Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಆಗಸ್ಟ್ 27 ರಿಂದ ಸೆಪ್ಟೆಂಬರ್ 2ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Ad Widget . Ad Widget .

ಮೇಷ:
ವಿವಾಹದ ಬಗ್ಗೆ ಇದ್ದ ಗೊಂದಲ ನಿವಾರಣೆ ಆಗುವುದು. ನಿಮ್ಮ ಸಂಗಾತಿಯಿಂದ ಧನಲಾಭವಿದೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ದುಡುಕಿನಿಂದ ಖರ್ಚು ಹೆಚ್ಚಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ಅಡೆತಡೆ ಇರದು. ಹಣ ಕಾಸಿನ ವ್ಯವಹಾರದಲ್ಲಿ ಲಾಭವಿದೆ. ದೊರೆವ ಅವಕಾಶವನ್ನು ದುಡುಕುತನದಲ್ಲಿ ಕಳೆದುಕೊಳ್ಳದಿರಿ. ಆರೋಗ್ಯದ ಸಮಸ್ಯೆ ನಿವಾರಣೆ ಆಗುವುದು. ಅತಿಯಾದ ಆತ್ಮವಿಶ್ವಾಸ ಬೇಡ. ಕುಟುಂಬದ ಕೆಲಸದ ನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸುವಿರಿ.

Ad Widget . Ad Widget .

ವೃಷಭ:
ಯಾರ ಸಲಹೆಯನ್ನೂ ಒಪ್ಪುವುದಿಲ್ಲ. ಸಂಚಾರಕ್ಕೆ ಸಂಬಂಧಿಸಿದ ಉದ್ಯೋಗ ಅಥವಾ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಧನಲಾಭವಿರುತ್ತದೆ. ಮಕ್ಕಳ ಜೀವನದಲ್ಲಿ ವಿಶೇಷವಾದ ಘಟನೆಯೊಂದು ನಡೆಯಲಿದೆ. ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಬೇರೆಯವರ ಸಹಾಯ ಬೇಕಾಗುತ್ತದೆ. ಹೋಟೆಲ್ ವ್ಯಾಪಾರದಲ್ಲಿ ಲಾಭವಿದೆ. ಸಂಗಾತಿಯ ಆರೋಗ್ಯದಲ್ಲಿ ಏರಿಳಿತ ಉಂಟಾಗಬಹುದು. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಕಂಡುಬರುತ್ತದೆ. ವಿಶೇಷ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ. ತಂದೆಯವರಿಗೆ ಉದ್ಯೋಗದಲ್ಲಿ ಅನುಕೂಲಕರ ಸನ್ನಿವೇಶ ಇರುತ್ತದೆ.

ಮಿಥುನ:
ಸಂಗಾತಿಯ ಕಟ್ಟುನಿಟ್ಟಿನ ನಡೆನುಡಿ ಕುಟುಂಬದ ತೊಂದರೆ ದೂರಾಗುತ್ತದೆ. ಸೋದರಿಗೆ ಸ್ವಗೃಹ ಲಾಭವಿದೆ. ಮನದಲ್ಲಿರುವ ಆಸೆ ಆಕಾಂಕ್ಷೆಗಳು ಈಡೇರಲಿವೆ. ತೆಗೆದುಕೊಂಡ ನಿರ್ಧಾರಗಳನ್ನು ಬದಲಿಸದಿರಿ. ಹಣಕಾಸಿನ ನಿರ್ವಹಣೆಯಲ್ಲಿ ತಪ್ಪು ಲೆಕ್ಕಾಚಾರ ಆಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಅಧಿಕಾರಿಗಳಿಗೆ ಕೆಲಸದ ಬಗ್ಗೆ ಪ್ರಶಂಸೆ ದೊರೆಯುತ್ತದೆ. ವ್ಯವಸಾಯದ ಸಹ ಉತ್ಪನ್ನಗಳ ಮಾರಾಟದಲ್ಲಿ ಲಾಭವಿರುತ್ತದೆ. ಜನಸಾಮಾನ್ಯರಿಗೆ ಸಹಾಯವಾಗುವ ಕೆಲಸವನ್ನು ಆರಂಭಿಸುವಿರಿ.

