ಸುಳ್ಯ: ಜೀವಬಲಿಗಾಗಿ ಕಾಯುತ್ತಿದೆ ಕಾಲೇಜು ಕಾಂಪೌಂಡ್| ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಗ್ಯಾರಂಟಿ

ಸಮಗ್ರ ನ್ಯೂಸ್: ಒಂದೆಡೆ ರಸ್ತೆಗೆ ವಾಲಿದ ಕಾಲೇಜು ಕಾಂಪೌಂಡ್, ಅದರ ಪಕ್ಕದಲ್ಲೇ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನ ಓಡಾಡುವ ದೃಶ್ಯ. ಈ ಸನ್ನಿವೇಶ ಕಂಡುಬರುತ್ತಿರುವುದು ಸುಳ್ಯದ ಸ.ಪ.ಪೂ ಕಾಲೇಜು ಬಳಿ.

Ad Widget ... ..

ಇಲ್ಲಿನ ಕಾಲೇಜು ಕಾಂಪೌಂಡ್ ಕುಸಿಯುವ ಭೀತಿಯಲ್ಲಿದ್ದು, ದಿಢೀರ್ ಉರುಳುವ ಲಕ್ಷಣ ಕಂಡುಬರುತ್ತಿದೆ. ಇದರ ಸುತ್ತಮುತ್ತ ನೂರಾರು ಜನ, ವಾಹನಗಳು ಸಂಚರಿಸುತ್ತಿದ್ದು, ಒಂದು ವೇಳೆ ಗೋಡೆ ಕುಸಿದಲ್ಲಿ ಭಾರೀ ಅನಾಹುತ ಸಂಭವಿಸುವ ಲಕ್ಷಣಗಳಿದೆ.

Ad Widget

ಆದ್ದರಿಂದ ಸಂಬಂಧಪಟ್ಟವರು ಈ ಕುರಿತಂತೆ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸುವುದು ಒಳಿತು.

Leave a Comment

Your email address will not be published. Required fields are marked *