August 2023

ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ NEP ರದ್ದು ಸಿಎಂ ಹೇಳಿಕೆ

ಸಮಗ್ರ ನ್ಯೂಸ್: ಬಿಜೆಪಿ ಸರ್ಕಾರ ದೇಶದೆಲ್ಲೆಡೆ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ರದ್ದುಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವಿಷಯ ಪ್ರಕಟಿಸಿದರು. ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎನ್‌ಇಪಿಯನ್ನು ರದ್ದುಪಡಿಸಲಾಗುವುದು ಹೇಳಿದ್ದಾರೆ. “NEP” ಅನ್ನು ರದ್ದುಗೊಳಿಸುವ ಮೊದಲು ಕೆಲವು ಅಗತ್ಯ ಸಿದ್ಧತೆಗಳನ್ನು ಮಾಡಬೇಕಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದಕ್ಕೆ ಸಮಯಾವಕಾಶ ಸಿಕ್ಕಿರಲಿಲ್ಲ. […]

ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ NEP ರದ್ದು ಸಿಎಂ ಹೇಳಿಕೆ Read More »

ವಿರಾಜಪೇಟೆ: ಸಾಕು ನಾಯಿ ದಾಳಿಗೆ ನರ್ಸ್ ತೀವ್ರ ಗಾಯ

ಸಮಗ್ರ ನ್ಯೂಸ್: ಮನೆ ಬೇಟಿಯ ವೇಳೆ ಸಾಕು ನಾಯಿಯು ನರ್ಸ್ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ವಿರಾಜಪೇಟೆ ಸಮೀಪದ ಪಾರಣೆಯಲ್ಲಿ ನಡೆದಿದೆ. ತೀವ್ರ ಗಾಯಗಳಾಗಿ ನರ್ಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ವಿಚಾರಣೆಗೆಂದು ಮನೆಗೆ ಬೇಟಿ ನೀಡಿದ್ದ ನರ್ಸ್ ಮೇಲೇರಗಿದ ನಾಯಿ ಎಡ ಭುಜಕ್ಕೆ ತೀವ್ರ ಸ್ವರೂಪದ ಗಾಯಗಳನ್ನು ಉಂಟುಮಾಡಿದೆ. ಪಟ್ಟಣ-ನಗರ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟವಾದರೆ, ಈಗ ಕೆಲವೊಂದು ಮನೆಗಳಲ್ಲಿ ಸಾಕು ನಾಯಿಗಳ ಕಾಟ ಹೆಚ್ಚಾಗಿದೆ. ಇದರಿಂದ ದಾದಿಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕರು

ವಿರಾಜಪೇಟೆ: ಸಾಕು ನಾಯಿ ದಾಳಿಗೆ ನರ್ಸ್ ತೀವ್ರ ಗಾಯ Read More »

ಹಣ ಮಾಡಲು ೧ ಎಕರೆ ಅಡಿಕೆ ತೋಟ ಸಾಕು, ಸಿಗುತ್ತೆ ಇಷ್ಟೆಲ್ಲ ಲಾಭ!

ಸಮಗ್ರ ನ್ಯೂಸ್: ಒಂದು ಎಕರೆ ಜಮೀನು ಇದ್ರೆ ಸಾಕು ಅದ್ರಲ್ಲಿ ಅಡಿಕೆಯನ್ನು ಬೆಳೆಯಬಹುದು ಮತ್ತು ಅದರಿಂದ ಹೆಚ್ಚಿನ ಲಾಭ ಕೂಡ ಪಡೆಯಬಹುದು. ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು.ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವರ‍್ಷಿಕ ಬೆಳೆ ಆಗಿರುವ ಇದರಲ್ಲಿ ಸರಿಯಾದ ಫಸಲು ಸಿಕ್ಕರೆ ಲಕ್ಷ ಲಕ್ಷ ಹಣ ಗಳಿಸಬಹುದು. ೨/ ೭ ಒಂದು ಎಕರೆ ಜಮೀನು ಇದ್ರೂ ನೀವು

ಹಣ ಮಾಡಲು ೧ ಎಕರೆ ಅಡಿಕೆ ತೋಟ ಸಾಕು, ಸಿಗುತ್ತೆ ಇಷ್ಟೆಲ್ಲ ಲಾಭ! Read More »

ಈ ಜಿಲ್ಲೆಯಲ್ಲಿ ವರನಿಲ್ಲ, ವಧುನೂ ಇಲ್ಲ. ಆದ್ರೆ ಮದುವೆ ನಡೆಯುತ್ತೆ !| ಆ ಜಿಲ್ಲೆ ಯಾವುದು.!?

