Ad Widget .

ಧರ್ಮಸ್ಥಳ: ಕುಸುಮಾವತಿಯವರಿಗಾಗಿ ನಾವು ಅಣ್ಣಪ್ಪ ಬೆಟ್ಟದಲ್ಲಿ ಕಾಯುತ್ತಿರುತ್ತೇವೆ| ಉದಯ್ ಜೈನ್, ಮಲ್ಲಿಕ್ ಜೈನ್, ಧೀರಜ್ ಕೆಲ್ಲ ವಾಟ್ಸಪ್ ಸಂದೇಶ ವೈರಲ್

ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ಮಣ್ಣಸಂಕ ಎಂಬಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ವಿದ್ಯಾರ್ಥಿನಿ ಸೌಜನ್ಯ ಮರು ತನಿಖೆಗೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ನಡೆಯುತ್ತಿದೆ. ಅದೀಗ ರಾಜ್ಯದ ಎಲ್ಲೆಯನ್ನು ದಾಟಿ ಮುನ್ನುಗುತ್ತಿದೆ. ಕಳೆದ 3- 4 ದಿನಗಳಿಂದ ಈ ಹೋರಾಟ ವೇಗವನ್ನು ಹೆಚ್ಚಿಸಿಕೊಂಡಿದ್ದು ಮುಂದಿನ ಒಂದು ವಾರಗಳ ಕಾಲ ಬೆಳ್ತಂಗಡಿಯನ್ನು ಕೇಂದ್ರಿಕರಿಸಿ ಹಲವು ಹೋರಾಟಗಳು ನಡೆಯುತ್ತಿವೆ.

Ad Widget . Ad Widget .

ಆ 27 ರಂದು ವಿಶ್ವ ಹಿಂದೂ ಪರಿಷತ್, ಭಜರಂಗದಳ ಧರ್ಮಸ್ಥಳಕ್ಕೆ ಪಾದಯಾತ್ರೆಯೊಂದನ್ನು ಆಯೋಜಿಸಿದೆ. ಇದರಲ್ಲಿ ಸೌಜನ್ಯ ತಾಯಿ ಕುಸುಮಾವತಿ ಭಾಗವಹಿಸಲಿದ್ದು, ಎರಡು ದಿನದ ಹಿಂದೆ ಧರ್ಮಸ್ಥಳದ ಗ್ರಾಮಸ್ಥರ ಗುಂಪುಂದು ಸಭೆ ನಡೆಸಿತ್ತು. ಅದರಲ್ಲಿ ಕುಸುಮಾವತಿಯವರು ಧರ್ಮಸ್ಥಳಕ್ಕೆ ಆಗಲಿ ಅಣ್ಣಪ್ಪ ಬೆಟ್ಟಕ್ಕೆ ಆಗಲಿ ಬರಲೇಬಾರದು ಎಂದು ಆಗ್ರಹ ವ್ಯಕ್ತವಾಗಿತ್ತು.

Ad Widget . Ad Widget .

ಇದಾದ ಬಳಿಕ ಸಭೆಯೊಂದರಲ್ಲಿ ಮಾತನಾಡಿದ ಕುಸುಮಾವತಿ ಗೌಡರವರು ನಾನು ಧರ್ಮಸ್ಥಳಕ್ಕೆ ಹೋಗಿಯೇ ಸಿದ್ದ ಎಂದು ಸವಾಲು ಹಾಕಿದ್ದರು. ಸವಾಲು ಹಾಗೂ ಪ್ರತಿ ಸವಾಲಿನ ಆಖಾಡವಾದ ಕುಸುಮಾವತಿ ಧರ್ಮಸ್ಥಳ ಭೇಟಿಯಲ್ಲಿ ಈಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.

ಸೌಜನ್ಯಳ ತಾಯಿ ಕುಸುಮಾವತಿ ಗೌಡರವರು ಈ ಹಿಂದಿನಿಂದಲೂ ನಿರಂತರವಾಗಿ ಆರೋಪ ಮಾಡುತ್ತಿರುವ ಮೂವರು ಯುವಕರಾದ ಧೀರಜ್‌ ಕೆಲ್ಲ, ಮಲ್ಲಿಕ್ ಜೈನ್, ಉದಯ್ ರವರು ನಾವು ಪ್ರಮಾಣಕ್ಕೆ ಸಿದ್ಧ. ನಾಳೆ ನಿಮಗಾಗಿ ಕಾಯುತ್ತಿರುತ್ತೇವೆ ಎಂಬ ಒಕ್ಕಣೆಯುಳ್ಳ ಸಂದೇಶವನ್ನು ಹರಿ ಬಿಟ್ಟಿದ್ದಾರೆ.

ನಾಳೆ ಅಣ್ಣಪ್ಪ ಸ್ವಾಮಿಯ ಬೆಟ್ಟದ ಸಮೀಪ ಕಾಯುತ್ತಿರುತ್ತೇವೆ, ನಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಪ್ರಮಾಣ ಮಾಡಲು ಸಿದ್ಧ ಎಂಬ ಈ ಮೂವರು ಕಳುಹಿಸಿದ್ದಾರೆ ಎನ್ನಲಾದ ವಾಟ್ಸಾಪ್ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

