ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ.
ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ದಕ್ಷೀಣ ಆಫ್ರಿಕಾದಿಂದಲೇ ಮಾತನಾಡಿರುವ ಪ್ರಧಾನಿ ಮೋದಿ, ನಾವು ನಮ್ಮ ಕಣ್ಣ ಮುಂದೆ ಇಂತಹ ಇತಿಹಾಸ ನೋಡುವುದೇ ಹೆಮ್ಮೆ.
ಈ ಕ್ಷಣ ರಾಷ್ಟ್ರದ ಜೀವತಾವಧಿಯಲ್ಲಿ ಚಿರಂಜೀವಿ ಚೇತನವಾಗಲಿದೆ. ಇದು ಅವಿಸ್ಮರಣಿಯಾವಾಗಿದೆ. ಅದ್ಭೂತಪೂರ್ವಕವಾಗಿದೆ.
ಇದು ನವ ಭಾರತದ ಜಯಘೋಷ. 140 ಕೋಟಿ ಜನರ ಎದೆ ಬಡಿತ ಕ್ಷಣ, ಭಾರತದ ಹೊಸ ವಿಶ್ವಾಸ ಮೂಡಿಸಿದೆ. ಅಮೃತಕಾಲದ ಮೊದಲ ಯಶಸ್ವಿಯಾಗಿದೆ. ಭೂಮಿ ಮೇಲೆ ನಾವು ಸಂಕಲ್ಪ ಮಾಡಿದ್ದೇವೆ. ಚಂದ್ರನಲ್ಲಿ ಸಾಕಾರ ಮಾಡಿದ್ದೇವೆ. ಭಾರತ ಈಗ ಚಂದ್ರನಲ್ಲಿದೆ. ನಾವು 140 ಕೋಟಿ ಜನರಿಗೆ ಕೋಟಿ ಕೋಟಿ ಅಭಿನಂದನೆ ಸಲ್ಲಿಸುತ್ತೇನೆ. ಇದುವರೆಗೆ ಯಾವ ದೇಶವೂ ಚಂದ್ರನ ದಕ್ಷಿಣ ಧ್ರುವ ತಲುಪಿಲ್ಲ.ಭಾರತದ ವಿಜ್ಞಾನಿಗಳು ಅದನ್ನು ಮಾಡಿ ತೋರಿಸಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ ಎಂದರು.