Ad Widget .

ದೇಶವಾಸಿಗಳಿಗೆ ಬಿಗ್ ರಿಲೀಪ್| ಅಡುಗೆ ಅನಿಲ ಬೆಲೆಯಲ್ಲಿ ಭಾರೀ ಇಳಿಕೆ

ಸಮಗ್ರ ನ್ಯೂಸ್: ಹಣದುಬ್ಬರದಿಂದ ಕಂಗೆಟ್ಟಿರುವ ಜನರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ಸರ್ಕಾರವು ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ 200 ರೂ.ವರೆಗೆ ಕಡಿತಗೊಳಿಸಿದೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ 200 ರೂ.ಗಳ ಸಹಾಯಧನವನ್ನ ಸರ್ಕಾರ ಘೋಷಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉಜ್ವಲ ಯೋಜನೆಯಡಿ ಬರುವ ಫಲಾನುಭವಿಗಳಿಗೆ ಈ ಸಹಾಯಧನವನ್ನ ನೀಡಲಾಗುವುದು. ಆಗಸ್ಟ್ ಒಂದರಂದು ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 100 ರೂಪಾಯಿ ಕಡಿತಗೊಳಿಸಿದ್ದವು. ಆದ್ರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Ad Widget . Ad Widget . Ad Widget .

ಅಂದ್ಹಾಗೆ, ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್‌ಪಿಜಿ ಬೆಲೆಯನ್ನ ಬದಲಾಯಿಸುತ್ತವೆ.

ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.!
ಸರ್ಕಾರದ ಪ್ರಕಾರ, ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್ ಬೆಲೆ 200 ರೂಪಾಯಿಗಳಷ್ಟು ಅಗ್ಗವಾಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಅಡುಗೆ ಅನಿಲದ ಸಬ್ಸಿಡಿಯ ಲಾಭ ಸಿಗಲಿದೆ ಎಂದು ಕೇಂದ್ರ ಸರ್ಕಾರ ಕಳೆದ ವರ್ಷವೇ ಸ್ಪಷ್ಟಪಡಿಸಿತ್ತು. ಅಡುಗೆ ಅನಿಲ ಸಿಲಿಂಡರ್ ಮೇಲೆ ಬೇರೆ ಯಾರಿಗೂ ಸಬ್ಸಿಡಿ ನೀಡುವುದಿಲ್ಲ. ಉಜ್ವಲ ಯೋಜನೆಯಡಿ ಸರ್ಕಾರ ಈಗಾಗಲೇ 200 ರೂಪಾಯಿ ಸಬ್ಸಿಡಿ ನೀಡುತ್ತಿದ್ದು, ಈಗ ಹೆಚ್ಚುವರಿಯಾಗಿ 200 ರೂಪಾಯಿ ನೀಡುತ್ತಿದೆ.

Leave a Comment

Your email address will not be published. Required fields are marked *