ಕಟಕ:
ಶಾಂತಿ ಸಂಯಮದಿಂದ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಿ. ನಿಮಗೆ ಆತ್ಮೀಯರ ಸಹಾಯ ಸಹಕಾರ ಸದಾ ದೊರೆಯುತ್ತದೆ. ಮಹಿಳಾ ಉದ್ಯಮಿಗಳು ಸರ್ಕಾರದಿಂದ ಸಂಪೂರ್ಣ ಸವಲತ್ತನ್ನು ಪಡೆಯುತ್ತಾರೆ. ಅಡುಗೆ ಮನೆಗೆ ಬೇಕಾದ ಪರಿಕರಗಳ ವ್ಯಾಪಾರದಲ್ಲಿ ಲಾಭವಿದೆ. ಮಾಡಿಲ್ಲದ ತಪ್ಪನ್ನು ಒಪ್ಪಬೇಕಾದ ಪರಿಸ್ಥಿತಿ ಎದುರಾಗುತ್ತದೆ. ವಿಧ್ಯಾರ್ಥಿಗಳು ಮನರಂಜನೆಯನ್ನು ಮರೆತಲ್ಲಿ ಉನ್ನತ ಸ್ಥಾನ ಗಳಿಸಬಹುದು. ಆರೋಗ್ಯದ ಸಮಸ್ಯೆಗೆ ಪರಿಹಾರ ದೊರೆಯುವುದು. ಮಹಿಳೆಯರಿಗೆ ಉದ್ಯೋಗದಲ್ಲಿ ಮಹತ್ತರ ಅವಕಾಶ ದೊರೆಯುತ್ತದೆ.

ಸಿಂಹ:
ಒಳ್ಳೆಯತನ ದುಡುಕಿನ ಮಾತಿನಿಂದ ಮರೆಯಾಗಿ ಹೋಗುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ವರ್ತಿಸಿದಲ್ಲಿ ಯಾವುದೇ ತೊಂದರೆಬಾರದು. ಸರ್ಕಾರಿ ನೌಕರರಿಗೆ ಶುಭಸುದ್ದಿಯೊಂದು ದೊರೆಯಲಿದೆ. ಬಹುರಾಷ್ಟ್ರೀಯ ಕಂಪನಿಯಲ್ಲಿನ ನೌಕರರಿಗೆ ಅಧಿಕಾರಿಯಾಗಿ ಬಡ್ತಿ ದೊರೆಯುತ್ತದೆ. ಸ್ವಗೃಹ ಭೂಲಾಭವಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುಂದುವರಿಯುವರು. ಸ್ವಂತ ವ್ಯಾಪಾರ ನಡೆಸಲು ಸರ್ಕಾರದ ಸಹಾಯ ದೊರೆಯುತ್ತದೆ. ಸೇವಾನಿರತ ವೃತ್ತಿಯಲ್ಲಿ ಹಣದ ಜೊತೆಯಲ್ಲಿಯೇ ಕೀರ್ತಿ ಪ್ರತಿಷ್ಟೆಯೂ ದೊರೆಯುತ್ತದೆ. ತಂದೆಗೆ ಸಂಬಂಧಿಸಿದ ಆಸ್ತಿಯಲ್ಲಿ ನಿಮಗೆ ಸಿಂಹಪಾಲು ಲಭಿಸುತ್ತದೆ.

ಕನ್ಯಾ:
ಸರಿಯಾದ ಮುಂದಾಲೋಚನೆಯಿಂದ ಕೆಲಸ ಕಾರ್ಯಗಳನ್ನು ಆರಂಭಿಸಿ. ಅನಾವಶ್ಯಕವಾಗಿ ಯೋಚನೆ ಮಾಡದಿರಿ. ವಾದ ವಿವಾದ ಕಡಿಮೆ ಮಾಡಿ. ತಾಯಿಯವರಿಂದ ಹಣದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಯಾವುದೇ ಅಡಚಣೆಗಳು ಇರುವುದಿಲ್ಲ. ಉದ್ಯೋಗ ಬದಲಿಸುವ ಯೋಚನೆ ಕೈಬಿಡಿ. ವ್ಯಾಪಾರದಲ್ಲಿ ಲಾಭವೂ ಇಲ್ಲ ನಷ್ಟವೂ ಇಲ್ಲ. ವಿದ್ಯಾರ್ಥಿಗಳು ಚಂಚಲತೆಯಿಂದ ಹೊರಬರಬೇಕು. ಯಾರನ್ನೂ ದೂಷಿಸಬೇಡಿ. ಭೂ ವ್ಯವಹಾರದಲ್ಲಿ ಧನಲಾಭ ಇರುತ್ತದೆ. ದೈಹಿಕವ್ಯಾಯಾಮದ ಅವಶ್ಯಕತೆಯಿದೆ.

