Ad Widget .

ಮಂಗಳೂರು:ಇ-ಸಿಗರೇಟ್ ಮಾರಾಟ|ಸುಳ್ಯದ ಯುವತಿ ಸೇರಿ ನಾಲ್ವರ ಬಂಧನ

ಸಮಗ್ರ ನ್ಯೂಸ್: ಮಂಗಳೂರು ನಗರದ ಲಾಲ್‌ಬಾಗ್‌ನನಲ್ಲಿ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದ ನಾಲ್ವರರನ್ನು ಬರ್ಕೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಬಂಧಿತರನ್ನು ಮೂಲತಃ ಸುಳ್ಯದ ಸ್ವಾತಿ, ಮಣ್ಣಗುಡ್ಡೆಯ ಶಿವಕುಮಾರ್, ಕುತ್ತಾರ್ ಸಮೀಪದ ಹಸನ್ ಶರೀಫ್ ಮತ್ತು ರಹಮತುಲ್ಲಾ ಎಂಬವರ ವಿರುದ್ಧ ಇ-ಸಿಗರೇಟ್ ನಿರ್ಬಂಧ ಹಾಗೂ ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget . Ad Widget .

ಬಂಧಿತರ ಪೈಕಿ ಇಬ್ಬರಿಗೆ ಠಾಣೆಯಲ್ಲೇ ಜಾಮೀನು ಲಭಿಸಿದ್ದರೆ, ಇನ್ನಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.

ಲಾಲ್‌ಬಾಗ್‌ನ ಸಾಯಿಬಿನ್ ಕಾಂಪ್ಲೆಕ್ಸ್ ನೆಲಮಹಡಿಯ ಮೂರು ಅಂಗಡಿಗಳಿಗೆ ಪೊಲೀಸರು ದಾಳಿ ನಡೆಸಿದಾಗ
ಈ ಅಂಗಡಿಗಳಲ್ಲಿ ಕೇಂದ್ರ ಸರಕಾರ ನಿಷೇಧಿಸಿದ ಇ-ಸಿಗರೇಟ್‌ಗಳನ್ನು ಅಕ್ರಮ ಮಾರಾಟ ಮಾಡಿದ್ದಲ್ಲದೆ ಸರ್ಕಾರದ ಎಚ್ಚರಿಕೆಯನ್ನು ನಮೂದಿಸದೆ ಕಾನೂನು ಬಾಹಿರವಾಗಿ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಸುಮಾರು 2.70 ಲಕ್ಷ ರೂ.ಮೌಲ್ಯದ ಇ-ಸಿಗರೇಟ್ ಹಾಗೂ ವಿದೇಶಿ ಸಿಗರೇಟ್ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳಾದ ನಾಗೇಶ್ ಹಸ್ಲರ್, ರೇಖಾ, ಶೋಭಾ, ಧರ್ಮಾವತಿ, ಸಿಬ್ಬಂದಿಗಳಾದ ರಾಘವೇಂದ್ರ, ಜಲಜಾಕ್ಷಿ, ನಿತೇಶ್, ಮಂಜುನಾಥ್, ಅಜಿತ್ ಕುಮಾರ್, ವಿಜಯ ಕುಮಾರ್, ಚೇತನ್ ಕುಮಾರ್, ರಾಮಲಿಂಗ, ಸಿದ್ದು, ಚಂದ್ರಿಕಾ ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *