Ad Widget .

ಹಾಸನ:ಗಾಯಗೊಂಡ ಕಾಡಾನೆಯನ್ನು ಸೆರೆ ಹಿಡಿಯುವ ವೇಳೆ ದಾಳಿ| ಅರಣ್ಯ ಇಲಾಖೆಯ ಶಾರ್ಪ್ ಶೂಟರ್ ಸಾವು

ಸಮಗ್ರ ನ್ಯೂಸ್: ಗಾಯಗೊಂಡಿದ್ದ ಕಾಡಾನೆ ಸೆರೆ ಹಿಡಿದು ಅರವಳಿಕೆ ಮದ್ದು ನೀಡಲು ಹೋಗಿದ್ದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿಗೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.

Ad Widget . Ad Widget .

ಗಾಯಗೊಂಡ ಕಾಡಾನೆ ಚಿಕಿತ್ಸೆ ನೀಡಲು ಅರವಳಿಕೆ ಮದ್ದು ನೀಡಲು ಹೋಗಿದ್ದ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಆನೆ ದಾಳಿ ಮಾಡಿದೆ. ವನ್ಯ ಜೀವಿ ವೈದ್ಯ ವಸೀಂ ಜೊತೆ ಅರಣ್ಯಕ್ಕೆ ತೆರಳಿದ್ದ ವೇಳೆ ಭೀಮ ನೇರವಾಗಿ ಮಾಡಿದ ದಾಳಿಗೆ ಅರಣ್ಯ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

Ad Widget . Ad Widget .

ಅರಣ್ಯ ಸಿಬ್ಬಂದಿ ವೆಂಕಟೇಶ್ ಈ ಹಿಂದೆ ಹತ್ತಾರು ಆನೆಗಳನ್ನು ಸೆರೆಹಿಡಿಯುವ ವೇಳೆ ಅರವಳಿಕೆ ಮದ್ದು ನೀಡಿದ್ದರು. ಇನ್ನು ಭೀಮ ಕೂಡ ಶಾಂತ ಸ್ವಭಾವದವನಾಗಿದ್ದು, ಇದುವರೆಗೆ ಯಾರ ಮೇಲೂ ದಾಳಿ ಮಾಡಿರಲಿಲ್ಲ. ನೋವಿನಿಂದ ಬಳಲುತ್ತಿದ್ದ ಭೀಮ ಇಂದು ಭಯದಲ್ಲಿ ತನ್ನನನ್ನು ಹಿಡಿಯಲು ಬಂದ ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ಮಾಡಿದೆ.

Leave a Comment

Your email address will not be published. Required fields are marked *