Ad Widget .

ಹೆತ್ತ ತಂದೆಯಿಂದಲೇ ಮಗಳ ಕೊಲೆ| ಪರಜಾತಿಯವನ ಪ್ರೀತಿಸಿದ ತಪ್ಪಿಗೆ ಮರ್ಯಾದಾ ಹತ್ಯೆ

ಸಮಗ್ರ ನ್ಯೂಸ್: ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಯುವತಿಯನ್ನು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

Ad Widget . Ad Widget .

ಕೋಲಾರ ಜಿಲ್ಲೆಯ ತೊಟ್ಲಿ ಗ್ರಾಮದಲ್ಲಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ರಮ್ಯಾ (19) ಎಂಬ ಯುವತಿಯನ್ನು ತಂದೆಯೇ ಹತ್ಯೆ ಮಾಡಿ ಆಗಸ್ಟ್ 25 ರಂದು ಅಂತ್ಯಸಂಸ್ಕಾರ ಮಾಡಿದ್ದರು.

Ad Widget . Ad Widget .

ಬಳಿಕ ಗ್ರಾಮದಲ್ಲಿ ಕೊಲೆ ಮಾಡಿರುವ ಬಗ್ಗೆ ಗುಸು ಗುಸು ಶುರುವಾಗಿದೆ. ಹೀಗಾಗಿ ಯುವತಿ ತಂದೆ ವೆಂಕಟೇಶ್ ಗೌಡ ವಿಚಾರಣೆ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ.

ಪ್ರಕರಣ ಸಂಬಂಧ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಇಂದು ಬೆಳಗ್ಗೆ ಯುವತಿ ಶವ ಹೊರ ತೆಗೆದು ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *