ಸಮಗ್ರ ನ್ಯೂಸ್: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಯಿತು.
ಅಧ್ಯಕ್ಷರಾಗಿ ದಯಾನಂದ ಕಲ್ನಾರ್, ಉಪಾಧ್ಯಕ್ಷರಾಗಿ ಪದ್ಮನಾಭ ಅರಂಬೂರು, ಪ್ರಧಾನ ಕಾರ್ಯದರ್ಶಿಯಾಗಿ ತೇಜೇಶ್ವರ್ ಕುಂದಲ್ಪಾಡಿ, ಮತ್ತು ಜತೆ ಕಾರ್ಯದರ್ಶಿಯಾಗಿ ಜಯದೀಪ್ ಕುದ್ಕುಳಿ, ಕೋಶಾಧಿಕಾರಿಯಾಗಿ ಪ್ರಜ್ಞಾ ಎಸ್. ನಾರಾಯಣ್ ಆಯ್ಕೆಯಾದರು. ನಿರ್ದೇಶಕರಾಗಿ ಜೆ.ಕೆ. ರೈ, ಕೃಷ್ಣ ಬೆಟ್ಟ, ಹಸೈನಾರ್ ಜಯನಗರ, ವಿಶ್ವನಾಥ ಮೊಟುಕಾನ, ಪದ್ಮನಾಭ ಮುಂಡೋಕಜೆ, ಗಣೇಶ್ ಮಾವಂಜಿ, ಸತೀಶ್ ಹೊದ್ದೆಟ್ಟಿ, ಪುಷ್ಪರಾಜ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಮಾಜಿ ಅಧ್ಯಕ್ಷ ಗಂಗಾಧರ ಮಟ್ಟಿ, ದುರ್ಗಾಕುಮಾರ್ ನಾಯರ್ ಕೆರೆ, ಗಂಗಾಧರ ಕಲ್ಲಪಳ್ಳಿ, ಜಯಪ್ರಕಾಶ್ ಕುಕ್ಕೇಟಿ, ಗಿರೀಶ್ ಅಡ್ಪಂಗಾಯ, ಶಿವಪ್ರಸಾದ್ ಕೇರ್ಪಳ, ಗಿರೀಶ್ ಪೆರುಮುಂಡ ಆಯ್ಕೆಯಾದರು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಕೇರ್ಪಳ ವರದಿ ವಾಚಿಸಿ, ಕೋಶಾಧಿಕಾರಿ ದಯಾನಂದ ಕಲ್ನಾರ್ ಲೆಕ್ಕಪತ್ರ ಮಂಡಿಸಿದರು.