ಸಮಗ್ರ ನ್ಯೂಸ್: ಬೆಂಗಳೂರಿನ ಆತ್ಮ ಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಆ.30 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಗೌರಿತಾ.ಕೆ.ಜಿ ಳಿಗೆ “ಯೋಗ ರತ್ನ ಡಾ. ರಾಜ್ ಕುಮಾರ್ ಪ್ರಶಸ್ತಿ” ಯನ್ನು ಖ್ಯಾತ ಚಲನಚಿತ್ರ ನಿರ್ದೇಶಕ ರಾದ ಡಾ. ಟಿ. ಎಸ್. ನಾಗಾಭರಣ ರವರು ನೀಡಿದರು

ಪ್ರಶಸ್ತಿ ಪ್ರದಾನವನ್ನು ಹೆಸರಾಂತ ಸ್ವಾಮೀಜಿ ಗಳು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರದ ಬಹುಮುಖ್ಯ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.ಈಕೆ ಕುಮಾರಸ್ವಾಮಿ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಡಾ. ಗೌತಮ್ ಮತ್ತು ಡಾ.ರಾಜೇಶ್ವರಿ ದಂಪತಿಯ ಪುತ್ರಿಯಾಗಿದ್ದರೆ.