Ad Widget .

ಕುಮಟಾದಲ್ಲಿ ಭಾರತದ ಅತೀ ದೊಡ್ಡ ಬಿಳಿ ಹೆಬ್ಬಾವು ಪ್ರತ್ಯಕ್ಷ| ಉರಗ ತಜ್ಞರಿಂದ ರಕ್ಷಣೆ

ಸಮಗ್ರ ನ್ಯೂಸ್: ಭಾರತದಲ್ಲೇ ಅತೀ ದೊಡ್ಡ ಮತ್ತು ಅತ್ಯಂತ ಅಪರೂಪದ ಬಿಳಿ‌ ಹೆಬ್ಬಾವು ಉ.ಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎನ್ನುವವರ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಗಿದೆ. ಬಿಳಿ ಹೆಬ್ಬಾವು ಕಾಣಿಸಿದ್ದು, ಉರಗ ತಜ್ಞ ಪವನ್ ನಾಯ್ಕ ಅವರು ಸ್ಥಳಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ.

Ad Widget . Ad Widget .

ಕಳೆದ ವರ್ಷವಷ್ಟೇ ಮಿರ್ಜಾನ್ ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿದ್ದು ರಾತ್ರಿಯ ವೇಳೆ ಪವನ್ ನಾಯ್ಕ ಹೋಗಿ ರಕ್ಷಣೆ ಮಾಡಿದ್ದು ರಾಷ್ಟ್ರಾದ್ಯಂತ ವೈರಲ್ ಆಗಿತ್ತು. ಈಗ ಬಹುತೇಕ 3 ಪಟ್ಟು ದೊಡ್ಡ ಗಾತ್ರದ ಹೆಬ್ಬಾವು ಹೆಗಡೆಯಲ್ಲಿ ಕಾಣಿಸಿದ್ದು ಜನರು ಭಯಬೀತರಾಗಿದ್ದು ನೂರಾರು ಜನ ನೆರೆದಿದ್ದರು.

Ad Widget . Ad Widget .

ಇಂತಹ ಹಾವು ಕರ್ನಾಟಕದಲ್ಲೇ ಮೂರನೇ ಬಾರಿ ರಕ್ಷಣೆಯಾಗಿದ್ದು, ಅದರಲ್ಲಿ 2 ಭಾರಿ ಕುಮಟಾದಲ್ಲೇ ರಕ್ಷಣೆಯಾಗಿದ್ದು ವಿಶೇಷವಾಗಿರುತ್ತದೆ. ಹಾಗೂ ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವಿನ ರಕ್ಷಣೆಯ ಕೀರ್ತಿಯೂ ಪವನ್ ನಾಯ್ಕ ಅವರಿಗೆ ಲಭಿಸಿದೆ.

ರಾತ್ರಿಯಾಗಿದ್ದರಿಂದ ಬೆಳಿಗ್ಗೆ ಕುಮಟಾ ಅರಣ್ಯ ಇಲಾಖೆಯ ಒಪ್ಪಿಸಲಾಗಿದ್ದು, ಮೈಮೇಲೆ ಸಣ್ಣ ಪುಟ್ಡ ಗಾಯಗಳಿರುವುದರಿಂದ ಮೈಸೂರು ಮೃಗಾಲಯಕ್ಕೆ ಕಳಿಸಲಾಗಿದೆ. ಡಿ ಎಫ್ ಓ ಶ್ರೀ ರವಿಶಂಕರ್, ಏಸಿಎಫ್ ಶ್ರೀ ಜಿ ಲೋಹಿತ್, ಆರ್ ಎಪ್ ಓ ಶ್ರೀ ಎಸ್ ಟಿ ಪಟಗಾರ್, ಡಿ ಆರ್ ಎಫ್ ಓ ಹೂವಣ್ಣ ಗೌಡ ಸ್ಥಳದಲ್ಲಿದ್ದರು.

Leave a Comment

Your email address will not be published. Required fields are marked *