ಸಮಗ್ರ ನ್ಯೂಸ್: ಕಾಫಿನಾಡಿನ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಚಿಕ್ಕಮಗಳೂರು ಪೊಲೀಸರು ದಾಳಿ ಮಾಡಿದ ಸಂಧರ್ಬದಲ್ಲಿ ದನದ ಮಾಂಸ ರೆಡ್ ಹ್ಯಾಂಡ್ ಆಗಿ ಸೀಜ್ ಮಾಡಲಾಗಿದೆ.
ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ. ಐದು ಕೆ.ಜಿ. ದನದ ಮಾಂಸ, ಗೋ ಮಾಂಸದ ಬಿರಿಯಾನಿ ಮತ್ತು ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ಪ್ರವಾಸಿಗರ ಪಾಲಿಗೆ ಭೂಲೋಕದ ಸ್ವರ್ಗವೆಂದೆ ಪ್ರಸಿದ್ಧವಾಗಿರುವ ಮಲೆನಾಡಿನಲ್ಲಿ ಕಣ್ಣಿನ ದೃಷ್ಠಿ ಮುಗಿದರೂ ಮುಗಿಯದ ಬೆಟ್ಟಗುಡ್ಡಗಳ ಸಾಲುಗಳಿವೆ. ಇಲ್ಲಿನ ಸೌಂದರ್ಯದ ರಾಶಿಗೆ ಪ್ರವಾಸಿಗರು ಕೂಡ ಫುಲ್ ಫಿದಾ ಆಗಿ ಬಿಡುತ್ತಾರೆ. ಮುಳ್ಳಯ್ಯನಗಿರಿಯಿಂದ ದತ್ತಪೀಠ, ದೇವರಮನೆಗುಡ್ಡ, ರಾಣಿಝರಿ ಮತ್ತಷ್ಟು ಚೆಂದ. ಇಲ್ಲಿನ ಪ್ರಕೃತಿಯಷ್ಟೆ, ಕಾಫಿನಾಡು ನಾನ್ ವೆಜ್ಗೂ ಕೂಡ ಫೇಮಸ್.
ಒಂದು ಹೋಟೇಲ್ ಗಿಂತ ಮತ್ತೊಂದು ಹೋಟೇಲ್ ರುಚಿ, ಶುಚಿಗೆ ಹೆಸರುವಾಸಿ, ಆದ್ರೆ ಇದೀಗ ಪೊಲೀಸರ ರೈಡ್ ನಿಂದ ಕೆಲ ಹೋಟೇಲ್ ನಿಜ ಬಣ್ಣ ಬಯಲಾಗಿದೆ. ಕುರಿ ಮಾಂಸದ ಬಿರಿಯಾನಿ ಬದಲು ಗೋ ಮಾಂಸದ ಬಿರಿಯಾನಿ ನೀಡಿ ಪೊಲೀಸರ ಅತಿಥಿ ಆಗಿದ್ದಾರೆ.
ರೆಡ್ ಹ್ಯಾಂಡ್ ಆಗಿ ಸೀಜ್ ಮಾಡಿದ ಚಿಕ್ಕಮಗಳೂರು ಪೊಲೀಸರು:
ಪ್ರವಾಸೋಧ್ಯಮದಿಂದಲೇ ಕಾಫಿನಾಡಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ದಿನದಿಂದ ದಿನಕ್ಕೆ ಕಾಫಿನಾಡ ಪ್ರವಾಸೋಧ್ಯಮವೂ ಬೆಳೆಯುತ್ತಲೇ ಇದೆ. ಪ್ರವಾಸಿಗರನ್ನ ಆಕರ್ಷಿಸಲು ಹೋಟೆಲ್, ರೆಸಾರ್ಟ್, ಹೋಂಸ್ಟೇ ಮಾಲೀಕರು ಕೂಡ ಇನ್ನಿಲ್ಲದ ಕರಸತ್ತು ನಡೆಸುತ್ತಿದ್ದಾರೆ.
