August 2023

ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ದುರಂತ|ವ್ಯಕ್ತಿ ಸಾವು

ಸಮಗ್ರ ನ್ಯೂಸ್: ರಾಮನಗರದ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ವ್ಯಕ್ತಿಯೋರ್ವ ಮೇಲಿಂದ ಬಿದ್ದು ಮೃತಪಟ್ಟ ಘಟನೆ ರಾಮನಗರ ತಾಲೂಕಿನ ಬಿಡದಿ ಬಳಿ ಆ.21 ರಂದು ನಡೆದಿದೆ. ಜಡೇನಹಳ್ಳಿ ನಿವಾಸಿ ರಾಜು(35) ಮೃತ ವ್ಯಕ್ತಿ. ಎಂಜಾಯ್ ಮಾಡಲು ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ತೆರಳಿದ್ದ ರಾಜು , ಆಟ ಆಡುವ ಸಂದರ್ಭದಲ್ಲಿ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ […]

ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ದುರಂತ|ವ್ಯಕ್ತಿ ಸಾವು Read More »

ನೋಡಲಷ್ಟೇ ಚಂದ; ಹತ್ರ ಹೋದ್ರೆ ಸಾವು ಕಟ್ಟಿಟ್ಟದ್ದೇ…!!

ಸಮಗ್ರ ನ್ಯೂಸ್: ಕೊಳಕು ಮಂಡಲ, ಭಾರತದ ನಾಲ್ಕು ದೊಡ್ಡ ವಿಷಕಾರಿ ಹಾವುಗಳಲ್ಲಿ ಒಂದು. ಬಹಳಷ್ಟು ಜನರ ನಂಬಿಕೆಯಂತೆ ಕೇವಲ ಉಸಿರು ತಾಗಿದರೆ ಇಲ್ಲ ಅಪಾಯ. ಆದರೂ ಉಸಿರು ತಾಗದಷ್ಟು ಅಂತರ ಇಟ್ಟುಕೊಳ್ಳುವುದು ಕ್ಷೇಮ. ನಿಶಾಚರಿಯಾದ ಕೊಳಕು ಮಂಡಲಗಳು ರಾತ್ರಿ ಸಂಚಾರಿಗಳು. ಹುಲ್ಲಿನ ರಾಶಿ, ಸೆತ್ತೆ, ಸೆದೆಗಳು, ಕಲ್ಲಿನ ಸಂದಿಗಳೆ ಇವುಗಳ ಆವಾಸಸ್ಥಾನ. ಹಾಗಾಗಿ ಸಾಮಾನ್ಯವಾಗಿ ಓಡಾಡುವ ತಾಣಗಳಲ್ಲಿ ಅಂತಹ ‘ಸ್ಥಾನ‘ಗಳು ಇರದಂತೆ ಮಾಡುವುದು ಮುನ್ನೆಚ್ಚರಿಕೆ ದೃಷ್ಟಿಯಿಂದ ಉತ್ತಮ. ಜೊತೆಗೆ ಅಂತಹ ತಾಣಗಳಲ್ಲಿ ಓಡಾಡುವಾಗ ಎಚ್ಚರ ವಹಿಸುವುದು ಕ್ಷೇಮ.ಹಾಗಾಗಿ

ನೋಡಲಷ್ಟೇ ಚಂದ; ಹತ್ರ ಹೋದ್ರೆ ಸಾವು ಕಟ್ಟಿಟ್ಟದ್ದೇ…!! Read More »

