Ad Widget .

ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ಇನ್ನಿಲ್ಲ| ಕ್ಯಾನ್ಸರ್ ಗೆ ಬಲಿಯಾದ ಜಿಂಬಾಬ್ವೆ ಲೆಜೆಂಡ್

ಸಮಗ್ರ ನ್ಯೂಸ್: ಬಾಂಗ್ಲಾದೇಶದ ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿದ್ದ ಝಿಂಬಾಬ್ವೆಯ ಲೆಜೆಂಡರಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ಕ್ಯಾನ್ಸರ್ ವಿರುದ್ಧ ದೀರ್ಘಕಾಲದ ಹೋರಾಟದ ನಂತರ 49 ನೇ ವಯಸ್ಸಿನಲ್ಲಿ ನಿಧನರಾದರು.

Ad Widget . Ad Widget .

65 ಟೆಸ್ಟ್ ಗಳು ಹಾಗೂ 189 ಏಕದಿನ ಪಂದ್ಯಗಳಲ್ಲಿ ಝಿಂಬಾಬ್ವೆಯನ್ನು ಪ್ರತಿನಿಧಿಸುವ ಮೂಲಕ 4,933 ರನ್ ಗಳನ್ನು ಗಳಿಸಿ , 455 ವಿಕೆಟ್ ಗಳನ್ನು ಕಬಳಿಸಿದ್ದ ಸ್ಟ್ರೀಕ್ ಖ್ಯಾತ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು. ಸ್ಟ್ರೀಕ್ ಟೆಸ್ಟ್ ನಲ್ಲಿ 1,000 ರನ್ ಹಾಗೂ 100 ವಿಕೆಟ್ ಗಳ ಡಬಲ್ ಸಾಧನೆ ಮಾಡಿರುವ ಹಾಗೂ ಏಕದಿನ ಪಂದ್ಯಗಳಲ್ಲಿ 2,000 ರನ್ ಹಾಗೂ 200 ವಿಕೆಟ್ ಗಳನ್ನು ಪಡೆದಿರುವ ಝಿಂಬಾಬ್ವೆಯ ಏಕೈಕ ಆಟಗಾರನೆಂಬ ದಾಖಲೆಯನ್ನು ಈಗಲೂ ಉಳಿಸಿಕೊಂಡಿದ್ದಾರೆ.

Ad Widget . Ad Widget .

ಸ್ಟ್ರೀಕ್ ಅವರ ಹಲವಾರು ದಾಖಲೆಗಳು ಝಿಂಬಾಬ್ವೆಯಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿ ಉಳಿದಿದೆ.

ಮೇ ತಿಂಗಳಲ್ಲಿ ಸ್ಟ್ರೀಕ್ ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ. ಆಗ ಅವರ ಕುಟುಂಬವು ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿತ್ತು.

ಸ್ಟ್ರೀಕ್ ಅವರ ನಿಧನಕ್ಕೆ ಝಿಂಬಾಬ್ವೆ ಕ್ರಿಕೆಟಿಗರಾದ ಎನ್ರಿ ಓಲಾಂಗ, ಸೀನ್ ವಿಲಿಯಮ್ಸ್ ಅವರು ಸಂತಾಪ ಸೂಚಿಸಿದ್ದಾರೆ. ಅವರ ಅಭಿಮಾನಿಗಳು ಸೇರಿದಂತೆ ವಿವಿಧ ದೇಶಗಳ ಕ್ರಿಕೆಟಿಗರು ಕೂಡ ಕಂಬನಿ ಮಿಡಿದಿದ್ದಾರೆ.

Leave a Comment

Your email address will not be published. Required fields are marked *