ಆದರೆ, ಪ್ರವಾಸಿಗರನ್ನ ಆಕರ್ಷಿಸುವ ಜೊತೆ ಹಣ ಮಾಡುವ ಉದ್ದೇಶದಿಂದ ಕೆಲ ಹೋಟೆಲ್ಗಳಲ್ಲಿ ಕುರಿ ಮಾಂಸದ ಬದಲು ದನದ ಮಾಂಸದಲ್ಲಿ ಬಿರಿಯಾನಿ ಸೇರಿದಂತೆ ನಾನ್ ವೆಚ್ ಅಡುಗೆ ಮಾಡುತ್ತಿದ್ದಾರೆ. ಕುರಿ ಮಟನ್ ಕೆ.ಜಿ.ಗೆ 700-800 ರೂಪಾಯಿ. ಆದ್ರೆ, ದನದ ಮಟನ್ 200-300 ರೂಪಾಯಿಗೆ ಸಿಗುತ್ತೆ. ಹಾಗಾಗಿ, ಕೆಲ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಕುರಿ ಮಟನ್ ಜೊತೆ ದನದ ಮಾಂಸ ಮಿಕ್ಸ್ ಮಾಡಿ ಅಡುಗೆ ಮಾಡಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಸ್ಥಳಿಯರು ದೂರಿನ ಮೇರೆಗೆ ನಗರದ ಎವರೆಸ್ಟ್ ಹಾಗೂ ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ ಐದು ಕೆ.ಜಿ. ದನದ ಮಾಂಸ ಹಾಗೂ ಅದೇ ಮಾಂಸದ ಬಿರಿಯಾನಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.
ಹೋಟೆಲ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ:
ಯಾವಾಗ ಹೋಟೆಲ್ನಲ್ಲಿ ದನದ ಮಾಂಸ ಬಳಸುತ್ತಾರೆ ಎಂದು ಗೊತ್ತಾದಾಗ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಯಾಕಂದ್ರೆ, ಜಿಲ್ಲೆಗೆ ಬರುವ ಲಕ್ಷಾಂತರ ಪ್ರವಾಸಿಗರು ಕೂಡ ಜಿಲ್ಲೆಯ ಸೌಂದರ್ಯದಷ್ಟೆ ಇಲ್ಲಿನ ಊಟವನ್ನೂ ಇಷ್ಟ ಪಡುತ್ತಾರೆ. ಆ ರೀತಿ ನಾನ್ ವೆಜ್ ಪ್ರಿಯರನ್ನು ಬಂಡವಾಳ ಮಾಡಿಕೊಂಡು ಹೋಟೆಲ್ ಮಾಲೀಕರು ದಂಧೆ ಮಾಡುತ್ತಿದ್ದಾರೆ. ಆದರೆ, ಹೋಟೆಲ್ ಮಾಲೀಕರ ದುರಾಸೆಗೆ ಸ್ಥಳಿಯರ ಜೊತೆ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ. ಯಾಕಂದ್ರೆ, ಹಿಂದೂಗಳಲ್ಲಿ ಯಾರೂ ದನದ ಮಾಂಸ ತಿನ್ನೋದಿಲ್ಲ. ಹೀಗಿರುವಾಗ ಹೋಟೆಲ್ಗಳಲ್ಲಿ ಕುರಿ ಮಾಂಸ ಎಂದು ದನದ ಮಾಂಸ ಕೊಟ್ಟರೆ ಮನುಷ್ಯರ ಭಾವನೆ, ಸಿದ್ದಾಂತದ ಜೊತೆ ಆಟವಾಡಿದಂತೆ. ಹಾಗಾಗಿ, ಬಜರಂಗದಳ ಕೂಡ ಹೋಟೆಲ್ ಮಾಲೀಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಗೋವನ್ನ ತಾಯಿ ಎಂದು ಪೂಜಿಸುವ ಮಲೆನಾಡಲ್ಲಿ ಈ ರೀತಿ ಗೊತ್ತಿಲ್ಲದಂತೆ ಕುರಿ ಜೊತೆ ದನದ ಮಾಂಸ ಮಿಕ್ಸ್ ಮಾಡ್ತಿರೋದು ಜನರ ಭಾವನೆ ಜೊತೆ ಆಟವಾಡಿದಂತೆಯೇ ಸರಿ. ಸದ್ಯಕ್ಕೆ ಪೊಲೀಸರ ಕೆಲಸಕ್ಕೆ ಸ್ಥಳಿಯರು ಭೇಷ್ ಅಂದಿದ್ದಾರೆ. ಅದೇ ರೀತಿ, ಇಂತಹಾ ಮೋಸದ ಜಾಲಕ್ಕೆ ಪೊಲೀಸರು ಸಂಪೂರ್ಣ ಬ್ರೇಕ್ ಹಾಕಬೇಕೆಂಬುದು ಸ್ಥಳಿಯರ ಒತ್ತಾಯ.