ಸಮಗ್ರ ನ್ಯೂಸ್: ಇಲ್ಲಿ ಭಾರೀ ಗೌಜಿಯ ಮದುವೆ. ಶಾಸ್ತ್ರಕ್ಕೆ ಕುಂದಿಲ್ಲ, ಸಂಪ್ರದಾಯದಲ್ಲಿ ಲೋಪವಿಲ್ಲ ಹೀಗೆ ಆಗುತ್ತೆ ನೋಡಿ ನವಜೋಡಿಗಳ ಕಲ್ಯಾಣ ಸಮಾರಂಭ. ಹಾಗಂತ ಹಸಮಣೆ ಏರಿದ ನವದಂಪತಿ ಮಾತ್ರ ಯಾರ ಕಣ್ಣಿಗೆ ಕಾಣಿಸೋದು ಇಲ್ಲ. ಅಬ್ಬ! ಇದೆಂತಹಾ ಆನ್ಲೈನ್ ಮದ್ವೆನಾ ಅಂತಾ ಕೇಳ್ಬೇಡಿ. ಬದಲಿಗೆ ಇದು ತುಳುನಾಡಿನಲ್ಲಿ ಇಂದಿಗೂ ಆಚರಣೆಯಲ್ಲಿರೋ ಒಂದು ವಿಶಿಷ್ಟ ಸಂಪ್ರದಾಯ! ಪ್ರೇತಾತ್ಮ ಮದುವೆ!ನಿಜ, ಮದ್ವೆ ಅಂದ್ಮೇಲೆ ಅಲ್ಲಿ ಗಂಡು, ಹೆಣ್ಣಿನ ಉಪಸ್ಥಿತಿ ರ‍್ಲೇಬೇಕು. ಆದ್ರಿಲ್ಲಿ ನಡೆಯೋ ಮದ್ವೆಯಲ್ಲಿ ಗಂಡು, ಹೆಣ್ಣಿನ ಕುಟುಂಬಿಕರಷ್ಟೇ ಹಾಜರಿರುತ್ತಾರೆ.

ಈ ಜಿಲ್ಲೆಯಲ್ಲಿ ವರನಿಲ್ಲ, ವಧುನೂ ಇಲ್ಲ. ಆದ್ರೆ ಮದುವೆ ನಡೆಯುತ್ತೆ !| ಆ ಜಿಲ್ಲೆ ಯಾವುದು.!? Read More »

ದೇವರಮನೆ ಗುಡ್ಡದಲ್ಲಿ ಪ್ರವಾಸಿಗರಿಂದ ಅಸಭ್ಯ ವರ್ತನೆ| ಕುಡಿದು ಕುಣಿದ ಪುಂಡರು

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಪ್ರವಾಸಿತಾಣ ದೇವರಮನೆಗುಡ್ಡದಲ್ಲಿ ಕೆಲ ಪ್ರವಾಸಿಗಳು ಕುಡಿದು ಬಂದು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಈ ರೀತಿ ಕಂಡುಬರುತ್ತಿತ್ತು ಆದರೆ ಈಗ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುವ ಸುಪ್ರಸಿದ್ಧಐತಿಹಾಸಿಕ ಕಾಲಭೈರವೇಶ್ವರ ಸ್ವಾಮಿ ದೇಗುಲದ ಬಳಿಯೇ ಮದ್ಯ ಸೇವಿಸಿ ಕಾರಿನಲ್ಲಿ ಸಾಂಗ್ ಹಾಕಿಕೊಂಡು ಕೆಲ ಯುವಕರು ಕುಣಿದು ಕುಪ್ಪಳಿಸುವುದು ಇತರೇ ಪ್ರವಾಸಿಗರಿಗೆ ತೊಂದರೆಯನ್ನುಂಟು ಮಾಡಿದೆ. ಕಣ್ಣಿನ ದೃಷ್ಟಿ ಮುಗಿದರೂ, ಮುಗಿಯದ ಹಚ್ಚ ಹಸಿರ ಮುತ್ತೈದೆ ಸೊಬಗು ಅಲ್ಲಿನದು.

