸಹಿಸಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕು. ಉದ್ಯೋಗದಲ್ಲಿ ಎದುರಾಗುವ ಸಮಸ್ಯೆಗಳು ಕ್ಷಣಮಾತ್ರದಲ್ಲಿ ಮರೆಯಾಗಲಿವೆ. ವಿದ್ಯಾರ್ಥಿಗಳು ವಿಶೇಷವಾದಂತಹ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಸ್ವಂತ

ದ್ವಾದಶ ರಾಶಿಗಳ ವಾರಭವಿಷ್ಯ Read More »

ನೀವು ಚಹಾ ಪ್ರಿಯರೇ? ಹಾಗಾದರೆ ಬಳಸಿದ ಚಹಾ ಪುಡಿಯನ್ನು ಎಸೆಯದೆ ಹೀಗೆ ಉಪಯೋಗಿಸಿ

ಸಮಗ್ರ ನ್ಯೂಸ್: ದಿನ ಬೆಳಗೆದ್ದು ಚಹಾ ಕುಡಿಯುವವರು ಇದನ್ನು ಮಿಸ್ ಮಾಡದೆ ಓದಿ. ವಿಶೇಷವಾಗಿ ಕಾಫಿಗಿಂತ ಚಹಾ ಉತ್ತಮ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಚಹಾ ಮಾತ್ರವಲ್ಲದೆ, ಅದರ ಎಲೆ ಅಥವಾ ಪುಡಿಯು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಹೌದು, ಇದು ಮರಗಳಿಗೆ ಗೊಬ್ಬರವಾಗಿ ಮಾತ್ರವಲ್ಲದೆ ಇತರ ವಿಧಾನಗಳಲ್ಲಿಯೂ ಉಪಯೋಗಿಸಬಹುದು. ರೂಮ್ ಸ್ಪ್ರೇ:ಮಳೆಗಾಲದಲ್ಲಿ ಮನೆಯ ಜೊತೆಗೆ ಅಡುಗೆ ಮನೆಗೂ ಒಂದು ರೀತಿಯ ದುರ್ವಾಸನೆ ಬರುತ್ತದೆ. ನೊಣಗಳು ಅಡುಗೆಮನೆಯ ಸಿಂಕ್ ಸುತ್ತಲೂ, ಡಸ್ಟ್ ಬಿನ್ ಬಳಿ ಹಾರಾಡುತ್ತಿರುತ್ತವೆ. ಇವುಗಳಿಂದ ಉಂಟಾಗುವ ದುರ್ವಾಸನೆ

ನೀವು ಚಹಾ ಪ್ರಿಯರೇ? ಹಾಗಾದರೆ ಬಳಸಿದ ಚಹಾ ಪುಡಿಯನ್ನು ಎಸೆಯದೆ ಹೀಗೆ ಉಪಯೋಗಿಸಿ Read More »