ಈ ವಾಟ್ಸಾಪ್‌ ಸಂದೇಶ ಕಳುಹಿಸಿದನ್ನು ಮಲ್ಲಿಕ್ ಜೈನ್ ರವರು ಖಚಿತ ಪಡಿಸಿರುವುದಾಗಿ ಸ್ಥಳೀಯ ಮಾದ್ಯಮವೊಂದು ಖಚಿತಪಡಿಸಿದೆ. “ಹೌದು ನಾವು ಪ್ರಮಾಣಕ್ಕೆ ಸಿದ್ಧರಿದ್ದೇವೆ. ಅದಕ್ಕಾಗಿ ಮೆಸೆಜ್ ಹಾಕಿದ್ದೇವೆ. ಕುಸುಮಾವತಿಯವರು ದಯವಿಟ್ಟು ಬರಬೇಕು. ನಾವು ಪ್ರಮಾಣ ಮಾಡುತ್ತೇವೆ. ಅವರೂ ಪ್ರಮಾಣ ಮಾಡಲಿ ಅನ್ನುವ ಕಾರಣಕ್ಕೆ ಸಂದೇಶ ರವಾನಿಸಿದ್ದೇವೆಂದು ಮಲ್ಲಿಕಾ ಜೈನ್‌ ತಿಳಿಸಿರುವುದಾಗಿ ಆ ಮಾದ್ಯಮ ಸಂಸ್ಥೆ ತನ್ನ ವೆಬ್‌ ಪೋರ್ಟಲ್‌ ನಲ್ಲಿ ಬರೆದು ಕೊಂಡಿದೆ.

ಆ 26 ರ ಸಂಜೆಯ ಬಳಿಕದ ಈ ಬೆಳವಣಿಗೆ ನಾಳೆಯ ಪಾದಯಾತ್ರೆಯ ಬಗ್ಗೆ ಭಾರೀ ಕುತೂಹಲ ಸೃಷ್ಟಿಸಿದೆ. ಇದರಿಂದಾಗಿ ಧರ್ಮಸ್ಥಳ ಅಸುಪಾಸಿನಲ್ಲಿ ಅಹಿತಕರ ಘಟನೆ ನಡೆಯಬಹುದು ಎಂಬ ಆತಂಕವು ಸ್ಥಳೀಯರಲ್ಲಿದೆ. ಪೊಲೀಸ್‌ ಇಲಾಖೆ ಆ ಭಾಗದಲ್ಲಿ ಬಿಗು ಪೊಲೀಸ್‌ ಬಂದೋಬಸ್ತು ಕೈಗೊಳ್ಳುವ ನಿರೀಕ್ಷೆಯಿದೆ

ವೈರಲ್‌ ಪೋಸ್ಟ್‌ ನಲ್ಲಿ ಏನಿದೆ ?
ಸೌಜನ್ಯ ತಾಯಿ ಕುಸುಮಾವತಿಯವರಿಗೊಂದು ಸುವರ್ಣವಕಾಶ.
ನಾಳೆ ದಿನಾಂಕ 27.08.2023ರ ಭಾನುವಾರದಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಪಾದಯಾತ್ರೆಯೊಂದನ್ನು ಆಯೋಜಿಸಿದ್ದು, ತಾವು ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ತಿಳಿದುಬಂದಿರುತ್ತದೆ.
ಪ್ರಕರಣ ನಡೆದು ಸುಮಾರು ಒಂದು ವರ್ಷಗಳ ನಂತರ ನಮ್ಮ ಮೂರು ಜನರ ಹೆಸರನ್ನು ಉಲ್ಲೇಖಿಸಿ ಆರೋಪಗಳನ್ನು ಮಾಡಿರುತ್ತೀರಿ. ವಿವಿಧ ತನಿಖೆಗಳ ನಂತರ ನಾವು ನಿರಪರಾಧಿಗಳೆಂದು ನ್ಯಾಯಾಲಯ ತೀರ್ಪು ಕೊಟ್ಟ ನಂತರವೂ ನಮ್ಮ ಬಗ್ಗೆ ರಾಜ್ಯಾದ್ಯಂತ ಆರೋಪಗಳನ್ನು ಮಾಡುತ್ತಾ ತಿರುಗುತ್ತಿರುವಿರಿ.
ನಾಳೆ ನಿಮಗೊಂದು ಸುವರ್ಣ ಅವಕಾಶ. ಬಹುಷಃ ಅಣ್ಣಪ್ಪ ಸ್ವಾಮಿಯ ಇಚ್ಛೆಯೇ ಇದಾಗಿರಬಹುದು. ನಾವು ಮೂರು ಜನ ಅಣ್ಣಪ್ಪ ಸ್ವಾಮಿಯ ಮುಂದೆ ನಮ್ಮ ನಿರಪರಾಧಿತನವನ್ನು ಹೇಳಿಕೊಳ್ಳುತ್ತೇವೆ.
ನೀವು ಭಾಷಣಗಳಲ್ಲಿ ನಮ್ಮನ್ನು ಆರೋಪಿಸಿದ ರೀತಿಯಲ್ಲಿ ಅಣ್ಣಪ್ಪನ ಮುಂದೆ ಪ್ರಮಾಣ ಮಾಡಿ. ನ್ಯಾಯ ತೀರ್ಮಾನ ಅಣ್ಣಪ್ಪನ ಮೆಟ್ಟಿಲಲ್ಲಿಯೇ ಆಗಲಿ. ಈ ಅವಕಾಶ ಸೃಷ್ಟಿಸಿದ ವಿಶ್ವಹಿಂದೂ ಪರಿಷತ್, ಬಜರಂಗದಳಕ್ಕೆ ಧನ್ಯವಾದಗಳು.

ಧೀರಜ್ ಕೆಲ್ಲ, ಮಲಿಕ್ ಜೈನ್,ಉದಯ್ ಜೈನ್‌

Leave a Comment

Your email address will not be published. Required fields are marked *