ತುಲಾ:
ಸರಿ ತಪ್ಪನ್ನು ಅರಿಯಬಲ್ಲ ಶಕ್ತಿ ಇರುವ ಕಾರಣ ಯಾವುದೇ ತೊಂದರೆ ಬಾರದು. ಪಾಲುಗಾರಿಕೆ ವ್ಯಾಪಾರವಿದ್ದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ಬೃಹತ್ ಮಟ್ಟದ ವಾಣಿಜ್ಯ ಸಂಸ್ಥೆಯನ್ನು ಆರಂಭಿಸುವ ಆಸೆ ಈಡೇರಲಿದೆ. ಉದ್ಯೋಗದಲ್ಲಿನ ಅಡ್ಡಿ ಆತಂಕಗಳು ದೂರವಾಗಿ ಉನ್ನತ ಮಟ್ಟ ತಲುಪುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಕುಟುಂಬದಲ್ಲಿ ಪ್ರೀತಿ ವಿಶ್ವಾಸಕ್ಕೆ ಕೊರತೆ ಇರದು. ನೀರಾವರಿ ಭೂಮಿ ಇದ್ದಲ್ಲಿ ತೋಟಗಾರಿಕೆ ಆರಂಭಿಸುವ ಸಾಧ್ಯತೆಗಳಿವೆ.

ವೃಶ್ಚಿಕ:
ಕಲುಷಿತ ದ್ರವ ಆಹಾರವನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಎಲ್ಲರ ಜೊತೆ ಪ್ರೀತಿಯಿಂದ ವರ್ತಿಸಿದಲ್ಲಿ ನೆಮ್ಮದಿಯ ಜೀವನ ನಡೆಸಬಹುದು. ಪರಿಪಕ್ವ ಯೋಜನೆ ಯೋಚನೆಯಿಂದ ಉದ್ಯೋಗದಲ್ಲಿ ಸಮಸ್ಯೆಗಳು ದೂರಾಗುತ್ತವೆ. ವಂಶದ ಹಿರಿಯರು ಮಾಡುತ್ತಿದ್ದ ವ್ಯಾಪಾರ ವಹಿವಾಟಿನಿಂದ ಹೇರಳ ಲಾಭ ಗಳಿಸುವಿರಿ. ಮಕ್ಕಳ ಸಲಹೆ ಸೂಚನೆಗಳನ್ನು ಪಾಲಿಸಿದಲ್ಲಿ ಯಾವುದೆ ತೊಂದರೆ ಬಾರದು. ವಿದ್ಯಾರ್ಥಿಗಳು ಪರಸ್ಥಳದಲ್ಲಿ ವಿದ್ಯಾಭ್ಯಾಸ್ಸವನ್ನು ಮುಂದುವರೆಸುತ್ತಾರೆ.

ಧನಸ್ಸು:
ಗೆಲ್ಲಲೇ ಬೇಕೆಂಬ ಹಟದಿಂದ ಜೀವನದಲ್ಲಿ ಮುಂದುವರಿಯುವಿರಿ. ಉದ್ಯೋಗದಲ್ಲಿ ಯಾವುದೆ ತೊಂದರೆ ಬಾರದು. ದುಡುಕುತನದಿಂದ ಯಾರನ್ನೂ ನಿಂದಿಸದಿರಿ. ಕುಟುಂಬದ ಒಳಗೂ ಹೊರಗೂ ನಿಮ್ಮ ಮಾತಿಗೆ ಗೌರವವಿರುತ್ತದೆ. ಹಣದ ಕೊರತೆಯನ್ನು ಕಡಿಮೆ ಮಾಡಲು ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಕುಟುಂಬದ ಹಿರಿಯರ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸದಿರಿ. ವಿರೋಧಿಯೊಬ್ಬರು ಸ್ನೇಹವನ್ನು ಬಯಸಿಬರುತ್ತಾರೆ. ತಾಳ್ಮೆಯಿಂದ ವರ್ತಿಸಿ.

