August 2023

ಸಂಪಾಜೆ: ಆಧಾರ್ ಜೋಡಣೆಗೆ ಹೋದಾತ ಶವವಾಗಿ ಪತ್ತೆ| ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಸಮಗ್ರ ನ್ಯೂಸ್:ಆಧಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಸುಳ್ಯದ ಅರಂತೋಡಿಗೆ ತೆರಳಿ ಕಾಣೆಯಾಗಿದ್ದ ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದ ಬಾಲಕೃಷ್ಣ ಎಂಬವರು ಶವವಾಗಿ ಪತ್ತೆಯಾಗಿದ್ದಾರೆ. ಬಾಲಕೃಷ್ಣರವರು ನಾಪತ್ತೆಯಾಗಿರುವ ಬಗ್ಗೆ ಅವರ ಮನೆಯವರು ಆ. 8ರಂದು ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಚೆಂಬು ಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ (65) ಅವರು ಅರಂತೋಡಿಗೆ ತೆರಳಿದ್ದರು. ಅಲ್ಲಿಂದ ಸುಳ್ಯ ಕಡೆಗೆ ಬರುವ ವ್ಯಾನ್ ನಲ್ಲಿ ತೆರಳಿದ್ದು ಮತ್ತೆ ಮರಳಿ ಹಿಂತಿರುಗದೆ ಇರುವುದಾಗಿ ತಿಳಿಸಿದ್ದರು. ಇದೀಗ ಬಾಲಕೃಷ್ಣರವರ ಶವ […]

ಸಂಪಾಜೆ: ಆಧಾರ್ ಜೋಡಣೆಗೆ ಹೋದಾತ ಶವವಾಗಿ ಪತ್ತೆ| ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ Read More »

ಕೈಗೆಟುಕುವ ದರಕ್ಕೆ ಕೆಂಪು ಸುಂದರಿ| ಕಣ್ಣೀರು ತರಿಸುತ್ತಿದೆ ಈರುಳ್ಳಿ

ಸಮಗ್ರ ನ್ಯೂಸ್: ಕಳೆದ ಮೂರು ತಿಂಗಳಿನಿಂದ ರಾಕೆಟ್ ವೇಗದಲ್ಲಿ ಬೆಲೆ ಏರಿಕೆಯಾಗಿದ್ದ ಟೊಮ್ಯಾಟೊ ಬೆಲೆ ಇದೀಗ ದಿಢೀರ್ ಕುಸಿಯುತ್ತಿದ್ದಂತೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಣ್ಣಲ್ಲಿ ನೀರು ಬರಿಸುತ್ತಿದೆ. ಟೊಮ್ಯಾಟೊ ಬೆಲೆ ಇಳಿಮುಖವಾಗುತ್ತಿದ್ದಂತೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಗ್ರಾಹಕರಿಗೆ ಇದೀಗ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಮೂಲಗಳ ಪ್ರಕಾರ ದೇಶದ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವುದರಿಂದ ಈರುಳ್ಳಿ ಬೆಳೆಯು ಬಹುತೇಕ

ಕೈಗೆಟುಕುವ ದರಕ್ಕೆ ಕೆಂಪು ಸುಂದರಿ| ಕಣ್ಣೀರು ತರಿಸುತ್ತಿದೆ ಈರುಳ್ಳಿ Read More »