ಮಂಗಳೂರು: ಮುಸ್ಲಿಂ ಯುವಕನ ಮೇಲೆ ತಲವಾರು ದಾಳಿ | ಹಿಂದೂ ಯುವಕರ ಬಂಧನ

ಸಮಗ್ರ ನ್ಯೂಸ್:ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಪ್ರಕರಣ ಆ.20 ರಂದು ನಡೆದಿದೆ. ಕೃತ್ಯ ನಡೆದ 24 ಗಂಟೆಯೊಳಗಡೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್‌ ಬರ್ಮನ್‌ (24), ಅವಿನಾಶ್ (24) ಬಂಧಿತರು ಆ ರೋಪಿಗಳ ಬಳಿಯಿಂದ ಕೃತ್ಯಕ್ಕೆ ಬಳಸಿದ ತಲವಾರು ಹಾಗೂ ದ್ವಿಚಕ್ರವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಹೊರವಲಯದ ಕಾವೂರು ಎಂ.ವಿ.ಶೆಟ್ಟಿ ಕಾಲೇಜು ಬಳಿ ಕೃತ್ಯ ನಡೆದಿತ್ತು. ಸ್ಕೂಟಿಯಲ್ಲಿ ಬಂದ ದುಷ್ಕರ್ಮಿಗಳ ತಂಡ ಅನ್ಯ

ಮಂಗಳೂರು: ಮುಸ್ಲಿಂ ಯುವಕನ ಮೇಲೆ ತಲವಾರು ದಾಳಿ | ಹಿಂದೂ ಯುವಕರ ಬಂಧನ Read More »

ಸುಳ್ಯ:ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದಿ.ಜಾವಕಿ ವೆಂಕಟರಮಣ ಗೌಡರ 11ನೇ ಪುಣ್ಯಸ್ಮರಣೆ

ಸಮಗ್ರ ನ್ಯೂಸ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸುಳ್ಯದ ಶಿಕ್ಷಣ ಕ್ರಾಂತಿಯ ಹರಿಕಾರ ದಿ. ಡಾ ಕುರುಂಜಿ ವೆಂಕಟರಮಣ ಗೌಡರ ಧರ್ಮಪತ್ನಿ ದಿ. ಶ್ರೀಮತಿ ಜಾವಕಿ ವೆಂಕಟರಮಣ ಗೌಡರ 11 ನೇ ಪುಣ್ಯಸ್ಮರಣೆ ಪ್ರಯುಕ್ತ ನುಡಿನಮನ ಕಾರ್ಯಕ್ರಮ ಆಗಸ್ಟ್ 22 ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ರುದ್ರಕುಮಾರ್ ಎಂ.ಎಂ. ದಿ.ಜಾವಕಿ ವೆಂಕಟರಮಣ ಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಸುಳ್ಯ:ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ದಿ.ಜಾವಕಿ ವೆಂಕಟರಮಣ ಗೌಡರ 11ನೇ ಪುಣ್ಯಸ್ಮರಣೆ Read More »

ಚಂದ್ರಯಾನ -3 ; ಸಾಪ್ಟ್ ಲ್ಯಾಂಡಿಂಗ್ ದಿನಾಂಕ ಬದಲಾವಣೆ ಸಾಧ್ಯತೆ

ಸಮಗ್ರ ನ್ಯೂಸ್: ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೇವಲ 25 ರಿಂದ 150 ಕಿಮೀ ದೂರದಲ್ಲಿ ಸುತ್ತುತ್ತಿದೆ. ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್‌ ಮಾಡಲು ಸಿದ್ಧರಿದ್ದೇವೆ. ಒಂದು ಅಂದು ಸಾಧ್ಯವಾಗದೆ ಇದ್ದರೆ ಆಗಸ್ಟ್ 27ರಂದು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ನಾವು ಲ್ಯಾಂಡರ್ ಮಾಡ್ಯೂಲ್ ಮತ್ತು ವಾತಾವರಣದ ಆಧಾರದ ಮೇಲೆ ನಿರ್ಧರಿಸುತ್ತೇವೆ ಎಂದು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್

ಚಂದ್ರಯಾನ -3 ; ಸಾಪ್ಟ್ ಲ್ಯಾಂಡಿಂಗ್ ದಿನಾಂಕ ಬದಲಾವಣೆ ಸಾಧ್ಯತೆ Read More »

ಧರ್ಮಸ್ಥಳ:ಸ್ನಾನಕ್ಕೆಂದು ಬಂದ ಮಹಿಳೆಯ ಜೊತೆ ಯುವಕನ ಅಸಭ್ಯ ವರ್ತನೆ

ಸಮಗ್ರ ನ್ಯೂಸ್: ಸ್ನಾನಕ್ಕೆ ತೆರಳಿದ್ದ ಮಹಿಳೆಯ ಜೊತೆ ಯುವಕನೋರ್ವ ಅಸಭ್ಯ ವರ್ತಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಮನೋಜ್ ಓ.ಆರ್. ಎಂಬಾತನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಸ್ನಾನ ಮಾಡಲೆಂದು ಬಚ್ಚಲು ಮನೆಗೆ ಹೋದಾಗ ನೆರೆ ಮನೆಯ ಯುವಕ ಬಚ್ಚಲು ಮನೆಗೆ ಪ್ರವೇಶ ಮಾಡಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರು ತನಿಕೆ ನಡೆಸುತ್ತಿದ್ದಾರೆ.

ಧರ್ಮಸ್ಥಳ:ಸ್ನಾನಕ್ಕೆಂದು ಬಂದ ಮಹಿಳೆಯ ಜೊತೆ ಯುವಕನ ಅಸಭ್ಯ ವರ್ತನೆ Read More »

ಉಪ್ಪಿನಂಗಡಿ: ಅನಾರೋಗ್ಯದಿಂದ ವಿದ್ಯಾರ್ಥಿ ಮೃತ್ಯು

ಸಮಗ್ರ ನ್ಯೂಸ್: ಉಪ್ಪಿನಂಗಡಿ ಸಮೀಪದ ಪೆದಮಲೆಯ ವಿದ್ಯಾರ್ಥಿಯೋರ್ವ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟ ಘಟನೆ ಆ. 21ರಂದು ರಾತ್ರಿ ವರದಿಯಾಗಿದೆ. ಪೆದಮಲೆ ನಿವಾಸಿ ಸಮದ್ ಹಾಜಿ ರವರ ಪುತ್ರ ಅಹ್ಮದ್ ಸಹದ್(15) ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ನ SSLC ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಹದ್ ಕಳೆದ ಹಲವು ದಿನಗಳಿಂದ ಬೆಂಗಳೂರಿನ ನಾರಾಯಣ ಹೃದಯಾಳಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಾಲಾ ಚಟುವಟಿಕೆಗಳಲ್ಲಿ ಬಹಳ ಚುರುಕಿನ ಮತ್ತು ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಂತಾಗಿದೆ. ಇನ್ನು ಸಂತಾಪ ಸೂಚಕವಾಗಿ

ಉಪ್ಪಿನಂಗಡಿ: ಅನಾರೋಗ್ಯದಿಂದ ವಿದ್ಯಾರ್ಥಿ ಮೃತ್ಯು Read More »

ಸುಳ್ಯ: ತಮಿಳುನಾಡು ಮೂಲದ ದಂಪತಿ ಆತ್ಮಹತ್ಯೆ

ಸಮಗ್ರ ನ್ಯೂಸ್: ತಮಿಳುನಾಡು ಮೂಲದ ರಬ್ಬರ್ ಕಾರ್ಮಿಕ ದಂಪತಿ ತಾಲೂಕಿನ ದೇವಚಳ್ಳ ಗ್ರಾಮದ ಎಲಿಮಲೆಯ‌ ಮನೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ವರದಿಯಾಗಿದೆ. ಎಲಿಮಲೆಯ ಪರಿಸರದಲ್ಲಿ ಕಳೆದ ಅನೇಕ‌ ವರ್ಷಗಳಿಂದ ಟ್ಯಾಪಿಂಗ್ ಮಾಡುತ್ತಿದ್ದ ರಾಜನ್ ಮತ್ತು ಅವರ ಪತ್ನಿ ಕಳೆದ ಕೆಲ ಸಮಯಗಳಿಂದ ರಬ್ಬರ್ ತೋಟವನ್ನು ಖರೀದಿಸಿ ಟ್ಯಾಪಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ. ಮನೆಯಲ್ಲಿ ದಂಪತಿಗಳು ಮಾತ್ರ ಇದ್ದು, ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ಇಬ್ಬರು ಪುತ್ರಿಯರು,

ಸುಳ್ಯ: ತಮಿಳುನಾಡು ಮೂಲದ ದಂಪತಿ ಆತ್ಮಹತ್ಯೆ Read More »

Cauvery dispute| ಕಾವೇರಿ ನೀರು ಹಂಚಿಕೆ ವಿವಾದ| ನಾಳೆ(ಆ.24) ಸರ್ವಪಕ್ಷ ಸಭೆ ಕರೆದ ಸಿಎಂ

ಸಮಗ್ರ ನ್ಯೂಸ್: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರ ಕುರಿತು ಆಗಸ್ಟ್ 23 ರಂದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕಾವೇರಿ, ಮಹದಾಯಿ ಅಂತರ್ ರಾಜ್ಯ ವಿಚಾರಕ್ಕಾಗಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಈ ಸಭೆಗೆ ನಮ್ಮ ಸಂಸದರೂ ಬರುತ್ತಾರೆ. ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅನೇಕ ವಿಚಾರಗಳ ಬಗ್ಗೆಚರ್ಚೆ ನಡೆಸಲಾಗುವುದು.

Cauvery dispute| ಕಾವೇರಿ ನೀರು ಹಂಚಿಕೆ ವಿವಾದ| ನಾಳೆ(ಆ.24) ಸರ್ವಪಕ್ಷ ಸಭೆ ಕರೆದ ಸಿಎಂ Read More »

ಹವಾಮಾನ ವರದಿ| ಮತ್ತೆ ಮುಂಗಾರು ಚುರುಕಾಗುವ ಮುನ್ಸೂಚನೆ| ಕರಾವಳಿಯಲ್ಲಿ ಉತ್ತಮ ಮಳೆ ಸಾಧ್ಯತೆ ಎಂದ ಐಎಂಡಿ

ಸಮಗ್ರ ನ್ಯೂಸ್: ಈ ಬಾರಿ ರಾಜ್ಯಕ್ಕೆ ಮುಂಗಾರು ಆಗಮನ ಕೊಟ್ಟಿದ್ದೇ ವಿಳಂಬವಾಗಿ. ಜುಲೈ ತಿಂಗಳ ಮಧ್ಯದಲ್ಲಿ ಆರ್ಭಟಿಸಿದ ಮಳೆರಾಯ ಹಲವೆಡೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದ. ಆದರೆ ಆಗಸ್ಟ್ ತಿಂಗಳಲ್ಲಿ ಒಂದೆರಡು ದಿನ ಮಾತ್ರ ಮಳೆ ಬಂದಹಾಗೆ ಮಾಡಿ ಇದೀಗ ಸಂಪೂರ್ಣವಾಗಿ ನಿಂತು ಹೋಗಿದೆ. ನಿನ್ನೆ (ಆಗಸ್ಟ್‌ 22) ಹಲವೆಡೆ ಮಾತ್ರ ಜಿನುಗು ಮಳೆಯಾದರೆ, ಇನ್ನು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾರವಣವೇ ಮುಂದುವರೆದಿತ್ತು. ಇಂದು (ಆಗಸ್ಟ್‌ 22) ರಾಜ್ಯದ ಕರಾವಳಿ ಭಾಗದ ಎಲ್ಲಾ ಜಿಲ್ಲೆಗಳಲ್ಲೂ ಅಬ್ಬರದ ಮಳೆ ಸುರಿಯಲಿದೆ

ಹವಾಮಾನ ವರದಿ| ಮತ್ತೆ ಮುಂಗಾರು ಚುರುಕಾಗುವ ಮುನ್ಸೂಚನೆ| ಕರಾವಳಿಯಲ್ಲಿ ಉತ್ತಮ ಮಳೆ ಸಾಧ್ಯತೆ ಎಂದ ಐಎಂಡಿ Read More »