ಸಮಗ್ರ ನ್ಯೂಸ್: ಕೋಟ್ಯಂತರ ಭಾರತೀಯರ ಹರಕೆ ಹಾರೈಕೆಯೊಂದಿಗೆ ಬಾಹ್ಯಾಕಾಶ ಲೋಕದಲ್ಲಿ ಹೊಸ ಚರಿತ್ರೆ ಸೃಷ್ಠಿಸಿದೆ ಭಾರತ. ಚಂದ್ರನ ಮೇಲೆ ಯಶಸ್ವಿಯಾಗಿ ಚಂದ್ರಯಾನ 3 ನೌಕೆ ಇಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಚಂದ್ರಯಾನ-3 ಯಶಸ್ಸು ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಇಸ್ರೋಗೆ ಶುಭಾಶಯ ಹರಿದು ಬರುತ್ತಿದೆ.
ಚಂದ್ರಯಾನ-3 ಯಶಸ್ಸು ಬಳಿಕ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಮಾಡಿದ ಟ್ವೀಟ್ ಸದ್ಯಕ್ಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬೈಕ್ ವೀಲಿಂಗ್ ಮಾಡುತ್ತಿದ್ದ ಪುಂಡರನ್ನು ಹಿಡಿದು ಕೆಜಿಎಫ್ ಸಿನಿಮಾ ಡೈಲಾಗ್ ನಂತೆ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್ನಲ್ಲಿ ಪುಂಡರ ಬೈಕ್ ವೀಲಿಂಗ್ ವಿಡಿಯೋ ಹಂಚಿಕೊಂಡಿರುವ ಹು-ಧಾ ನಗರ ಪೊಲೀಸರು ಎರಡು ಸಾಲುಗಳನ್ನು ಬರೆದಿದ್ದಾರೆ.
ಹು-ಧಾ ನಗರ ಪೊಲೀಸರ ಟ್ವೀಟ್
August 23- ಆವತ್ತು ಎರಡು ಘಟನೆಗಳು ನಡೆದವು:
1.’ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು.
2.ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು.
ಈ ಟ್ವೀಟ್ ಗಮನಿಸಿದ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಾಜ್ ಜೋಗಿ ಎಂಬವರು ಪೊಲೀಸ್ ಆಗೋ ಮುಂಚೆ ಅಡ್ಮಿನ್ ಟ್ರೊಲ್ ಪೇಜ್ ಅಡ್ಮಿನ್ ಆಗಿದ್ದರು ಕಾಣುತ್ತೆ ಎಂದು ಹೇಳಿದ್ದಾರೆ. ವೀರೇಶ್ ಜಿ. ಎಂಬವರು ಈಗ ಈಗ ಹುಬ್ಬಳ್ಳಿ ಧಾರವಾಡ ಪೊಲೀಸರು ಗಿಚ್ಚಿ ಡೈಲಾಗ್ ಬರ್ಯಾಕತಾರ್ ಎಂದು ಬರೆದು ನಗುವಿನ ಎಮೋಜಿ ಹಾಕಿಕೊಂಡಿದ್ದಾರೆ.
ಒಂದು ಕಡೆ ನಮ್ಮ ವಿಜ್ಞಾನಿಗಳು ಲಾಯಂಡರ ಚಂದ್ರನ ಮೇಲೆ ಇಳಿಸುವದ ರಲ್ಲಿ ನಿರತರಾಗಿದ್ದಾರೆ ಇನೊಂದು ಕಡೆ ನಮ್ಮ ಪೊಲೀಸರು ವಾಹನಗಳನ್ನು ಮನಸ್ಸೊ ಇಚ್ಛೆ ಉಪಟಳ ಮಾಡುವವರಿಗೆ ಸರಿಯಾಗಿ ಕೆಳಗೆ ಇರಿಸುತ್ತಿದಾರೆ ನೀವು ನಿಮ್ಮ ಕೆಲಸ ಮಾಡಿ ಜನ ಮೆಚ್ಚುಗೆ ಪಡೆಯಿರಿ ಎಂದು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.