Ad Widget .

ತಂದೆಯ ಅಂತ್ಯಸಂಸ್ಕಾರಕ್ಕೂ ಬರದ ಮಕ್ಕಳು| ಹೆಣ ಬಿಸಾಕಿ ಎಂದ ಮಗಳು; ಪೊಲೀಸರಿಂದಲೇ ಅಂತಿಮ ವಿದಾಯ!!

ಸಮಗ್ರ ನ್ಯೂಸ್: ಪಾರ್ಶ್ವವಾಯು ರೋಗದಿಂದ ಮೃತರಾದ ಸ್ವಂತ ತಂದೆಯನ್ನು ವಿದೇಶದಲ್ಲಿರುವ ಮಕ್ಕಳು ಅನಾಥವಾಗಿ ಸಾಯುವಂತೆ ಮಾಡಿ ಅಂತ್ಯಸಂಸ್ಕಾರಕ್ಕೂ ಬಾರದ ಅಮಾನವೀಯ ಘಟನೆ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಮೂಲಚಂದ ಶರ್ಮಾ ( 72 ) ಮೃತ ತಂದೆ, ಪುಣೆ ಮೂಲದ ಮೂಲಚಂದ ಶರ್ಮಾ ಪಾರ್ಶ್ವವಾಯು ರೋಗ ಪೀಡಿತರಾಗಿದ್ದ ಕಾರಣ ಚಿಕಿತ್ಸೆಗಾಗಿ ಅಪರಿಚಿತರು ಒಂದುವರೆ ತಿಂಗಳ ಹಿಂದೆ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಲಾಡ್ಜ್​ಗೆ ತಂದು ಬಿಟ್ಟು ಹೋಗಿದ್ದಾರೆ.

Ad Widget . Ad Widget .

ಲಾಡ್ಜ್​ನಲ್ಲಿ ಒಬ್ಬರೇ ಇರುವುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಈ ವೇಳೆ ತಮ್ಮ ಹಿನ್ನೆಲೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಮೂಲಚಂದ ಶರ್ಮ, ನಾನು ಬಡವನಲ್ಲ ನನ್ನ ಮಕ್ಕಳಿಬ್ಬರು ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ, ಮಗ ಆಫ್ರಿಕಾದಲ್ಲಿದ್ದು ಮಗಳು ಕೆನಡಾದಲ್ಲಿದ್ದಾರೆ ನಾನು ಸಾರ್ವಜನಿಕ ಆಸ್ಪತ್ರೆಗೆ ಬರುವುದಿಲ್ಲ ಎಂದಿದ್ದಾರೆ.

ನೆನ್ನೆ ಲಾಡ್ಜ್​ನಲ್ಲಿದ್ದ ಮೂಲಾಚಂದ ಶರ್ಮ ಸಾವಿಗೀಡಾಗಿದ್ದು ವಿದೇಶದಲ್ಲಿರುವ ಮಕ್ಕಳಿಗೆ ವಿಚಾರ ತಿಳಿಸಲು ಪ್ರಯತ್ನಿಸಿದ ಪೊಲೀಸರು ಕೊನೆಗೂ ಕೆನಡಾದಲ್ಲಿರುವ ಮಗಳು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಈ ವೇಳೆ ತಂದೆ ಸಾವಿನ ಬಗ್ಗೆ ಮಗಳ ಪ್ರತಿಕ್ರಿಯೆ ಕೇಳಿ ಪೊಲೀಸರೇ ಆಘಾತಕ್ಕೊಳಗಾಗಿದ್ದಾರೆ.

ಅವರು ನಮ್ಮ ತಂದೆ ಅವಾಗ ಇದ್ದರು ಈಗ ಇಲ್ಲ, ನಿಮಗೆ ನಾವು ಚಿಕಿತ್ಸೆ ಕೊಡಿಸಿ ಎಂದು ಹೇಳಿಲ್ಲ, ಅಂತ್ಯಕ್ರಿಯೆ ಮಾಡೋಕೆ ಆದರೆ ಮಾಡಿ‌ ಇಲ್ಲ ಹೆಣ ಬಿಸಾಕಿ ಎಂದು ಮಗಳು ಪೋಲಿಸರಿಗೆ ಅವಾಜ್​ ಹಾಕಿದ್ದಾಳೆ.

ಬೇರೆ ದಾರಿ ಇಲ್ಲದೆ ಮೃತ‌ ಮೂಲಚಂದರ‌ ಶರ್ಮ ಮೃತದೇಹವನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಚಿಕ್ಕೋಡಿ ಪೊಲೀಸರು ಮತ್ತು ಅಧಿಕಾರಿಗಳು ನಂತರ‌ ನಾಗರಮುನ್ನೊಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವರಿಸಿದ್ದಾರೆ.

Leave a Comment

Your email address will not be published. Required fields are marked *