ಒನ್ ಡೇ ಕಪ್ ಕ್ರಿಕೆಟ್| ಸೋತರೂ ದಾಖಲೆ ನಿರ್ಮಿಸಿದ ಸೂರ್ಯ, ಪೃಥ್ವಿ

ಸಮಗ್ರ ನ್ಯೂಸ್: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಒನ್​ ಡೇ ಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಚೆಸ್ಟರ್ ಲೇ-ಸ್ಟ್ರೀಟ್​ನ ರಿವರ್​ಸೈಡ್ ಗ್ರೌಂಡ್​ನಲ್ಲಿ ನಡೆದ ನಾರ್ಥಾಂಪ್ಟನ್‌ಶೈರ್ ವಿರುದ್ಧ ಈ ಪಂದ್ಯದಲ್ಲಿ ಟಾಸ್ ಗೆದ್ದ ಡರ್ಹಾಮ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಡರ್ಹಾಮ್ ಪರ ಆರಂಭಿಕನಾಗಿ ಕಣಕ್ಕಿಳಿದ ಗರ್ಹಾಮ್ ಕ್ಲಾರ್ಕ್​ (13) ಬೇಗನೆ ನಿರ್ಗಮಿಸಿದರೆ, ಅಲೆಕ್ಸ್ ಲೀಸ್ 34 ರನ್​ ಬಾರಿಸಿದರು. ಆದರೆ ಅನುಭವಿ ವೇಗಿ ಲ್ಯೂಕ್ ಪ್ರಾಕ್ಟರ್ ಎಸೆತಗಳನ್ನು ಎದುರಿಸುವಲ್ಲಿ ತಡಕಾಡಿದ ಡರ್ಹಾಮ್ ಬ್ಯಾಟರ್​ಗಳು ಪೆವಿಲಿಯನ್

ಒನ್ ಡೇ ಕಪ್ ಕ್ರಿಕೆಟ್| ಸೋತರೂ ದಾಖಲೆ ನಿರ್ಮಿಸಿದ ಸೂರ್ಯ, ಪೃಥ್ವಿ Read More »

ಪ್ರೇಮಿಯನ್ನು ಕೂಡಲು ಪತಿಯನ್ನೇ ಕೊಂದ ಪತ್ನಿ| ನಿದ್ದೆ ಮಾತ್ರೆ ನೀಡಿ ಚಿರನಿದ್ರೆಗೆ ಕಳುಹಿಸಿದ ಅರ್ಧಾಂಗಿ!!

ಸಮಗ್ರ ನ್ಯೂಸ್: ಪ್ರಿಯತಮನ ಜೊತೆ ಸೇರಲು‌ ತಾಳಿ ಕಟ್ಟಿದ ಪತಿಗೇ ಪತ್ನಿ ಹಳ್ಳ ತೋಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹನುಮನ ಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ಇಲ್ಲಿನ ನಿವಾಸಿ ಪಾವನ ಎಂದು ಗುರುತಿಸಲಾಗಿದ್ದು, ನವೀನ್(28) ಮೃತ ದುರ್ದೈವಿ. ಆರೋಪಿ ಪಾವನ ತನ್ನ ಪ್ರೇಮಿ ಸಂಜಯ್ ನ ಜೊತೆಗಿರಲು ನವೀನ್ ಅಡ್ಡಿಯಾಗಿದ್ದ. ಇದಕ್ಕಾಗಿ ಈಕೆ ಗಂಡನಿಗೆ ಗತಿ ಕಾಣಿಸಲು ತೀರ್ಮಾನಿಸಿದ್ದು, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಜ್ಞಾನ ತಪ್ಪಿಸಿದ್ದಾಳೆ. ಬಳಿಕ ಪ್ರಜ್ಞೆ ತಪ್ಪಿದ ಪತಿಯನ್ನು ಪ್ರೇಮಿ ಜೊತೆ

ಪ್ರೇಮಿಯನ್ನು ಕೂಡಲು ಪತಿಯನ್ನೇ ಕೊಂದ ಪತ್ನಿ| ನಿದ್ದೆ ಮಾತ್ರೆ ನೀಡಿ ಚಿರನಿದ್ರೆಗೆ ಕಳುಹಿಸಿದ ಅರ್ಧಾಂಗಿ!! Read More »

ಬೆಳ್ತಂಗಡಿ: ಲೋ ಬಿಪಿಯಿಂದ ಹೃದಯಾಘಾತ; ಯುವತಿ ಸಾವು

ಸಮಗ್ರ ನ್ಯೂಸ್: ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಆ 13 ರಂದು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನಡೆದಿದೆ. ಇಲ್ಲಿನ ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತ ಯುವತಿ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸುಮಾ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ

ಬೆಳ್ತಂಗಡಿ: ಲೋ ಬಿಪಿಯಿಂದ ಹೃದಯಾಘಾತ; ಯುವತಿ ಸಾವು Read More »

ಹರ್ ಘರ್ ತಿರಂಗಾ| ಸೋಶಿಯಲ್ ಮೀಡಿಯಾ ಪ್ರೊಫೈಲ್ ಬದಲಿಸಲು ಪಿಎಂ ಮೋದಿ ಕರೆ

ಸಮಗ್ರ ನ್ಯೂಸ್: 76ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಹಾಗೂ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ದೇಶದ ಜನರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಡಿಪಿಯನ್ನು ರಾಷ್ಟ್ರ ಧ್ಜಜವನ್ನಾಗಿ ಬದಲಾಯಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಹರ್ ಘರ್ ತಿರಂಗಾ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿ, ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಯನ್ನು ರಾಷ್ಟ್ರ ಧ್ವಜವಾಗಿ ಬದಲಾಯಿಸೋಣ. ದೇಶದ ಪ್ರೀತಿ ಮತ್ತು ನಮ್ಮ ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಈ

ಹರ್ ಘರ್ ತಿರಂಗಾ| ಸೋಶಿಯಲ್ ಮೀಡಿಯಾ ಪ್ರೊಫೈಲ್ ಬದಲಿಸಲು ಪಿಎಂ ಮೋದಿ ಕರೆ Read More »

ಸುಳ್ಯ: ದರ್ಖಾಸ್ತು ಶ್ರೀ ಮುತ್ತು ಮರಿಯಮ್ಮ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಬೆಳ್ಳಾರೆಯ ದರ್ಖಾಸ್ತು ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ಒಕ್ಕೂಟದಿಂದ ಸ್ವಚ್ಚತಾ ಕಾರ್ಯಕ್ರಮ ಆ. 13ರಂದು ನಡೆಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಹರೀಶ್ ಪಧಧಿಕಾರಿಗಳು, ಸೇವಾಪ್ರತಿನಿಧಿ ಯಶೋಧ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸುಳ್ಯ: ದರ್ಖಾಸ್ತು ಶ್ರೀ ಮುತ್ತು ಮರಿಯಮ್ಮ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ Read More »

ಮಡಿಕೇರಿ:ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿ

ಸಮಗ್ರ ನ್ಯೂಸ್: ಮಡಿಕೇರಿಯ ಅರೆಕಾಡು ಗ್ರಾಮದಲ್ಲಿ ಹಾಡ-ಹಗಲೇ ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿಯಾದ ಘಟನೆ ಆ. 13ರಂದು ನಡೆದಿದೆ. ಕಟ್ಟೆಮಾಡು ಸಮೀಪದ ಪರಂಬು ನಿವಾಸಿ ದೇವಪ್ಪ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅರೆಕಾಡು ನೇತಾಜಿ ನಗರದ ಜನ ವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡಾನೆ ಸಾರ್ವಜನಿಕರನ್ನು ಅಟ್ಟಾಡಿಸಿಕೊಂಡು ಬರುತ್ತಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ:ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಬಲಿ Read More »

ಬಿಸ್ಲೆ ಘಾಟ್ ರಸ್ತೆಯ ತಿರುವಿನಲ್ಲಿ ಹೊಂಡದಲ್ಲಿ ಸಿಲುಕಿದ ಬಸ್ !

ಸಮಗ್ರ ನ್ಯೂಸ್: ಸುಬ್ರಹ್ಮಣ್ಯದ ಕುಲ್ಕುಂದ – ಬಿಸ್ಲೆಘಾಟ್ ರಸ್ತೆಯ ಶ್ರೀ ಚೌಡೇಶ್ವರಿ ಅಮ್ಮನವರ ದೇವಾಲಯದ ಪಕ್ಕದ ತಿರುವಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಚಕ್ರ ಹೊಂಡದಲ್ಲಿ ಸಿಲುಕಿಕೊಂಡು ಬಸ್ ಬಾಕಿಯಾದ ಘಟನೆ ಆ.13ರಂದು ಮುಂಜಾನೆ ಸಂಭವಿಸಿದೆ. ಬೆಂಗಳೂರಿನಿಂದ ಅರಕಲಗೂಡು ಶನಿವಾರ ಸಂತೆ – ಕುಕ್ಕೆ ಸುಬ್ರಹ್ಮಣ್ಯ ಮಾರ್ಗವಾಗಿ ಮಂಗಳೂರಿಗೆ ತೆರಳುವ ಬಸ್ ರವಿವಾರ ಮುಂಜಾನೆ ಹೊತ್ತಿಗೆ ಬಿಸ್ಲೆ ಗಡಿ ದೇವಲದ ಸಮೀಪ ರಸ್ತೆಯ ತಿರುವಿನಲ್ಲಿ ಬಸ್ ರಸ್ತೆಯ ಬದಿ ಆಳವಾದ ಹೊಂಡಕ್ಕೆ ಬಸ್ಸಿನ ಹಿಂಭಾಗವು ಸರಿದು ಸಿಲುಕಿಕೊಂಡಿದೆ. ಬಸ್ಸನ್ನು ಮೇಲೆತ್ತಲು

ಬಿಸ್ಲೆ ಘಾಟ್ ರಸ್ತೆಯ ತಿರುವಿನಲ್ಲಿ ಹೊಂಡದಲ್ಲಿ ಸಿಲುಕಿದ ಬಸ್ ! Read More »

‘ಬುದ್ದಿವಂತ’ ನಿಗೆ ಸಂಕಷ್ಟ| ನಟ ಉಪೇಂದ್ರ ಮೇಲೆಅಟ್ರಾಸಿಟಿ ಕೇಸ್ ದಾಖಲು

ಸಮಗ್ರ‌ ನ್ಯೂಸ್: ನಟ ಉಪೇಂದ್ರ ವಿರುದ್ದ ‘ಅಟ್ರಾಸಿಟಿ ಕೇಸ್‌’ ದಾಖಲು ಮಾಡಲಾಗಿದೆ. ನಿನ್ನೆಯಿಂದ ಉಪೇಂದ್ರ ಅವರು ಮಾತನಾಡಿರುವ ವಿಡಿಯೋವೊಂದರಲ್ಲಿ ‘ಊರು ಅಂದ್ಮೇಲೆ ಹೊಲ್ಗೇರಿ ಇರುತ್ತಲ್ಲಾ ಹಾಗೆ’ ಅಂತ ಹೇಳಿದ್ದರು. ಈ ಹೇಳಿಕೆಗೆ ಉಪೇಂದ್ರ ಅವರ ವಿರುದ್ದ ಆಕ್ರೋಶವನ್ನು ವಿವಿಧ ವರ್ಗದ ಜನತೆ ವ್ಯಕ್ತಪಡಿಸಿದ್ದರು. ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂಧನ್‌ ಎನ್ನುವವರು ದೂರು ನೀಡಿದ್ದಾರೆ. ಇನ್ನೂ ಇದೇ ವೇಳೆ ನಟ ಉಪೇಂದ್ರ ಅವರ ವಿರುದ್ದ ಸಿಕೆ ಅಚ್ಚುಕಟ್ಟೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಅಟ್ರಾಸಿಟಿ ಕೇಸ್‌ ದಾಖಲಾಗಿದ್ದು,

‘ಬುದ್ದಿವಂತ’ ನಿಗೆ ಸಂಕಷ್ಟ| ನಟ ಉಪೇಂದ್ರ ಮೇಲೆಅಟ್ರಾಸಿಟಿ ಕೇಸ್ ದಾಖಲು Read More »