ಸಮಗ್ರ ನ್ಯೂಸ್: ಕಲಾವಿದೆ, ಸಾಹಿತಿ, ಗಾಯಕಿ, ಸಮಾಜಸೇವಕಿಯಾಗಿ ಗುರುತಿಸಿಕೊಂಡಿರುವ ಡಾ. ಶ್ವೇತಾ ಮಡಪ್ಪಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಧಿಕೃತವಾಗಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದು ಸಕ್ರೀಯ ರಾಜಕಾರಣಕ್ಕೆ ಪ್ರವೇಶಿಸಿರುವ ಬಗ್ಗೆ ವೆಬ್ ನ್ಯೂಸ್ ಪೋರ್ಟಲ್ ಒಂದು ವರದಿ ಮಾಡಿದೆ.
ಮೈಸೂರಿನಲ್ಲಿ ನೆಲೆಸಿರುವ ಶ್ವೇತಾ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪೆಯಾದರು. ಮೈಸೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿಯಾಗಿದ್ದಾರೆ.
ರಾಜಕಾರಣ ಜನಸೇವೆಯ ಒಂದು ಅದ್ಭುತ ಮಾಧ್ಯಮ. ಭಾರತೀಯ ರಾಜಕಾರಣ ಹೆಣ್ಣು ಮಕ್ಕಳಿಗೆ ಸೇಫೆಸ್ಟ್ ರಾಜಕಾರಣವಾಗಿ ಪರಿವರ್ತನೆಯಾಗಬೇಕು.ಆ ಮೂಲಕ ಹೆಚ್ಚು ಹೆಚ್ಚು ಹೆಣ್ಣು ಮಕ್ಕಳು ರಾಜಕಾರಣಕ್ಕೆ ಬರುವಂತಾಗಬೇಕು. ಅಂಥ ರಾಜಮಾರ್ಗವೊಂದು ನಿರ್ಮಾಣವಾಗಬೇಕೆಂಬುದು ನನ್ನ ಮಹತ್ವಾಕಾಂಕ್ಷೆ ಎಂದು ಶ್ವೇತಾ ಹೇಳಿದ್ದಾರೆ.
ಮೂಲತಃ ಸುಳ್ಯದವರಾದ ಶ್ವೇತಾ ಮಡಪ್ಪಾಡಿ ಮೈಸೂರು ಮೂಲದ ಪ್ರಸಾದ್ ಎಂಬವರನ್ನು ವಿವಾಹವಾಗಿ ಅಲ್ಲಿಯೇ ನೆಲೆಸಿದ್ದಾರೆ. ಸಾಹಿತ್ಯದ ಹಲವು ಮಜಲುಗಳಲ್ಲಿ ಕೈಯಾಡಿಸಿರುವ ಇವರು ಸುಗಮ ಸಂಗೀತ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು. ಮೈಸೂರಿನಲ್ಲಿ ‘ಬ್ರಾಹ್ಮಿಣ್ಸ್ ಕೆಫೆ’ ಎಂಬ ಹೊಟೇಲ್ ಉದ್ಯಮ ನಡೆಸುತ್ತಿರುವ ಶ್ವೇತಾ ಈ ಹಿಂದೆ ಜೊಮ್ಯಾಟೋ ವಿರುದ್ದ ಧ್ವನಿ ಎತ್ತಿ ಸುದ್ದಿಯಾಗಿದ್ದರು.