ಮಕರ:
ಯಾರ ಮಾತಿಗೂ ಮನಸ್ಸು ಕೆಡಿಸಿಕೊಳ್ಳದೆ ಜೀವನದಲ್ಲಿ ಮುಂದುವರಿಯುವಿರಿ. ಕ್ರಿಯಾಶೀಲ ವ್ಯಕ್ತಿತ್ವ ಕೈಹಿಡಿದ ಕಾರ್ಯಗಳಲ್ಲಿ ಜಯಗಳಿಸಲು ಕಾರಣವಾಗುತ್ತದೆ. ಸಾಧ್ಯವಾದಷ್ಟೂ ತ್ವರಿತಗತಿಯಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಉನ್ನತ ಅಧ್ಯಯನ ಮಾಡಿದವರಿಗೆ ಉದ್ಯೋಗವು ಲಭಿಸುತ್ತದೆ. ವಿದ್ಯಾರ್ಥಿಗಳು ಸ್ಥಿರವಾದ ಮನಸ್ಸಿನಿಂದ ಓದಿನಲ್ಲಿ ಮಗ್ನರಾದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಲೋಹ ಸಂಬಂಧಿತ ವ್ಯಾಪಾರದಲ್ಲಿ ಲಾಭವಿರುತ್ತದೆ. ಷೇರಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಸಗಟು ವ್ಯಾಪಾರದಲ್ಲಿ ಲಾಭವಿದೆ.

ಕುಂಭ:
ಮನಸಿನಲ್ಲಿ ವಿಚಾರವನ್ನು ಅರಿಯಲು ಯಾರಿಂದಲೂ ಸಾಧ್ಯವಾಗದು. ಕೆಲಸ ಕಾರ್ಯಗಳನ್ನು ಹಠದಿಂದಾಗಿ ಸಂಪೂರ್ಣಗೊಳಿಸುವಿರಿ. ಕುಟುಂಬದಲ್ಲಿ ಶುಭ ಕಾರ್ಯವೊಂದು ಜರುಗಲಿದೆ. ವೃತ್ತಿ ಬದಲಾಯಿಸುವಿರಿ. ವ್ಯಾಪಾರದಲ್ಲಿ ತೊಂದರೆ ಬಾರದು. ನಿರುದ್ಯೋಗಿಗಳಿಗೆ ನೂತನ ಅವಕಾಶವೊಂದು ದೊರೆಯಲಿದೆ. ಸಮಾಜದ ನಾಯಕತ್ವ ಲಭಿಸುತ್ತದೆ. ಹೊಸತಾದ ವ್ಯಾಪಾರ ಆರಂಭಿಸಲು ಇದು ಸಕಾಲವಲ್ಲ. ಮಾರಾಟ ಪ್ರತಿನಿಧಿಗಳಿಗೆ ವಿಶೇಷ ಲಾಭದೊರೆಯುತ್ತದೆ. ಸೋದರ ಅಥವ ಸೋದರಿಯ ಜೊತೆಯಲ್ಲಿ ವಾದ ವಿವಾದಗಳು ಇರುತ್ತವೆ.

ಮೀನ:
ದೊರೆಯುವ ಅವಕಾಶವನ್ನು ತಿರಸ್ಕರಿಸದಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಪದೇ ಪದೇ ಬದಲಾಯಿಸದಿರಿ. ಗಣ್ಯವ್ಯಕ್ತಿಗಳ ಸಹಾಯ ಸಹಕಾರ ದೊರೆಯುತ್ತದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿ ಮುಕ್ತ ಅವಕಾಶ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಆಡುವ ಮಾತಿಗೆ ಸಮಾಜದಲ್ಲಿ ವಿಶೇಷವಾದ ಗೌರವ ಲಭಿಸುತ್ತದೆ. ಸಂಗೀತ ನಾಟ್ಯದ ತರಬೇತಿ ನೀಡುವವರಿಗೆ ರಾಜ್ಯಮಟ್ಟದ ಗೌರವ ಲಭಿಸಲಿದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಸದಾ ಮುಂದಿರುತ್ತಾರೆ.

Leave a Comment

Your email address will not be published. Required fields are marked *