Ad Widget .

ಉತ್ತರ, ದಕ್ಷಿಣವಲ್ಲ, ರಾಜಕಾರಣವೇ ಬೇಡ ಅಂತಿದ್ದೀನಿ| ಜನಸೇವೆಗೆ ಸಂಸದನಾಗಿಯೇ ಇರಬೇಕೆಂದಿಲ್ಲ- ಡಿ.ಕೆ ಸುರೇಶ್ ಅಚ್ಚರಿಯ ಹೇಳಿಕೆ

ಸಮಗ್ರ ನ್ಯೂಸ್: ಸದ್ಯಕ್ಕೆ ನಾನು ರಾಜಕಾರಣವೇ ಸಾಕು ಅಂತಿದ್ದೀನಿ. ನೀವು ನೋಡಿದರೆ ನನ್ನ ಉತ್ತರಕ್ಕೆ ಕರೆದುಕೊಂಡು ಹೋಗುತ್ತಿದ್ದೀರಿ. ಉತ್ತರವೋ? ದಕ್ಷಿಣವೋ? ಪೂರ್ವವೋ? ಪಶ್ಚಿಮವೋ ? ಯಾವುದೋ ಏನೋ ನನಗೆ ಗೊತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

Ad Widget . Ad Widget .

ಕ್ಷೇತ್ರ ಬದಲಾವಣೆ ಮಾಡುವ ಚರ್ಚೆ ನಡೆದಿರುವ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಈ ಉತ್ತರ ನೀಡಿದ ಅವರು ನನ್ನನ್ನು ರಾಜಕೀಯವಾಗಿ ಬೆಳೆಸುತ್ತಿರುವವರ ತೀರ್ಮಾನವೇ ಅಂತಿಮ. ರಾಜ್ಯ ರಾಜಕಾರಣ ರಾಷ್ಟ್ರ ರಾಜಕಾರಣ ಎಲ್ಲ ಒಂದೇ
ಅಲ್ಲವೇ ಎಂದು ಹೊಸ ಚರ್ಚೆಗೂ ನಾಂದಿ ಹಾಡಿದರು.

Ad Widget . Ad Widget .

ನಾನು ರಾಜಕೀಯಕ್ಕೆ ಬಂದು ಹತ್ತು ವರ್ಷ ಆಗಿಹೋಗಿದೆ. ಸರ್ಕಾರ ನಮ್ಮದೇ ಇರಬಹುದು. ಆದರೆ ನಾನು ಜನರ ಸೇವೆ ಮಾಡಬೇಕು. ಹಾಗೆಂದು ಸಂಸದನಾಗಿಯೇ ಕೆಲಸ ಮಾಡಬೇಕು ಅಂತೇನಿಲ್ಲ. ಸಂಸದನಾಗಿ ಮಾಡಬೇಕಾದರೆ ಜವಾಬ್ದಾರಿ ಇರುತ್ತದೆ. ಕಾರ್ಯಕರ್ತನಾಗಿ ಖುಷಿ ಇರುತ್ತದೆ. ಎಂಪಿಗಿಂತ ಕಾರ್ಯಕರ್ತರ ಸ್ಥಾನವೇ ಬಹಳ ಪ್ರಮುಖ ಸ್ಥಾನ ಎಂದರು.

Leave a Comment

Your email address will not be published. Required fields are marked *