Ad Widget .

ಶಾಸಕ, ಮಾಜಿ ಸಚಿವ, ಸಂಸದರಾಗಿರುವ ಬಿಜೆಪಿಗರು ನನಗೆ ರಕ್ಷಣೆ ನೀಡಬೇಕೆ? ಮೊದಲು ಮೋದಿ ಬಳಿ ಮಾತನಾಡಿ ಸೌಜನ್ಯಗೆ ನ್ಯಾಯ ಕೊಡಿಸಿ| ಬೆಳ್ತಂಗಡಿ ಚಲೋ ಧರಣಿಯಲ್ಲಿ ಬಿಜೆಪಿಗರ ಕಿವಿಹಿಂಡಿದ ವಸಂತ ಬಂಗೇರ

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕರಾದ ಪೂಂಜಾರವರು 5 ವರ್ಷ ಕಳೆದು 6 ನೇ ವರ್ಷಕ್ಕೆ ಶಾಸಕರಾಗಿ ಪಾದಾರ್ಪಣೆ ಗೊಂಡಿದ್ದೀರಿ ಇಲ್ಲಿಯವರೆಗೆ ಸೌಜನ್ಯ ನ ನ್ಯಾಯದ ಪರ ಒಂದು ಶಬ್ದ ಎತ್ತಲಿಲ್ಲ ನೀವು..ಬರೀ 40% ಕಮಿಷನ್ ನನ್ನು ಕೊಳ್ಳೆ ಹೊಡೆದಿದ್ದೀರಿ, ಇಡೀ ಕರ್ನಾಟಕದಲ್ಲಿ ಕೊಳ್ಳೆ ಹೊಡೆದ ಶಾಸಕರೆಂದರೆ ಹರೀಶ್ ಪೂಂಜಾ.

Ad Widget . Ad Widget .

ಇನ್ನು ಹದಿನೈದು ವರ್ಷದಿಂದ ಸಂಸದರಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಇದುವರೆಗೆ ಧ್ವನಿ ಎತ್ತದೇ ಆದಿತ್ಯವಾರ ಬಂದು ಬೊಬ್ಬೆ ಹಾಕುವ ಅನಿವಾರ್ಯತೆ ಏನಿತ್ತು? ಮಾಜಿ ಮಂತ್ರಿ ಹಾಗೂ ಶಾಸಕರಾಗಿರುವ ಸುನಿಲ್ ಕುಮಾರ್ ನನಗೆ ರಕ್ಷಣೆ ನೀಡಲು ಬರುತ್ತಿದ್ದಾರೆ. ನಿಮಗೆಲ್ಲ ನಾಚಿಕೆಯಾಗಲ್ವೇ?

Ad Widget . Ad Widget .

ನನಗೆ ರಕ್ಷಣೆ ಕೊಡಲು ಬರುವ ನೀವು ನಿಮಗೆ ಮೋದಿ ಹತ್ತಿರ ಮಾತನಾಡುವ ಶಕ್ತಿ ಇಲ್ಲವೇ? ಬನ್ನಿ ನಾನೇ ನಿಮ್ಮನ್ನು ಸಿಎಂ ಬಳಿ ಕರೆದುಕೊಂಡು ಹೋಗ್ತೇನೆ. ಮೆಲ್ಲಗೆ ಕಾಂಗ್ರೆಸ್ ಸೇರಿಕೊಳ್ಳಿ’ ಎಂದು ಮಾಜಿ ಶಾಸಕ ವಸಂತ ಬಂಗೇರ ಬಿಜೆಪಿಗರ ಕಿವಿಹಿಂಡಿದ್ದಾರೆ.

ಸೌಜನ್ಯ ಪರ ನ್ಯಾಯಕ್ಕಾಗಿ ಜನಪರ ಸಂಘಟನೆ ಒಕ್ಕೂಟ ಇದರ ವತಿಯಿಂದ ಆ.28 ರಂದು ಬೆಳ್ತಂಗಡಿ ತಾಲೂಕು ಕಛೇರಿ ಮುಂಭಾಗ ನಡೆದ ಬೆಳ್ತಂಗಡಿ ಚಲೋ ಮಹಾಧರಣಿಯಲ್ಲಿ ಅವರು ಮಾತನಾಡಿದರು.

ಬಿಜೆಪಿಯ ಪುಡಾರಿಗಳು ಮರ್ಯಾದೆ ಕೆಟ್ಟು ನನ್ನ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದುವರೆಗೆ ಇಲ್ಲದ ಕಾಳಜಿ ಈವಾಗ ಎಲ್ಲಿಂದ ಬಂತು. ನಿಮ್ಮದೇ ಸರ್ಕಾರವಿದ್ದಾಗ ಸರಿಯಾದ ರೀತಿಯಲ್ಲಿ ತನಿಖೆ ಮಾಡಲು ಬಿಡದೇ ಈಗ ಅರಚಾಡುವ ಪರಿಸ್ಥಿತಿ ಏಕೆ? ಈಗಲಾದರೂ ನ್ಯಾಯಯುತವಾಗಿ ಸೌಜನ್ಯಳ ಪರವಾಗಿ ಮಾತನಾಡಿ. ಕೇಂದ್ರಕ್ಕೆ ವಿಷಯವನ್ನು ತಿಳಿಸಿ ಎಂದು ಅವರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *