ಮಡಿಕೇರಿ:ಮರಗೋಡಿನಲ್ಲಿ ಅಟ್ಟಹಾಸ ಮೆರೆದಿದ್ದ ಪುಂಡಾನೆ ಸೆರೆ
ಸಮಗ್ರ ನ್ಯೂಸ್: ಮಡಿಕೇರಿಯ ಅರೆಕಾಡು ಸಮೀಪದ ಮದರ ಕುಪ್ಪೆಯಲ್ಲಿ ಪುಂಡಾಟ ಮೆರೆದ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಅರೆಕಾಡು ಗ್ರಾಮದಲ್ಲಿ ಆ. 13ರಂದು ಓರ್ವನನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಆ. 15ರಂದು ಸೆರೆ ಹಿಡಿಯಲಾಗಿದೆ. ಸುಮಾರು 150 ಅರಣ್ಯ ಇಲಾಖಾ ಸಿಬ್ಬಂದಿಗಳ ಕಾರ್ಯಚರಣೆ ಯಶಸ್ವಿಯಾಗಿದ್ದು, ಅಟ್ಟಹಾಸ ಮೆರೆದ ಆನೆಯ ಸೆರೆಯಿಂದ ಗ್ರಾಮಸ್ಥರಿಗೆ ನಿಟ್ಟುಸಿರು ಬಿಟ್ಟಂತಾಗಿದೆ.
ಮಡಿಕೇರಿ:ಮರಗೋಡಿನಲ್ಲಿ ಅಟ್ಟಹಾಸ ಮೆರೆದಿದ್ದ ಪುಂಡಾನೆ ಸೆರೆ Read More »