ದೇವರಮನೆ ಗುಡ್ಡದಲ್ಲಿ ಪ್ರವಾಸಿಗರಿಂದ ಅಸಭ್ಯ ವರ್ತನೆ| ಕುಡಿದು ಕುಣಿದ ಪುಂಡರು Read More »

ಚಿಕ್ಕಮಗಳೂರು : ಅರಣ್ಯ ಅಧಿಕಾರಿಗಳ ಕಿತ್ತಾಟದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಮಗ್ರ ನ್ಯೂಸ್: ಅರಣ್ಯ ವಸತಿ ಗೃಹದಲ್ಲಿ ಶೌಚಾಲಯದ ನಲ್ಲಿಪೈಪ್ ಹೊಡೆದು ಹೋಗಿದ್ದಕ್ಕೆ ಅಧಿಕಾರಿಗಳಿಬ್ಬರ ನಡುವೆ ಅವಾಚ್ಯ ಶಬ್ದಗಳಿಂದ ಪರಸ್ಪರ ಕಿತ್ತಾಟ ನಡೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಆ.15 ರಂದು ನಡೆದಿದೆ. ಮೂಡಿಗೆರೆ ತಾಲೂಕಿನ ವಲಯ ಅರಣ್ಯಾಧಿಕಾರಿ ಮೋಹನ್ ಹಾಗೂ ಉಪವಲಯ ಅರಣ್ಯಾಧಿಕಾರಿ ನವೀನ್ ಮಧ್ಯೆ ಪರಸ್ಪರ ಅವಾಚ್ಯ ಶಬ್ದಗಳಿಂದ ಸಂಭಾಷಣೆ ನಡೆದಿದ್ದು, ಅದರ ಆಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಕುಡಿದು ಮಾತಾಡಬೇಡ ಎಂದ ನವೀನ್ ಗೆ ಮೋಹನ್ ಅವಾಚ್ಯ ಶಬ್ದಗಳಿಂದ

ಚಿಕ್ಕಮಗಳೂರು : ಅರಣ್ಯ ಅಧಿಕಾರಿಗಳ ಕಿತ್ತಾಟದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ Read More »

ಬೆಂಗಳೂರು:ಲೈಂಗಿಕ ಕಿರುಕುಳ ನಿವೃತ್ತ ಪೋಲಿಸ್ ಅಧಿಕಾರಿ ಬಂಧನ

ಸಮಗ್ರ ನ್ಯೂಸ್:7 ವರ್ಷದ ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಅನ್ನು ಶಿವಾಜಿನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಾಲಕಿಯ ಪೋಷಕರ ದೂರಿನ ಆಧಾರದ ಮೇಲೆ ‍ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಬಂಧಿತ ಆರೋಪಿಯನ್ನು ನಿವೃತ್ತ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ 74 ವರ್ಷದ ಅಬ್ದುಲ್ ಹಫೀಜ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಬಾಲಕಿಯ ತಂದೆ-ತಾಯಿ ಆರೋಪಿಗೆ ಸೇರಿದ ಮನೆಯಲ್ಲೇ ಬಾಡಿಗೆಗಿದ್ದರು, ಸೋಮವಾರ ಬಾಲಕಿ ಆಟವಾಡಲು ಆಟಿಕೆ ತೆಗೆದುಕೊಳ್ಳಲು ಬಂದಾಗ ತನ್ನ ಮನೆಗೆ ಕರೆದೊಯ್ದು

ಬೆಂಗಳೂರು:ಲೈಂಗಿಕ ಕಿರುಕುಳ ನಿವೃತ್ತ ಪೋಲಿಸ್ ಅಧಿಕಾರಿ ಬಂಧನ Read More »

ಚಿಕ್ಕಮಗಳೂರು : ರಾತ್ರೋರಾತ್ರಿ ಕೆನರಾ ಬ್ಯಾಂಕ್ ಎಟಿಎಂ ಲೂಟಿ

ಸಮಗ್ರ ನ್ಯೂಸ್: ಮಧ್ಯರಾತ್ರಿ ಕಳ್ಳರು ಗ್ಯಾಸ್ ಕಟ್ಟರ್ ಬಳಸಿ ಕೆನರಾ ಬ್ಯಾಂಕ್ ಎಟಿಎಂಯನ್ನು ದರೋಡೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿದೆ. ಸಿ.ಸಿ ಟಿ.ವಿಯನ್ನ ನಿಷ್ಕ್ರಿಯಗೊಳಿಸಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ, ಮತ್ತು ಎಟಿಎಂನಲ್ಲಿದ್ದ 14 ಲಕ್ಷ ಹಣ ಲೂಟಿ ಮಾಡಿ ಕಳ್ಳರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆನರಾ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲಿಸಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಮಗಳೂರು : ರಾತ್ರೋರಾತ್ರಿ ಕೆನರಾ ಬ್ಯಾಂಕ್ ಎಟಿಎಂ ಲೂಟಿ Read More »

ಮಂಗಳೂರು: ಪುತ್ರ ಶೋಕದಿಂದ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ಅಪ್ಪ

ಸಮಗ್ರ ನ್ಯೂಸ್: ಪುತ್ರನ ಸಾವಿನ ಬಳಿಕ ಒಂದು ತಿಂಗಳ ಅಂತರದಲ್ಲೇ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಮೃತದೇಹವು ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಇವರು ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಲೋಕೇಶ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸ ಮಾಡಿಕೊಂಡು ಇದ್ದರೆಂದು ತಿಳಿದುಬಂದಿದೆ. ಇವರ ಪುತ್ರ ರಾಜೇಶ್ ಕಳೆದ ಜು.10 ರಂದು ನಾಪತ್ತೆಯಾಗಿ, ಬಳಿಕ ಆತನ ಮೃತದೇಹ ಜು.12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು.

ಮಂಗಳೂರು: ಪುತ್ರ ಶೋಕದಿಂದ ಒಂದೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡ ಅಪ್ಪ Read More »

ಸುಳ್ಯ: ಐವರ್ನಾಡು ಜುಮಾ ಮಸ್ಜಿದ್ ನಲ್ಲಿ ವಾರ್ಷಿಕ ಮಹಾ ಸಭೆ

ಸಮಗ್ರ ನ್ಯೂಸ್:ಸುಳ್ಯದ ಐವರ್ನಾಡಿನ ಜುಮಾ ಮಸ್ಜಿದ್ ನ ವಾರ್ಷಿಕ ಮಹಾಸಭೆಯು ಆ. 11ರಂದು ನುಸ್ರತುಲ್ ಇಸ್ಲಾಂ ಮದ್ರಸ ಹಾಲ್ ನಲ್ಲಿ ನಡೆಯಿತು. ಅಧಿಕಾರಿಗಳು ಕಾನೂನು ಮಾಹಿತಿ ನೀಡಿ, ನಂತರ ಇಕ್ಬಾಲ್ ಎಲಿಮಲೆ, ತಾಜ್ ಮಹಮ್ಮದ್ ಸಂಪಾಜೆ ಹಾಗೂ ಮೂಸಾ ಪೈಂಬಚ್ಚಾಲ್ ರವರು ಮಾತನಾಡಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ಬಳಿಕ ನಡೆದ ಸಭೆಯಲ್ಲಿ ನೂತನ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಶರೀಫ್ ನಿಡುಬೆ, ಕಾರ್ಯದರ್ಶಿಯಾಗಿ ಅಬೂಬಕರ್ ಪರ್ಲಿಕಜೆ, ಉಪಾಧ್ಯಕ್ಷರಾಗಿ ಆದಂ ವಿ.ಕೆ., ಕೋಶಾಧಿಕಾರಿಯಾಗಿ ಅಬ್ದುಲ್ಲ ಪರ್ಲಿಕಜೆ ಹಾಗೂ

ಸುಳ್ಯ: ಐವರ್ನಾಡು ಜುಮಾ ಮಸ್ಜಿದ್ ನಲ್ಲಿ ವಾರ್ಷಿಕ ಮಹಾ ಸಭೆ Read More »