Ad Widget .

ಸಣ್ಣ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡಲ್ಲ – ಕೆ.ಎಚ್ ಮುನಿಯಪ್ಪ

ಸಮಗ್ರ ನ್ಯೂಸ್: ಸಣ್ಣ ಕಾರು ಹೊಂದಿರುವವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುವ ಪ್ರಸ್ತಾಪ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ.

Ad Widget . Ad Widget .

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಪಿಎಲ್‌ ಕಾರ್ಡ್‌ ಹೊಂದಿರುವವರಲ್ಲೂ ಕೆಲವರು ಸಣ್ಣ ಕಾರು ಇಟ್ಟುಕೊಂಡಿರುತ್ತಾರೆ. ಇದು ನಮ್ಮ ಗಮನಕ್ಕೂ ಬಂದಿದೆ. ಕಾರು ಇಟ್ಟುಕೊಂಡವರ ಕುಟುಂಬದ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಬೇಕೇ, ಬೇಡವೇ ಎಂಬ ಕುರಿತು ಚರ್ಚೆ ನಡೆಯುತ್ತಿದೆಯಷ್ಟೆ. ಸದ್ಯಕ್ಕೆ ಕಾರು ಇಲ್ಲದವರ ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲ್ಲ.

Ad Widget . Ad Widget .

ಕಾರು ಇದ್ದೂ ಅರ್ಹತೆ ಇದ್ದರೆ ಬಿಪಿಎಲ್‌ ಕಾರ್ಡ್‌ ನೀಡುವ ಕುರಿತು ಪರಿಶೀಲಿಸಲಾಗುವುದು. ಈವರೆಗೆ ನಾವು ಯಾರ ಬಿಪಿಎಲ್‌ ಕಾರ್ಡ್‌ ಅನ್ನೂ ರದ್ದು ಮಾಡಿಲ್ಲ. ಕೆಲವರ ಕಾರ್ಡ್‌ ರದ್ದು ಮಾಡಬೇಕೆಂಬುದು ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವಷ್ಟೆ ಎಂದು ಸ್ಪಷ್ಟಪಡಿಸಿದರು. ಯಾರು ಬಿಪಿಎಲ್‌, ಯಾರು ಎಪಿಎಲ್‌ ಅಡಿ ಬರುತ್ತಾರೆ ಎಂಬುದನ್ನು ನೋಡಿಕೊಂಡು ಅವರಿಗೆ ಸೂಕ್ತ ಕಾರ್ಡ್‌ ನೀಡಲಾಗುವುದು. ಪರಿಷ್ಕರಣೆ ನಂತರವಷ್ಟೇ ನಾವು ಸ್ಪಷ್ಟತೀರ್ಮಾನಕ್ಕೆ ಬರುತ್ತೇವೆ. ಯಾರಿಗೆ ಅರ್ಹತೆ ಇದೆಯೋ ಅವರಿಗೆ ತೊಂದರೆ ಆಗಲ್ಲ. ಸದ್ಯಕ್ಕೆ ಯಾವುದೇ ಕಾರ್ಡ್‌ ರದ್ದು ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.

Leave a Comment

Your email address will not be published. Required fields are marked *